ರಾಹುಲ್ ಕೊಠಡಿ ಪಕ್ಕದಲ್ಲೇ ಪ್ರಿಯಾಂಕಾ ಗಾಂಧಿ ನೂತನ ಕಚೇರಿ

2016ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ರಾಹುಲ್​ಗೆ ಇದೇ ಕೊಠಡಿಯನ್ನು ನೀಡಲಾಗಿತ್ತು. ಇದೀಗ, ಆ ಕೊಠಡಿ ಪ್ರಿಯಾಂಕಾ ಪಾಲಾಗಿದೆ. ಹಾಗೇ, ಹಾಲಿ ರಾಹುಲ್​ಗೆ ನೀಡಲಾಗಿರುವ ಕೊಠಡಿಯ ಪಕ್ಕದಲ್ಲೇ ಪ್ರಿಯಾಂಕಾ ಕೊಠಡಿಯೂ ಇರಲಿದೆ.

sushma chakre | news18
Updated:February 5, 2019, 3:11 PM IST
ರಾಹುಲ್ ಕೊಠಡಿ ಪಕ್ಕದಲ್ಲೇ ಪ್ರಿಯಾಂಕಾ ಗಾಂಧಿ ನೂತನ ಕಚೇರಿ
ಪ್ರಿಯಾಂಕಾ ಗಾಂಧಿ- ರಾಹುಲ್ ಗಾಂಧಿ
  • News18
  • Last Updated: February 5, 2019, 3:11 PM IST
  • Share this:
ನವದೆಹಲಿ (ಫೆ. 5): ಸಹೋದರ ರಾಹುಲ್ ಗಾಂಧಿ ಬೆನ್ನಲ್ಲೇ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ಗಾಂಧಿಗೆ ಇದೀಗ ಅಣ್ಣನ ಆಫೀಸ್​ ಕೊಠಡಿಯ ಪಕ್ಕದಲ್ಲೇ ಕೊಠಡಿ ನೀಡಲಾಗಿದೆ.

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಇಂದು ಕೊಠಡಿಯನ್ನು ನೀಡಲಾಗಿದ್ದು, ನವದೆಹಲಿಯಲ್ಲಿರುವ ಕಾಂಗ್ರೆಸ್​ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿ ಕೊಠಡಿಯ ಪಕ್ಕದಲ್ಲೇ ತಂಗಿ ಪ್ರಿಯಾಂಕಾಗೂ ಕೊಠಡಿಯನ್ನು ನೀಡಲಾಗಿದೆ. ನಿನ್ನೆಯಷ್ಟೇ ಅಮೆರಿಕದಿಂದ ಹಿಂತಿರುಗಿರುವ ಪ್ರಿಯಾಂಕಾ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಿಜೆಪಿ ಚುನಾವಣೆ ಗೆದ್ದದ್ದು ನನ್ನಿಂದ: ಅಣ್ಣಾ ಹಜಾರೆ ನೋವಿನ ಮಾತು

ಅಂದಹಾಗೆ ಇದಕ್ಕೂ ವಿಶೇಷವಾದ ವಿಷಯವೇನೆಂದರೆ, 2016ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ರಾಹುಲ್​ಗೆ ಇದೇ ಕೊಠಡಿಯನ್ನು ನೀಡಲಾಗಿತ್ತು. ಇದೀಗ, ಆ ಕೊಠಡಿ ಪ್ರಿಯಾಂಕಾ ಪಾಲಾಗಿದೆ. ಪ್ರಸ್ತುತ ರಾಹುಲ್ ಗಾಂಧಿಗೆ ನೀಡಲಾಗಿರುವ ಕೊಠಡಿಯೂ ಅದರ ಪಕ್ಕದಲ್ಲೇ ಇದೆ. ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರಿರುವ ಹಿಂದಿ ಮತ್ತು ಇಂಗ್ಲಿಷ್​ ಭಾಷೆಯ ನಾಮಫಲಕವನ್ನು ಆ ಕೊಠಡಿಯ ಮುಂಭಾಗದಲ್ಲಿ ಹಾಕಲಾಗಿದ್ದು, ಇಂದಿನಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಅಧಿಕಾರ ಸ್ವೀಕರಿಸಲಿದ್ದಾರೆ ಪ್ರಿಯಾಂಕಾ ಗಾಂಧಿ!

ಇಂದು ಪ್ರಯಾಗರಾಜ್​ಗೆ ತೆರಳಿ ಕುಂಭಮೇಳದಲ್ಲಿ ಪಾಲ್ಗೊಂಡು, ಸಂಗಮದಲ್ಲಿ ಪವಿತ್ರಸ್ನಾನ ಮಾಡಿದ ನಂತರ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಹಾಗೇ, ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿರುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಮತ್ತು ಟ್ವಿಟ್ಟರ್​ಗಳಲ್ಲೂ ಸಕ್ರಿಯರಾಗಲಿದ್ದಾರೆ. ಲಕ್ನೋದಲ್ಲಿರುವ ನೆಹರೂ ಭವನ ಎಂದು ಕರೆಯಲ್ಪಡುವ ಕಾಂಗ್ರೆಸ್​ ಕಚೇರಿಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಏಟಿಗೆ ತಿರುಗೇಟು; ಸಿಬಿಐಗೆ ನೋಟಿಸ್​ ನೀಡಿದ ಪಶ್ಚಿಮ ಬಂಗಾಳ ಪೊಲೀಸರುಅಜ್ಜಿಯ ಕೊಠಡಿಯಲ್ಲೇ ಮೊಮ್ಮಗಳ ಹೊಸ ಜವಾಬ್ದಾರಿ ಆರಂಭ:

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶ ಪೂರ್ವ ಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವುದರಿಂದ ಲಕ್ನೋ ಕಚೇರಿಯಿಂದಲೇ ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಗಮನಹರಿಸಲಿದ್ದಾರೆ. ಲಕ್ನೋ ಕಚೇರಿಯಲ್ಲಿಯೂ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಳಸುತ್ತಿದ್ದ ಕಚೇರಿಯನ್ನೇ ಪ್ರಿಯಾಂಕಾ ಗಾಂಧಿ ಈಗ ಬಳಸಲಿದ್ದಾರೆ. ಈ ಮೂಲಕ ಅಜ್ಜಿಯ ಕೊಠಡಿಯಲ್ಲೇ ಮೊಮ್ಮಗಳು ಪ್ರಿಯಾಂಕಾ ಲೋಕಸಮರಕ್ಕೆ ತಂತ್ರ ರೂಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಠಡಿಯನ್ನು ವಾಸ್ತುಪ್ರಕಾರ ಸಿದ್ಧಪಡಿಸಲಾಗುತ್ತಿದೆ.

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ