ಸತತ ಸೋಲಿನ ಬಳಿಕ ಮೇಜರ್​ ಸರ್ಜರಿಗೆ ಮುಂದಾದ ಕಾಂಗ್ರೆಸ್​; ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ನಾಮ ನಿರ್ದೇಶನ?

ಅನೇಕ ಹಿರಿಯ ಕಾಂಗ್ರೆಸ್​ ನಾಯಕರ ರಾಜ್ಯಸಭಾ ಸದಸ್ಯತ್ವದ ಅವಧಿ ಶೀಘ್ರದಲ್ಲೇ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಹೆಸರನ್ನು ಕೆಳಮನೆಗೆ ನಾಮ ನಿರ್ದೇಶನ ಮಾಡುವುದು ಉತ್ತಮ ಎನ್ನುವ ನಿರ್ಧಾರ ಕಾಂಗ್ರೆಸ್​ನದ್ದು.

  • Share this:
ನವದೆಹಲಿ (ಫೆ.17): 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದರು. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಅವರು ಕೇವಲ ಪ್ರಚಾರಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು. ದೆಹಲಿ ವಿಧಾನಸಭೆ ಚುನಾವಣೆ ಸೋಲಿನಿಂದ ಎಚ್ಚೆತ್ತಿರುವ ಕಾಂಗ್ರೆಸ್​, ಪ್ರಿಯಾಂಕಾ ಗಾಂಧಿಯನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಅಂಬಿಕಾ ಸೋನಿ, ಗುಲಾಮ್​ ನಬಿ ಆಜಾದ್​, ದಿಗ್ವಿಜಯ್​ ಸಿಂಗ್​ ಸೇರಿ ಅನೇಕ ಹಿರಿಯ ಕಾಂಗ್ರೆಸ್​ ನಾಯಕರ ರಾಜ್ಯಸಭಾ ಸದಸ್ಯತ್ವದ ಅವಧಿ ಶೀಘ್ರದಲ್ಲೇ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಹೆಸರನ್ನು ಕೆಳಮನೆಗೆ ನಾಮ ನಿರ್ದೇಶನ ಮಾಡುವುದು ಉತ್ತಮ ಎನ್ನುವ ನಿರ್ಧಾರ ಕಾಂಗ್ರೆಸ್​ನದ್ದು.

ಇನ್ನು, ರಾಜ್ಯಸಭೆಯಲ್ಲಿ ಇರುವುದು ಹಿರಿತಲೆಗಳು ಮಾತ್ರ. ಹೀಗಾಗಿ ಈ ಗುಂಪಿಗೆ ಪ್ರಿಯಾಂಕಾ ಅವರನ್ನು ಸೇರ್ಪಡೆ ಮಾಡುವುದು ಬೇಡ ಎಂದು ಕೆಲ ಕಾಂಗ್ರೆಸ್​ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಯನ್ನು ಎದುರಿಸಲು ರಾಹುಲ್​ ಗಾಂಧಿ ಸೇರಿ ಅನೇಕ ನಾಯಕರಿದ್ದಾರೆ. ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್​ಗೆ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿಯನ್ನು ಕೆಳಮನೆಗೆ ನಾಮನಿರ್ದೇಶನ ಮಾಡುವ ಲೆಕ್ಕಾಚಾರ ಕಾಂಗ್ರೆಸ್​ನದ್ದು.

ಇದನ್ನೂ ಓದಿ: ’ದೇಶದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ’: ಸಿಎಂ ಯೋಗಿ ಆದಿತ್ಯನಾಥ್​​ಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಮುಂದಿನ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿದೆ. ನಂತರ ನಡೆಯುವ ಚುನಾವಣೆಯ ನೇತೃತ್ವವನ್ನು ಪ್ರಿಯಾಂಕಾ ವಹಿಸಿಕೊಳ್ಳುವ ಸಾಧ್ಯತೆ ಇದೆ. ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದರೆ ಪ್ರಿಯಾಂಕಾ ರಾಜಕೀಯ ಬುದಕಿಗೆ ಮೈಲೇಜ್​ ಸಿಗಲಿದೆಯೆ ಅಥವಾ ಇಲ್ಲವೆ ಎನ್ನುವ ಬಗ್ಗೆಯೂ ಯೋಚಿಸುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.
First published: