• Home
 • »
 • News
 • »
 • national-international
 • »
 • UP Polls: ಅಧಿಕಾರಕ್ಕೆ ಬಂದ 10ದಿನದೊಳಗೆ ರೈತರ ಸಾಲಮನ್ನಾ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​​​​

UP Polls: ಅಧಿಕಾರಕ್ಕೆ ಬಂದ 10ದಿನದೊಳಗೆ ರೈತರ ಸಾಲಮನ್ನಾ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​​​​

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಸರ್ಕಾರ ರಚನೆಯಾದ 10 ದಿನಗಳೊಳಗೆ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಲಾಗುವುದು

 • Share this:

  ಲಕ್ನೋ (ಫೆ. 9):  ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ (Congress) ಇಂದು ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು. ಉದ್ಯೋಗಗಳು ಮತ್ತು ಹಣದುಬ್ಬರವು ದೊಡ್ಡ ಸಮಸ್ಯೆಗಳಾಗಿವೆ. ಸರ್ಕಾರ ರಚನೆಯಾದ 10 ದಿನಗಳೊಳಗೆ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪತ್ರಕರ್ತರ ಮೇಲಿನ ಸುಳ್ಳು ಪ್ರಕರಣಗಳನ್ನೂ ಹಿಂಪಡೆಯಲಾಗುವುದು ಎಂದು ಇದೇ ವೇಳೆ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.


  ವಿದ್ಯುತ್​ ಬಿಲ್​ ಕಡಿತ
  ನಮ್ಮ ಸರ್ಕಾರ ರಚನೆಯಾದ ಕೂಡಲೇ ಛತ್ತೀಸ್‌ಗಢದಂತೆ ಇಲ್ಲಿ ಕೂಡ ರೈತರ ಸಾಲ ಮನ್ನಾ ಮಾಡಲಾಗುವುದು, ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್‌ಗೆ 2500ರೂ , ಕಬ್ಬಿಗೆ 400 ರೂ ರಂತೆ ಖರೀದಿಸಲಾಗುವುದು. ವಿದ್ಯುತ್ ಬಿಲ್ ಅರ್ಧಕ್ಕೆ ಇಳಿಸಲಾಗುವುದು.  ಕೋವಿಡ ಬಾಧಿತ ಬಿಲ್​​ ಮೊತ್ತ ಮನ್ನಾ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ.


  ಕಾಂಗ್ರೆಸ್​​ ನಾವು ಇಲ್ಲಿಯವರೆಗೆ ಮೂರು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ್ದೇವೆ - ಒಂದು ಮಹಿಳೆಯರಿಗೆ ಮತ್ತು ಒಂದು ಯುವಕರಿಗೆ ಮತ್ತು ಇಂದು ಮೂರನೆಯದು. ಸಾರ್ವಜನಿಕರ ಸಲಹೆಯಂತೆ ಇವುಗಳನ್ನು ಬಿಡುಗಡೆ ಮಾಡಲಾಗಿದೆ.


  ಪ್ರಣಾಳಿಕೆ ಪ್ರಮುಖ ಅಂಶ
  ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು
  ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು
  ಕೋವಿಡ್ ಪೀಡಿತ ಕುಟುಂಬಗಳಿಗೆ 25,000 ರೂ
  20 ಲಕ್ಷ ಸರ್ಕಾರಿ ಉದ್ಯೋಗಗಳು
  ಯಾವುದೇ ಕಾಯಿಲೆಗೆ 10 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತದೆ
  ಹಸುವಿನ ಸಗಣಿಯನ್ನು ಕೆಜಿಗೆ 2 ರೂನಂತೆ ಖರೀದಿಸಲಾಗುವುದು
  ಗೋಧನ್ ನ್ಯಾಯ್ ಯೋಜನೆ, ಶಾಲಾ ಅಡುಗೆಯವರಿಗೆ 5,000 ರೂ ವೇತನ ನೀಡಲಾಗುವುದು
  ಮಹಿಳಾ ಪೊಲೀಸರಿಗೆ ಹತ್ತಿರದ ಪೋಸ್ಟಿಂಗ್ ನೀಡಲಾಗುವುದು
  ಕೋವಿಡ್ ಯೋಧರಿಗೆ 50 ಲಕ್ಷ ರೂ ಪರಿಹಾರ ನೀಡಲಾಗುವುದು
  ಅನುಭವ ಮತ್ತು ನಿಯಮಗಳ ಆಧಾರದ ಮೇಲೆ ಅಡ್ಹಾಕ್ ಶಿಕ್ಷಕರು ಮತ್ತು ಶಿಕ್ಷಾ ಮಿತ್ರರನ್ನು ಖಾಯಂಗೊಳಿಸುವುದು.


  ಇದನ್ನು ಓದಿ: ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಸೇನಾಪಡೆ, ಊಫ್​.. ಬದುಕಿತು ಬಡಜೀವ!


  ಸಣ್ಣ ವ್ಯಾಪಾರಿಗಳ ವಿರೋಧಿ ಬಿಜೆಪಿ ಎಂದ ಪ್ರಿಯಾಂಕಾ
  ಇನ್ನು ನಾಳೆಯಿಂದ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಪ್ರಾರಂಭವಾಗಲಿದೆ. 11 ಜಿಲ್ಲೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಮತದಾನದ ಕ್ಷೇತ್ರವಾದ ಬಾಗ್​ಪತ್​ನ ವ್ಯಾಪಾರಿಗಳ ಕಷ್ಟವನ್ನು ಇದೇ ವೇಳೆ ಉಲ್ಲೇಖಿಸಿದರು. ಬಾಗ್‌ಪತ್‌ನಲ್ಲಿ ಸಾಲದ ಹೊರೆಯಿಂದ ಶೂ ವ್ಯಾಪಾರಿಯೊಬ್ಬನ ಆತ್ಮಹತ್ಯೆಗೆ ಯತ್ನಿಸಿದರು. ಇದು ತುಂಬಾ ದುಃಖಕರದ ಸಂಗತಿ. ಆದರೆ, ಯುಪಿಯಾದ್ಯಂತ ಇದೇ ರೀತಿಯ ದೃಶ್ಯಗಳಿವೆ . ಸಣ್ಣ ವ್ಯಾಪಾರಿಗಳು ಇಂದು ತೊಂದರೆಗೀಡಾಗಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಬೆಂಬಲವಿಲ್ಲ, "ಎಂಎಸ್ ಗಾಂಧಿ ವಾದ್ರಾ ಹೇಳಿದರು, ದೊಡ್ಡ ಉದ್ಯಮಿಗಳಿಗೆ ದೊಡ್ಡ ಭರವಸೆಗಳನ್ನು ನೀಡುವುದಕ್ಕಾಗಿ ಕೇಂದ್ರ ಸಿದ್ದವಿದೆ. ಆದರೆ, ಸಣ್ಣ ವ್ಯಾಪಾರಿಗಳಿಗೆ ಏನನ್ನೂ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಣ್ಣ ವ್ಯಾಪಾರಿಗಳು ಮತ್ತು ರೈತರ ಪರವಾಗಿಲ್ಲ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದರು.


  ಇದನ್ನು ಓದಿ: ನಾಳೆ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ; 623 ಅಭ್ಯರ್ಥಿಗಳು ಕಣದಲ್ಲಿ


  ಈ ಹಿಂದೆ ಅಂದರೆ ಡಿಸೆಂಬರ್ ಮತ್ತು ಜನವರಿಯಲ್ಲಿ ಮಹಿಳೆಯರು ಮತ್ತು ಯುವಕರಿಗೆ ಪ್ರಣಾಳಿಕೆಗಳನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್​ ಗಾಂಧಿ ಬಿಡುಗಡೆ ಮಾಡಿದ್ದರು. ಇದೀಗ ಸಾಮಾನ್ಯ ಜನರ ಮೂರನೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.


  ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ನಿನ್ನೆ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಭರವಸೆಗಳನ್ನು ಮತದಾರರಿಗೆ ನೀಡಿವೆ.

  Published by:Seema R
  First published: