ರಾಜೀನಾಮೆ ನೀಡುವ ಅಣ್ಣನ ನಿರ್ಧಾರವನ್ನು ನಾನು ಗೌರವಿಸ್ತೀನಿ; ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್​ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಶೀಲ್ ಕುಮಾರ್​ ಶಿಂಧೆ, ಮುಕುಲ್ ವಾಸ್ನಿಕ್ ಅವರ ಹೆಸರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ. ಆ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗಿಲ್ಲ.

Sushma Chakre | news18
Updated:July 4, 2019, 11:26 AM IST
ರಾಜೀನಾಮೆ ನೀಡುವ ಅಣ್ಣನ ನಿರ್ಧಾರವನ್ನು ನಾನು ಗೌರವಿಸ್ತೀನಿ; ಪ್ರಿಯಾಂಕಾ ಗಾಂಧಿ
ರಾಹುಲ್ ಗಾಂಧಿ- ಪ್ರಿಯಾಂಕಾ ಗಾಂಧಿ
  • News18
  • Last Updated: July 4, 2019, 11:26 AM IST
  • Share this:
ನವದೆಹಲಿ (ಜು.4): ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಹುಲ್ ಗಾಂಧಿಯವರ ಮನವೊಲಿಸಲು ರಾಜ್ಯ, ಕೇಂದ್ರ ಕಾಂಗ್ರೆಸ್​ ನಾಯಕರು ಪ್ರಯತ್ನಪಟ್ಟಿದ್ದರಾದರೂ ಅದು ಯಶಸ್ವಿಯಾಗಿರಲಿಲ್ಲ. ತಮ್ಮ ಟ್ವಿಟ್ಟರ್​ ಖಾತೆಯಿಂದ ಕೂಡ ಕಾಂಗ್ರೆಸ್​ ಅಧ್ಯಕ್ಷ ಎಂಬ ಪದವನ್ನು ಡಿಲೀಟ್​ ಮಾಡಿರುವ ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್​ ಸದಸ್ಯ ಎಂಬ ಹುದ್ದೆಯನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಇನ್ನು, ತನ್ನ ಅಣ್ಣನ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ನೀನು ತೆಗೆದುಕೊಂಡ ನಿರ್ಧಾರ ತೆಗೆದುಕೊಳ್ಳಲು ಕೆಲವೇ ಕೆಲವರಿಗೆ ಮಾತ್ರ ಧೈರ್ಯ ಇರುತ್ತದೆ. ನಿನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ. ಜೊತೆಗೆ, ರಾಹುಲ್ ಗಾಂಧಿಯವರ 4 ಪುಟಗಳ ರಾಜೀನಾಮೆ ಪತ್ರದ ಟ್ವೀಟ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ.ರಾಹುಲ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಆಯ್ಕೆ ಸಾಧ್ಯತೆಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡಲೇ ಸಭೆ ನಡೆಸಿ ಪಕ್ಷದ ಹೊಸ ಅಧ್ಯಕ್ಷರನ್ನು ನಿರ್ಧರಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದರು. ನಾನು ಇನ್ನುಮುಂದೆ ಕಾಂಗ್ರೆಸ್​ ಅಧ್ಯಕ್ಷನಲ್ಲ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದು ರಾಹುಲ್ ಹೇಳಿದ್ದರು.  ಕಾಂಗ್ರೆಸ್​ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಶೀಲ್ ಕುಮಾರ್​ ಶಿಂಧೆ, ಮುಕುಲ್ ವಾಸ್ನಿಕ್ ಅವರ ಹೆಸರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ. ಆ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗಿಲ್ಲ. ಆದಷ್ಟು ಶೀಘ್ರದಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಮೋತಿಲಾಲ್ ವೋರಾ ಹಂಗಾಮಿ ಅಧ್ಯಕ್ಷರಾಗಿರುತ್ತಾರೆ.

 

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ