Priyanka Gandhi: ಕಡೆಗೂ ಆಗ್ರಾಕ್ಕೆ ಭೇಟಿ ನೀಡಲು ಪ್ರಿಯಾಂಕಾ ಗಾಂಧಿಗೆ ಅನುಮತಿ

ಈ ಸಂದರ್ಭದಲ್ಲಿ ಹಲವು ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ಗಳು ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಪಿ ತೆಗೆದುಕೊಳ್ಳಲು ಕೂಡ ಮುಂದಾದರು.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

  • Share this:
    ಲಕ್ನೋ (ಅ. 20): ಕೆಲ ದಿನಗಳ ಹಿಂದೆಯಷ್ಟೇ ಲಖೀಂಪುರ್​ ಖೇರಿ ಹಿಂಸಾಚಾರ (lakhimpur kheri violence)  ಸಂಬಂಧ ಗೃಹ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು(Priyanaka Gandhi vadra)  ಉತ್ತರ ಪ್ರದೇಶ ಪೊಲೀಸರು (Uttara pradesh Police) ಇಂದು ಕೂಡ ಕೆಲವು ಗಂಟೆಗಳ ಕಾಲ ಪೊಲೀಸ್​ ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದಾರೆ. ಪೊಲೀಸ್​​ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬವನ್ನು ಮಾತನಾಡಿಲು ಆಗ್ರಾಕ್ಕೆ ಹೊರಟಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಗ್ರಾದಲ್ಲಿ (Agra) ಸೆಕ್ಷನ್​ 144ನೇ ವಿಧಿ ಜಾರಿಯಲ್ಲಿದ್ದಾಗ ಅವರು ಪ್ರಯಾಣಕ್ಕೆ ಮುಂದಾಗಿದ್ದು, ಈ ವೇಳೇ ಅವರನ್ನು ಲಖನೌ ಆಗ್ರಾ ಹೆದ್ದಾರಿಯಲ್ಲಿ ಪೊಲೀಸರು ತಡೆದಿದ್ದಾರೆ. ಆಗ್ರಾದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದು, ಜಿಲ್ಲಾ ಮ್ಯಾಜಿ ಸ್ಟ್ರೇಟರ್​ ಯಾವುದೇ ರಾಜಕೀಯ ವ್ಯಕ್ತಿಗೆ ಪ್ರವೇಶ ನೀಡಬಾರದು ಎಂದು ಆದೇಶ ಹೊರಡಿಸಿದ್ದರು. ಅದರ ಅನ್ವಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಪ್ರಿಯಾಂಕಾ ಗಾಂಧಿ ಕಿಡಿ

    ಈ ಕುರಿತು ಮಾತನಾಡಿದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ನಾನು ಮನೆಯಲ್ಲಿದ್ದರೆ ಸರಿ. ನಾನು ನನ್ನ ಕಚೇರಿಗೆ ಹೋದರೆ ಸರಿ. ಆದರೆ ನಾನು ಬೇರೆ ಕಡೆಗೆ ಹೋದ ಕ್ಷಣ, ಅವರು ಈ ತಮಾಷೆಯನ್ನು ಆರಂಭಿಸುತ್ತಾರೆ. ಏಕೆ? ಎಂದು ಪ್ರಶ್ನಿಸಿದರು. ನಾನು ಕುಟುಂಬವನ್ನು ಭೇಟಿ ಮಾಡಿಯೇ ತೀರುತ್ತೇನೆ ಎಂದರು



    ಉತ್ತರ ಪ್ರದೇಶ ಸರ್ಕಾರ ಹೆದರುತ್ತಿರುವುದು ಏಕೆ?

    ಇದೇ ವೇಳೆ ಅವರು ಸಾಂವಿಧಾನಿಯವಾಗಿ ಓಡಾಡುವ ಹಕ್ಕನ್ನು ತಾನು ಹೊಂದಿದ್ದು, ಅವರು ಬಿಡುಗಡೆ ಮಾಡಿದಾಕ್ಷಣ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದರು
    ಅರುಣ್ ವಾಲ್ಮೀಕಿ ಪೊಲೀಸ್ ಕಸ್ಟಡಿಯಲ್ಲಿ ನಿಧನರಾದರು. ಆತನ ಕುಟುಂಬವು ನ್ಯಾಯಕ್ಕಾಗಿ ಪ್ರಯತ್ನಿಸುತ್ತಿದೆ. ನಾನು ಆ ಕುಟುಂಬವನ್ನು ಭೇಟಿ ಮಾಡಲು ಬಯಸುತ್ತೇನೆ. ಯುಪಿ ಸರ್ಕಾರ ಯಾವುದಕ್ಕಾಗಿ ಹೆದರುತ್ತಿದೆ? ನನ್ನನ್ನು ಏಕೆ ನಿಲ್ಲಿಸಲಾಗಿದೆ? ಭಗವಾನ್ ವಾಲ್ಮೀಕಿ ಜಯಂತಿ ದಿನವಾದ ಇಂದು ಪ್ರಧಾನಿ ಮೋದಿ ಬುದ್ಧನ ಬಗ್ಗೆ ದೊಡ್ಡದಾಗಿ ಮಾತನಾಡಿದ್ದಾರೆ. ಆದರೆ ಇದು ಅವರ ಸಂದೇಶದ ಮೇಲೆ ದಾಳಿ ಪ್ರಯತ್ನ ಎಂದು ಟ್ವೀಟರ್​ನಲ್ಲಿ ಅವರು ಟೀಕಿಸಿದ್ದರು.

    ಇದನ್ನು ಓದಿ: ಅಮೆರಿಕದಲ್ಲಿ ರೈಲಿ​ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ; ವಿಡಿಯೋ ಚಿತ್ರೀಕರಿಸಿದ ಸಹ ಪ್ರಯಾಣಿಕರು

    ಅರುಣ್​ ವಾಲ್ಮೀಕಿ ಕುಟುಂಬ ಭೇಟಿಗೆ ಮುಂದಾದ ಪ್ರಿಯಾಂಕಾ

    ಉತ್ತರ ಪ್ರದೇಶದ ಆಗ್ರಾದ ಜಗದೀಶ್​​ಪುರ ಪೊಲೀಸ್​ ಠಾಣೇಯ ಸ್ಟೋರ್ ರೂಂನಿಂದ 25 ಲಕ್ಷ ಕದ್ದಿರುವ ಆರೋಪದ ಮೇಲೆ ಅರುಣ್​ ವಾಲ್ಮೀಕಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಅವನ ಮನೆಯಲ್ಲಿ ಶೋಧ ನಡೆಸುವ ಸಂದರ್ಭದಲ್ಲಿ ಆತನ ಆರೋಗ್ಯ ಬಿಗಾಡಯಿಸಿತು. ಈ ವೇಳೆ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆತ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದರು.

    ಇದನ್ನು ಓದಿ: ಲಖೀಂಪುರ್‌ ಖೇರಿ ಹತ್ಯಾಕಾಂಡ: ಪೊಲೀಸರಿಗೆ ಛೀಮಾರಿ, ಅ.26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

    ಸೆಲ್ಪಿಗೆ ಮುಗಿಬಿದ್ದ ಪೊಲೀಸ್​ ಕಾನ್ಸ್ಟೇಬಲ್​ಗಳು

    ಈತನ ಕುಟುಂಬವನ್ನು ಭೇಟಿಯಾಗಲು ಮುಂದಾದಾಗ ಪೊಲೀಸರು ತಳ್ಳಾಟ ನೂಕಾಟದೊಂದಿಗೆ ಕಾಂಗ್ರೆಸ್​ ನಾಯಕಿಯನ್ನು ವಶಕ್ಕೆ ಪಡೆದರು. ಇನ್ನು ಈ ಸಂದರ್ಭದಲ್ಲಿ ಹಲವು ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ಗಳು ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಪಿ ತೆಗೆದುಕೊಳ್ಳಲು ಕೂಡ ಮುಂದಾದರು. ಇನ್ನು ನಿನ್ನೆಯಷ್ಟೇ ಕಾಂಗ್ರೆಸ್​ ಪಕ್ಷ 2022 ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 40 ರಷ್ಟು ಟಿಕೆಟ್ ಕಾಯ್ದಿರಿಸುವುದಾಗಿ ಘೋಷಿಸಿದೆ.
    Published by:Seema R
    First published: