Congress Manifesto: ಉ.ಪ್ರ. ಚುನಾವಣೆಗೆ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಕಾಂಗ್ರೆಸ್ ವಿನೂತನ ಕಾರ್ಯತಂತ್ರ

Uttar Pradesh Elections: ಮುಂಬರಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಛಾಪು ಮೂಡಿಸಲು ಕಾಂಗ್ರೆಸ್ ವಿನೂತನ ಹೆಜ್ಜೆ ಇರಿಸಿದೆ. ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೆ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷ ಶೇ. 40ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ಮೀಸಲಿರಿಸಲು ನಿರ್ಧರಿಸಿದೆ.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

  • Share this:
ಲಕ್ನೋ, ಡಿ. 8: ಮುಂದಿನ‌ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress Party) ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ.‌ ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Election Manifesto) ವಿಶಿಷ್ಟವಾದ ಘೋಷಣೆ ಮಾಡುತ್ತದೆ ಮತ್ತು ಶೇಕಡಾ ‌40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೀಗ ಮಹಿಳೆಯರಿಗೆ ಪ್ರತ್ಯೇಕವಾದ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡುತ್ತೆ ಎಂದು ತಿಳಿದುಬಂದಿದೆ. ಈ ಮೂಲಕ ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆಯಲ್ಲಿ 'ಮಹಿಳಾ ಅಸ್ತ್ರ' ಪ್ರಯೋಗಕ್ಕೆ ಮುಂದಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh In charge and AICC General Secretary Priyanka Gandhi Wadhra) ಅವರು, 'ನಾವು ಮಹಿಳಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಮಹಿಳೆಯರಿಗೆ ಅಧಿಕಾರ ನೀಡಲು ಬಯಸುತ್ತೇವೆ. ಮಹಿಳೆಯರ ಅಭಿಪ್ರಾಯದ ಬಗ್ಗೆ ಇರುವ ಸಂಕೋಲೆಗಳನ್ನು ಮುರಿಯುವ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಈ ಮೂಲಕ ರಾಜಕೀಯ ಹಾಗೂ ಸಮಾಜದಲ್ಲಿ ಮಹಿಳೆಯರ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಬಗ್ಗೆ ಇರುವ ಶೋಷಣೆಯನ್ನು ಕೊನೆಗೊಳಿಸಬಹುದು' ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ (Congress Party) ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ)ಯನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸುಚೇತಾ ಕೃಪಲಾನಿ ಮೊದಲ ಮಹಿಳಾ ಸಿಎಂ ಆಗಿದ್ದರು. ಇತರ ದೇಶಗಳು ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿದ್ದಾಗ ನಮ್ಮ ದೇಶವು ಮೊದಲ ಮಹಿಳಾ ಪ್ರಧಾನಿಯನ್ನು ಹೊಂದಿತ್ತು ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಈಗ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶೇಕಡಾ 40ರಷ್ಟು ಪ್ರಾತಿನಿಧ್ಯವನ್ನು ನೀಡುತ್ತಿದೆ. ಮಹಿಳೆಯರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಯಾವಾಗ ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗುತ್ತಾರೆಯೋ ಆಗ ಅದನ್ನು ಕಾಗದದ ಮೇಲೆ ಅಲ್ಲ ನೆಲದ ಮೇಲೆ ಜಾರಿಗೊಳಿಸಬಹುದಾದ ವಾತಾವರಣ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Bipin Rawat ಯಾರು? ಭಾರತದ ಮೊದಲ ಸಿಡಿಎಸ್ ಕುಟುಂಬ ಎಂದೇ ಖ್ಯಾತಿ ಪಡೆದ ಈ ಫ್ಯಾಮಿಲಿ ಹಿನ್ನೆಲೆ ಏನು? ಫುಲ್ ಡೀಟೆಲ್ಸ್ ಇಲ್ಲಿದೆ

ಹೀಗೆ ಮಹಿಳಾ ಅಸ್ತ್ರ ಪ್ರಯೋಗದ ಮೂಲಕ ಇಲ್ಲಿನ ಇತರೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajvadi Party) ಹಾಗೂ ಬಹುಜನ‌ ಸಮಾಜ ಪಕ್ಷ (Bahujan Samaj Party)ಗಳಿಗೆ ಕಾಂಗ್ರೆಸ್ ಹೊಸ ಸವಾಲನ್ನು ಒಡ್ಡಿದೆ. ಇದಲ್ಲದೆ ಈ ಎಲ್ಲಾ ಪಕ್ಷಗಳಿಗೂ ಮೊದಲೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಜೊತೆಗೆ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕೂಡ ಘೋಷಿಸಿದೆ.

ಮಹಿಳೆಯರನ್ನು ಭೇಟಿ ಮಾಡಿರುವ ಪ್ರಿಯಾಂಕಾ:

ಪ್ರತಿಜ್ಞಾ ಯಾತ್ರೆ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರನ್ನು ಭೇಟಿಯಾಗಿದ್ದಾರೆ. ಮಹಿಳಾ‌ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದು ಈ ಬಾರಿಯ ಚುನಾವಣೆಯನ್ನು ಮಹಿಳಾ ಪ್ರಧಾನವನ್ನಾಗಿ ಮಾಡಲು ಮುಂದಾಗಿದೆ. ಬಿಜೆಪಿ, ಎಸ್ ಪಿ ಮತ್ತು ಬಿಎಸ್ ಪಿ ಮೇಲೆ  ಸ್ತ್ರೀ ಅಸ್ತ್ರ ಪ್ರಯೋಗ ಮಾಡಲು ಕಾಂಗ್ರೆಸ್ ತಯಾರಿ ನಡೆಸಿದೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: