• Home
  • »
  • News
  • »
  • national-international
  • »
  • UP Elections: ಅಣ್ಣನ ಕ್ಷೇತ್ರ ಅಮೇಥಿಯಲ್ಲಿ ಇಂದು ತಂಗಿ ಪ್ರಿಯಾಂಕಾ ಗಾಂಧಿ ಪ್ರಚಾರ

UP Elections: ಅಣ್ಣನ ಕ್ಷೇತ್ರ ಅಮೇಥಿಯಲ್ಲಿ ಇಂದು ತಂಗಿ ಪ್ರಿಯಾಂಕಾ ಗಾಂಧಿ ಪ್ರಚಾರ

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಇಂದು 4ನೇ ಹಂತದಲ್ಲಿ 9 ಜಿಲ್ಲೆಗಳ 60 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ 59 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 51 ಮತ್ತು ಅದರ ಮಿತ್ರಪಕ್ಷ ಅಪನಾ ದಳ 1 ಸ್ಥಾನ ಗೆದ್ದಿದ್ದವು. 

  • Share this:

ನವದೆಹಲಿ, ಫೆ. 23: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು ಚುನಾವಣಾ ಕಣದ ಬಿಸಿ‌ ಈಗ ಹೆಚ್ಚಾಗಿದೆ. ಇತರೆ ರಾಜ್ಯಗಳ ಚುನಾವಣಾ ಕೆಲಸ ಕೂಡ ಮುಗಿದಿದ್ದು ಘಟಾನುಘಟಿ ನಾಯಕರು ಈಗ ಉತ್ತರ ಪ್ರದೇಶದ ಕಡೆ ಗಮನ ಹರಿಸಿದ್ದಾರೆ.  ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress Incharge and AICC General Secretary Priyanka Gandhi) ಅವರು ಇಂದು‌ ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ.


ಅಣ್ಣನ ಕ್ಷೇತ್ರದಲ್ಲಿ ತಂಗಿ ಪ್ರಚಾರ


ಎಐಸಿಸಿಯ ಮಾಜಿ ಅಧ್ಯಕ್ಷರೂ ಆದ ಸಹೋದರ ರಾಹುಲ್ ಗಾಂಧಿ (Rahul Gandhi) ಅವರು ಹಿಂದೆ ಲೋಕಸಭೆಗೆ ಪ್ರತಿನಿಧಿಸುತ್ತಿದ್ದ ಅಮೇಥಿಯಲ್ಲಿ ಇಂದು ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ  12ಕ್ಕೆ ಜಗದೀಶ್ ಪುರದಲ್ಲಿ ಮತ್ತು 1.30ಕ್ಕೆ ಗೌರಿಗಂಜ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.‌


ಮಧ್ಯಾಹ್ನ 3ಗಂಟೆಗೆ ಅಮೇಥಿ ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ರಾಜೀವ್ ಗಾಂಧಿ ಪ್ರತಿಮೆವರೆಗೆ ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಜಗದೀಶ್ ಪುರ್ ಚೌರಾಹದಿಂದ ಸಲೂನ್ ಮೊಡ್ ವರೆಗೆ ಮನೆ ಮನೆ ಪ್ರಚಾರ ಮಾಡಲಿದ್ದಾರೆ. ಬಳಿಕ 5.30ಕ್ಕೆ ನಸೀರಾಬಾದ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.


ಇದನ್ನೂ ಓದಿ:  UP Elections: 4ನೇ ಹಂತದ ಮತದಾನ, ಬಿಜೆಪಿ ಪಾಲಿಗೆ ಆಗುವುದೇ ವರದಾನ?


ಯುಪಿಯಲ್ಲಿ ಇಂದು ನಾಲ್ಕನೇ ಹಂತದ ಮತದಾನ


ಉತ್ತರ ಪ್ರದೇಶದಲ್ಲಿ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.‌ ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸುತ್ತಿದೆ. ಈ ಬಾರಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲು ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮತದಾನದ ಪ್ರಕ್ರಿಯೆ ನಡೆಯಬೇಕಿರುವುದರಿಂದ ಮತದಾನದ ಅವಧಿಯನ್ನು ಬೆಳಗ್ಗೆ 8ರಿಂದ ಸಂಜೆ 5ಗಂಟೆಯ ಬದಲಿಗೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ನಿಗಧಿ ಮಾಡಲಾಗಿದೆ. ಅಂದರೆ 1 ಗಂಟೆ ಹೆಚ್ಚು ಸಮಯ ನೀಡಲಾಗಿದೆ.


SP-RLD ಪರವಾಗಿದ್ದ ಮೊದಲ 3 ಹಂತಗಳು


ಪಶ್ಚಿಮ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು‌ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತ್ತು ಫೆಬ್ರವರಿ 14ರಂದು 9 ಜಿಲ್ಲೆಗಳ 55 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.‌ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಪ್ರಬಾಲ್ಯ ಹೆಚ್ಚಾಗಿರುವುದರಿಂದ ಮತ್ತು ಜಾಟ್ ಸಮುದಾಯದ ಪಕ್ಷ ಎಂದೇ ಕರೆಯಲ್ಪಡುವ ರಾಷ್ಟ್ರೀಯ ಲೋಕದಳವು ಈ ಬಾರಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಮೊದಲೆರಡು ಹಂತದ ಮತದಾನದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳು‌ ಹೆಚ್ಚಿವೆ ಎನ್ನಲಾಗುತ್ತಿದೆ.


ಇದನ್ನೂ ಓದಿ:  Manipur Election 2022: ಮಣಿಪುರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧ, ಮತದಾರನ ಓಲೈಕೆಗೆ ಬಂದ್ರು ಪ್ರಧಾನಿ ಮೋದಿ!


ಫೆಬ್ರವರಿ 20ರಂದು 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮೂರನೇ ಹಂತದ ಮತದಾನದಲ್ಲೂ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಮೂರನೇ ಹಂತದಲ್ಲಿ ಮತದಾನ ನಡೆದ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು.


ನಾಲ್ಕನೇ ಹಂತ ಬಿಜೆಪಿಗೆ ನಿರ್ಣಾಯಕ


ಈ ಎಲ್ಲಾ ಹಿನ್ನೆಲೆಯಲ್ಲಿ 4ನೇ ಹಂತದ ಮತದಾನ ಬಿಜೆಪಿಗೆ ನಿರ್ಣಾಯಕವಾದುದಾಗಿದೆ. 4ನೇ ಹಂತದಲ್ಲಿ 9 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ 59 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 51 ಮತ್ತು ಅದರ ಮಿತ್ರಪಕ್ಷ ಅಪನಾ ದಳ 1 ಸ್ಥಾನ ಗೆದ್ದಿದ್ದವು. ಸಮಾಜವಾದಿ ಪಕ್ಷ 4, ಕಾಂಗ್ರೆಸ್ ಮತ್ತು ಬಿಎಸ್‌ಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. 9 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು.


ಲಕ್ನೋ ಜಿಲ್ಲೆಯ 9 ಸ್ಥಾನಗಳ ಪೈಕಿ 8 ಅನ್ನು ಗೆದ್ದಿತ್ತು. ಹರ್ದೋಯ್ ಜಿಲ್ಲೆಯಲ್ಲಿ 8ರ ಪೈಕಿ 7, ಸೀತಾಪುರ ಜೆಲ್ಲೆಯಲ್ಲಿ 9ರ ಪೈಕಿ 7 ಬಿಜೆಪಿ ಪಾಲಾಗಿದ್ದವು. ಇಂಥ ಭದ್ರಕೋಟೆಯನ್ನು ಆಡಳಿತವಿರೋಧಿ ಅಲೆಯ ಕಾರಣಕ್ಕೆ ಬಿಜೆಪಿ ಮತ್ತೊಮ್ಮೆ ಉಳಿಸಿಕೊಳ್ಳುವುದೇ ಎಂಬ ಪ್ರಶ್ನೆ ಎದುರಾಗಿದೆ.


ಲಖೀಂಪುರ್ ಖೇರಿ, ಉನ್ನಾವೋ ಜಿಲ್ಲೆಗಳಲ್ಲೂ ಮತದಾನ


ಇತ್ತೀಚೆಗೆ ನಡೆದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ ಕೊಂದರು ಎಂದು ಹೇಳಲಾಗುವ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಹಾಗೂ ದಲಿತ ಯುವತಿಯನ್ನು ಹತ್ಯೆ ಮಾಡಿ ಅವರ ಕುಟುಂಬದವರಿಗೆ ಶವಸಂಸ್ಕಾರ ಮಾಡುವುದಕ್ಕೂ ಅವಕಾಶ ನೀಡದಿದ್ದ ಉನ್ನಾವೋ ಜಿಲ್ಲೆಗಳಲ್ಲೂ ನಾಳೆ ಮತದಾನ ನಡೆಯಲಿದೆ.


ಈ ಎರಡು ಘಟನೆಗಳಿಂದ ರೈತರು ಮತ್ತು ದಲಿತರು ಬಿಜೆಪಿ ವಿರುದ್ಧ ಬಂಡೆದ್ದಿರುವುದರಿಂದ ಬಿಜೆಪಿಗೆ ಲಖೀಂಪುರ್ ಖೇರಿ ಹಾಗೂ ಉನ್ನಾವೋದ ಪಕ್ಷದ ಜಿಲ್ಲೆಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದು ಎಷ್ಟು ಪರಿಣಾಮಕಾರಿ ಆಗಿರಲಿದೆ ಎಂಬುದು ಫಲಿತಾಂಶ ಬಂದ ಬಳಿಕ ಗೊತ್ತಾಗಲಿದೆ.

Published by:Mahmadrafik K
First published: