ಟ್ವಿಟ್ಟರ್​ಗೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ; ನಿಮಿಷದೊಳಗೆ ಸಾವಿರಾರು ಫಾಲೋವರ್ಸ್​

ಪ್ರಿಯಾಂಕಾ ಇದೀಗ ರಾಜಕೀಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಲಿದ್ದಾರೆ.

Latha CG | news18
Updated:February 11, 2019, 12:59 PM IST
ಟ್ವಿಟ್ಟರ್​ಗೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ; ನಿಮಿಷದೊಳಗೆ ಸಾವಿರಾರು ಫಾಲೋವರ್ಸ್​
ಫೈಲ್​ ಫೋಟೊ: ಪ್ರಿಯಾಂಕ ಗಾಂಧಿ
Latha CG | news18
Updated: February 11, 2019, 12:59 PM IST
ನವದೆಹಲಿ,(ಫೆ.11): ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಕಾಲಿಟ್ಟಿರುವ ಪ್ರಿಯಾಂಕಾ ಗಾಂಧಿ ಇಂದು ಟ್ವಿಟ್ಟರ್​ ಖಾತೆ ತೆರೆದಿದ್ಧಾರೆ. ಟ್ವಿಟ್ಟರ್​ ಅಕೌಂಟ್​ ತೆರೆದ ಕೆಲವು ನಿಮಿಷಗಳಲ್ಲೇ ಸಾವಿರಾರು ಫಾಲೋವರ್ಸ್​​ಗಳು ಪ್ರಿಯಾಂಕಾ ಗಾಂಧಿ ಅವರನ್ನು ಫಾಲೋ ಮಾಡಿದ್ದಾರೆ. ಪ್ರಿಯಾಂಕಾ ಇದೀಗ ರಾಜಕೀಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಲಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಅಖಾಡಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಣ್ಣಿಟ್ಟಿವೆ. ರಾಷ್ಟ್ರೀಯ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರಪ್ರದೇಶ ಪೂರ್ವ) ಜವಾಬ್ದಾರಿ ತೆಗೆದುಕೊಂಡಿರುವ ಪ್ರಿಯಾಂಕಾ ಇಂದು ಉತ್ತರ ಪ್ರದೇಶದ ರ‍್ಯಾಲಿಯಲ್ಲಿ ಭಾಗವಹಿಸಲಿದ್ಧಾರೆ.ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿ ಮೈತ್ರಿಯಿಂದ ಕಾಂಗ್ರೆಸ್​ನ್ನು ಹೊರಗಿಡಲಾಗಿದೆ. ಹೀಗಾಗಿ ಕಾಂಗ್ರೆಸ್​ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶದ ಹಲವು ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಲಾಗಿದೆ. ಹೀಗಾಗಿ ಪ್ರಿಯಾಂಕಾ ತನಗೆ ಉಸ್ತವಾರಿ ವಹಿಸಿರುವ ಉತ್ತರಪ್ರದೇಶದ ಮತಕ್ಷೇತ್ರಗಳಿಗೆ ಇಂದು ಭೇಟಿ ನೀಡಲಿದ್ದಾರೆ. ಕಾಂಗ್ರೆಸ್​ನ ಮೆಗಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಲಿದ್ಧಾರೆ.

ದೆಹಲಿಯಲ್ಲಿ ಜೀನ್ಸ್​, ಬೇರೆ ಕಡೆ ಸೀರೆ- ಕುಂಕುಮ; ಪ್ರಿಯಾಂಕಾ ಗಾಂಧಿ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು.  ಪ್ರಿಯಾಂಕಾ ರಾಜಕೀಯ ಪ್ರವೇಶ ಬಿಜೆಪಿ, ಎಸ್​ಪಿ, ಬಿಎಸ್​ಪಿ ಪಕ್ಷಗಳ ನಿದ್ದೆಗೆಡಿಸಿದೆ. ಅನೇಕ ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಸಹ ನೀಡಿದ್ದರು.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...