HOME » NEWS » National-international » PRIYANKA GANDHI SPENDS NIGHT IN UPS MIRZAPUR SR

ಸಂತ್ರಸ್ತರ ಭೇಟಿ ಮಾಡದೇ ಇಲ್ಲಿಂದ ತೆರಳುವುದಿಲ್ಲ; ಮಿರ್ಜಾಪುರದಲ್ಲಿಯೇ ರಾತ್ರಿ ಕಳೆದ ಪ್ರಿಯಾಂಕ ಗಾಂಧಿ

ಮಧ್ಯರಾತ್ರಿ 12ಗಂಟೆಗೆ ಎಡಿಜಿ ಬರಿಶ್​ ಭೂಷಣ್​, ವಾರಣಾಸಿ ಆಯುಕ್ತ ದೀಪಕ್​ ಆಗರ್​ವಾಲ್​, ಮಿರ್ಜಾಪುರ್​ ಡಿಐಜಿ ಪ್ರಿಯಾಂಕರನ್ನು ಸ್ಥಳದಿಂದ ಹಿಂತಿರುಗುವಂತೆ ತಿಳಿಸಿದರು. ಆದರೆ ಈ ಮಾತಿಗೆ ಜಗ್ಗದ ಪ್ರಿಯಾಂಕ, ಸಂತ್ರಸ್ತ ಕುಟುಂಬವನ್ನು ಭೇಟಿಯಾಗದೇ ಹಿಂತಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Seema.R | news18
Updated:July 20, 2019, 11:58 AM IST
ಸಂತ್ರಸ್ತರ ಭೇಟಿ ಮಾಡದೇ ಇಲ್ಲಿಂದ ತೆರಳುವುದಿಲ್ಲ; ಮಿರ್ಜಾಪುರದಲ್ಲಿಯೇ ರಾತ್ರಿ ಕಳೆದ ಪ್ರಿಯಾಂಕ ಗಾಂಧಿ
ಪ್ರಿಯಾಂಕ ಗಾಂಧಿ
  • News18
  • Last Updated: July 20, 2019, 11:58 AM IST
  • Share this:
ಮಿರ್ಜಾಪುರ (ಜು.20): ಸೋನಭದ್ರಾದ ಆದಿವಾಸಿ ಕುಟುಂಬ ಭೇಟಿ ಮಾಡದೇ ನಾನು ವಾಪಸ್ಸು ತೆರಳುವುದಿಲ್ಲ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮಿರ್ಜಾಪುರ ಬಳಿಯ ಸೊನ​ಭದ್ರಾದದಲ್ಲಿ ಭೂವಿವಾದ ಹಿನ್ನಲೆಯಲ್ಲಿ ಆದಿವಾಸಿ ಕುಟುಂಬದವರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದಲ್ಲದೇ, 19 ಜನ ತೀವ್ರ ಗಾಯಗೊಂಡಿದ್ದರು. ಈ ಘಟನೆ ಬಳಿಕ ಪೊಲೀಸರು ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರು. ಇದೀಗ ಸಂತ್ರಸ್ತರನ್ನು ಭೇಟಿ ಮಾಡಲು ಪ್ರಿಯಾಂಕ ಗಾಂಧಿ ತೆರಳಿದ್ದು, ಪೊಲೀಸರು ತಡೆಯೊಡ್ಡಿದ್ದರು.

ಇತ್ತ ಆದಿವಾಸಿಗಳನ್ನು ಭೇಟಿಮಾಡದೇ ಹೋಗುವುದಿಲ್ಲ ಎಂದು ಪ್ರಿಯಾಂಕ ಪಟ್ಟು ಹಿಡಿದರೂ, ಯೋಗಿ ಸರ್ಕಾರ ಮಾತ್ರ ಅವರ ಪ್ರವೇಶಕ್ಕೆ  ಅನುಮತಿ ನೀಡಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್​ 144ನ್ನು ಜಾರಿಗೊಳಿಸಲಾಗಿದ್ದು, ಕಾಂಗ್ರೆಸ್​ ನಾಯಕರಿಗೆ ಪ್ರವೇಶ ನಿರಾಕರಿಸಲಾಗಿದೆ.

ಮಧ್ಯರಾತ್ರಿ 12ಗಂಟೆಗೆ ಎಡಿಜಿ ಬರಿಶ್​ ಭೂಷಣ್​, ವಾರಣಾಸಿ ಆಯುಕ್ತ ದೀಪಕ್​ ಆಗರ್​ವಾಲ್​, ಮಿರ್ಜಾಪುರ್​ ಡಿಐಜಿ ಪ್ರಿಯಾಂಕರನ್ನು ಸ್ಥಳದಿಂದ ಹಿಂತಿರುವಂತೆ ತಿಳಿಸಿದರು. ಆದರೆ ಈ ಮಾತಿಗೆ ಜಗ್ಗದ್ದ ಪ್ರಿಯಾಂಕ, ಸಂತ್ರಸ್ತ ಕುಟುಂಬವನ್ನು ಭೇಟಿಯಾಗದೇ ಹಿಂತಿರುಗುವುದಿಲ್ಲ ಎಂದಿದ್ದಾರೆ.

ಇದನ್ನು ಓದಿ: ಪ್ರಿಯಾಂಕ ಗಾಂಧಿ ಪೊಲೀಸ್​ ವಶಕ್ಕೆ; ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ; ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಅಲ್ಲದೇ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ಯಾಕೆ ಎಂಬ ಕುರಿತು ಯಾವುದೆ ಕಾಗದ ಪತ್ರಗಳನ್ನು ನೀಡಿಲ್ಲ, ನನ್ನ ವಕೀಲರ ಪ್ರಕಾರ ನನ್ನ ಬಂಧನ ಕಾನೂನು ಬಾಹಿರ. ಅವರ ಉದ್ದೇಶ ನಾನು ಸಂತ್ರಸ್ತರನ್ನು ಭೇಟಿ ಮಾಡದಂತೆ ತಡೆಯುವುದು ಎಂದಿದ್ದಾರೆ.

ನಾನು ಇಲ್ಲಿ ಯಾವುದೇ ಕಾನೂನು ಶಾಂತಿಭಂಗ ಮಾಡಲು ಬಂದಿಲ್ಲ. ಈಗಾಗಲೇ ನಾನು ಬಂದಿರುವ ಕಾರಣವನ್ನು ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

First published: July 20, 2019, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading