HOME » NEWS » National-international » PRIYANKA GANDHI SELF ISOLATES AFTER ROBERT VADRA TESTED POSITIVE FOR COVID 19 SESR

Priyanka Gandhi: ರಾಬರ್ಟ್​ ವಾದ್ರಾಗೆ ಕೊರೋನಾ ಸೋಂಕು; ಕ್ವಾರಂಟೈನ್​ ಆದ ಪ್ರಿಯಾಂಕಾ ಗಾಂಧಿ

ತಮ್ಮ ವೈದ್ಯಕೀಯ ಪರೀಕ್ಷೆ ವೇಳೆ ಕೊರೋನಾ ಸೋಂಕು ನೆಗೆಟಿವ್​ ಬಂದಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ತಾವು ಕ್ವಾರಂಟೈನ್​ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

news18-kannada
Updated:April 2, 2021, 2:55 PM IST
Priyanka Gandhi: ರಾಬರ್ಟ್​ ವಾದ್ರಾಗೆ ಕೊರೋನಾ ಸೋಂಕು; ಕ್ವಾರಂಟೈನ್​ ಆದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ ವಾದ್ರಾ.
  • Share this:
ನವದೆಹಲಿ (ಏ. 2):  ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಡ ರಾಬರ್ಟ್​ ವಾದ್ರಾಗೆ ಕೋವಿಡ್​ ಸೋಂಕು ದೃಢವಾಗಿದೆ. ಈ ಹಿನ್ನಲೆ ಪ್ರಿಯಾಂಕಾ ಗಾಂಧಿ ಕೂಡ ಹೋಮ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ತಮಗೆ ಕೊರೋನಾ ಸೋಂಕು ದೃಢಪಟ್ಟಿದ್ದರ ಕುರಿತು ರಾಬರ್ಟ್​ ವಾದ್ರಾ ಫೇಸ್​ಬುಕ್​ ಮೂಲಕ ಅಧಿಕೃತ ಪಡಿಸಿದ್ದರು. ಲಕ್ಷಣ ರಹಿತ ಕೊರೋನಾ ಸೋಂಕು ಪತ್ತೆಯಾಗಿದ್ದು, ಪರೀಕ್ಷೆ ವೇಳೆ ಕೋವಿಡ್​ ದೃಢಪಟ್ಟಿರುವುದಾಗಿ ತಿಳಿಸಿದ್ದರು. ರಾಬರ್ಟ್​ ವಾದ್ರಾಗೆ ಸೋಂಕು ಪತ್ತೆಯಾದ ಹಿನ್ನಲೆ ಪ್ರಿಯಾಂಕಾ ಗಾಂಧಿ ಕೂಡ ಕ್ವಾರಂಟೈನ್​ಗೆ ಒಳಗಾಗಿದ್ದು, ಈ ಕುರಿತು ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ತಮ್ಮ ವೈದ್ಯಕೀಯ ಪರೀಕ್ಷೆ ವೇಳೆ ಕೊರೋನಾ ಸೋಂಕು ನೆಗೆಟಿವ್​ ಬಂದಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ತಾವು ಕ್ವಾರಂಟೈನ್​ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನಲೆ ತಮ್ಮ ಚುನಾವಣಾ ಪ್ರಚಾರ ಸಮಾವೇಶಗಳನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಮುಂದಿನ ಕೆಲವು ದಿನಗಳ ಕಾಲ ತಾವು ಪ್ರತ್ಯೇಕ ವಾಸದ ಮೊರೆ ಹೋಗುತ್ತಿದ್ದೇನೆ. ಈ ಹಿನ್ನಲೆ ಚುನಾವಣಾ ಕಾರ್ಯಗಳಿಂದ ದೂರ ಸರಿಯುತ್ತಿದ್ದೇನೆ. ಈ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ

ಇದನ್ನು ಓದಿ: ಸುಳ್ಳುಗಳ ಮೇಲೆ ನಿಯಂತ್ರಣ ಸಾಧಿಸಿ; ಡಿಎಂಕೆ- ಕಾಂಗ್ರೆಸ್​ ವಿರುದ್ಧ ಪ್ರಧಾನಿ ವಾಗ್ದಾಳಿಕೇರಳ, ಅಸ್ಸಾಂ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕಿ ನಿರತರಾಗಿದ್ದಾರೆ. ಅಸ್ಸಾಂನಲ್ಲಿ ಸಕ್ರಿಯ ಚುನಾವಣಾ ಪ್ರಚಾರ ನಡೆಸುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಮತಯಾಚನೆಯಲ್ಲಿ ತೊಡಗಿದ್ದಾರೆ. ಅಸ್ಸಾಂನಲ್ಲಿ ಎರಡು ಬಾರಿ ಚುನಾವಣಾ ಪ್ರವಾಸ ನಡೆಸಿರುವ ಅವರು ನಾಳೆಯಿಂದ ಮತ್ತೊಂದು ಸುತ್ತಿನ ಚುನಾವಣಾ ಪ್ರಚಾರ ಸಮಾವೇಶ ನಡೆಸಲು ತಯಾರಿಸಿದ್ದರು. ಅಲ್ಲದೇ ನಾಳೆ ಅವರು ತಮಿಳುನಾಡಿನ ಕಂಚಿಪುರಂನ ಪೆರಂಬದೂರಿಗೆ ಅವರು ಭೇಟಿ ನಿಗದಿಯಾಗಿತ್ತು. ಇದೇ ಸ್ಥಳದಲ್ಲಿ  1991ರಲ್ಲಿ ಪ್ರಿಯಾಂಕಾ ಗಾಂಧಿ ಅವರ ತಂದೆ ರಾಜೀವ್​ ಗಾಂಧಿ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದ್ದರು.
Published by: Seema R
First published: April 2, 2021, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories