Ravidas Jayanti: ಸಂತ ರವಿದಾಸರ​ ನೆನೆದ ರಾಜಕೀಯ ನಾಯಕರು: ಲಂಗರ್​ ಸೇವೆಯಲ್ಲಿ ಭಾಗಿಯಾದ Priyanka, Rahul Gandhi

ಗುರು ರವಿದಾಸ್​ ಜನ್ಮ ದಿನದ ಹಿನ್ನಲೆ ನಡೆಯುವ ಸಾಮೂಹಿಕ ಅಡುಗೆ ಕಾರ್ಯವಾದ 'ಲಂಗರ್' ನಲ್ಲಿ ಕಾಂಗ್ರೆಸ್​​ ನಾಯಕರು ಭಾಗಿಯಾಗಿ ಗಮನ ಸೆಳೆದರು.

ರವಿದಾಸ್​​ ಜಯಂತಿಯಲ್ಲಿ ಪ್ರಿಯಾಂಕಾ, ರಾಹುಲ್​ ಗಾಂಧಿ

ರವಿದಾಸ್​​ ಜಯಂತಿಯಲ್ಲಿ ಪ್ರಿಯಾಂಕಾ, ರಾಹುಲ್​ ಗಾಂಧಿ

 • Share this:
  ವಾರಾಣಾಸಿ (ಫೆ. 16):  ಉತ್ತರ ಪ್ರದೇಶ, ಪಂಜಾಬ್​ ಸೇರಿದಂತೆ ಪಂಚರಾಜ್ಯ ಚುನಾವಣಾ ಕಾವಿನ ನಡುವೆಯೂ ಇಂದು ರಾಜಕೀಯ ನಾಯಕರು ದಲಿತ ಸಂತ ಸಂತ ಗುರು ರವಿದಾಸ್ (Ravidas Jayanti) ಅವರ ನೆನೆದು ನಮನ ಸಲ್ಲಿಸಿದ್ದಾರೆ. ಇಂದು ಗುರು ರವಿದಾಸ್​ ಜನ್ಮ ದಿನದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ (PM Modi),  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanth)​, ಕಾಂಗ್ರೆಸ್​ ನಾಯಕರಾದ ಪ್ರಿಯಾಂಕಾ ಗಾಂಧಿ (Priyanka Gandhi), ರಾಹುಲ್​ ಗಾಂಧಿ (Rahul Gandhi) ರವಿದಾಸ್​ ಜನ್ಮದಿನದ ಆಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಗುರು ರವಿದಾಸ್​ ಅವರ ಜನ್ಮ ಸ್ಥಳವಾದ ವಾರಣಾಸಿಯ (Varanasi) ಸರ್ ಗೋವರ್ಧನಪುರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

  ಸಾಮೂಹಿಕ ಭೋಜನದಲ್ಲಿ ಭಾಗಿಯಾದ ಕಾಂಗ್ರೆಸ್​ ನಾಯಕರು
  ಇನ್ನು ಗುರು ರವಿದಾಸ್​ ಜನ್ಮ ದಿನದ ಹಿನ್ನಲೆ ನಡೆಯುವ ಸಾಮೂಹಿಕ ಅಡುಗೆ ಕಾರ್ಯವಾದ 'ಲಂಗರ್' ನಲ್ಲಿ ಕಾಂಗ್ರೆಸ್​​ ನಾಯಕರು ಭಾಗಿಯಾಗಿ ಗಮನ ಸೆಳೆದರು. ಇದೇ ಮೊದಲ ಬಾರಿಗೆ ಸಂತ ರವಿದಾಸ್ ಜಯಂತಿಯಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಯಾಗಿ ಬಂದು ಲಂಗರ್ ಹಾಲ್‌ನಲ್ಲಿ ಭಕ್ತರಿಗೆ ಸೇವೆ ಸಲ್ಲಿಸಿದರು. ಅಲ್ಲದೇ ಭಕ್ತರಿಗೆ ತಮ್ಮ ಕೈಯಿಂದಲೇ ಅಡುಗೆ ಬಡಿಸಿ ಗಮನ ಸೆಳೆದರು.

  ಇದನ್ನು ಓದಿ: ಗುರು ರವಿದಾಸ್ ವಿಶ್ರಮ ಧಾಮ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ

  ಇದಕ್ಕೂ ಮುನ್ನ ಟ್ವೀಟ್​ ಮಾಡಿದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾಸ್ರಾ ಪ್ರತಿ ವರ್ಷದಂತೆ ಈ ದಿನವೂ ವಾರಣಾಸಿಯಲ್ಲಿರುವ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಜಿ ಮಹಾರಾಜ್ ಅವರ ಜನ್ಮಸ್ಥಳಕ್ಕೆ ನಮನ ಸಲ್ಲಿಸುತ್ತೇನೆ ಇಂದು ನನ್ನ ಸಹೋದರನೊಂದಿಗೆ ಹೋಗುವುದು ಇನ್ನಷ್ಟು ಸಂತೋಷವಾಗಿದೆ ಎಂದು ತಿಳಿಸಿದರು.

  ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಗುರು ದರ್ಬಾರ್‌ನಲ್ಲಿ ಪಾಲ್ಗೊಂಡು ಸಾಮೂಹಿಕ ಭೋಜನದಲ್ಲಿ ಭಾಗಿಯಾದರು.

  ಪ್ರಾರ್ಥನೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿ

  ಇಂದು ಬೆಳಗ್ಗೆ ಪಂಜಾಬ್​ ಚುನಾವಣಾ ಪ್ರಚಾರಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಭಕ್ತರೊಂದಿಗೆ ಸಂವಾದ ನಡೆಸಿದರು. ಅಲ್ಲದೇ ದೇವಸ್ಥಾನದಲ್ಲಿ 'ಶಾಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿ ಗಮನಸೆಳೆದರು. ಈ ವೇಳೆ ಮಾತನಾಡಿದ ಅವರು ತಮ್ಮ ಸರ್ಕಾರವು ಪ್ರತಿ ಹೆಜ್ಜೆ ಮತ್ತು ಯೋಜನೆಯಲ್ಲಿ ಗುರು ರವಿದಾಸ್ ಅವರ ಚೈತನ್ಯವನ್ನು ತುಂಬಿದೆ ಎಂದರು.

  ಇದನ್ನು ಓದಿ: ಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಬೆಂಗಳೂರು ಮೂಲದ ಅಪರಿಚಿತ ವ್ಯಕ್ತಿ

  ಗುರು ರವಿದಾಸ್​ ಜನ್ಮದಿನದ ಹಿನ್ನಲೆ ಪಂಜಾಬ್ ಚುನಾವಣೆ ಮುಂದೂಡಿಕೆ
  ಗುರು ರವಿದಾಸ್ ಜನ್ಮದಿನವನ್ನು ಗಮನದಲ್ಲಿಟ್ಟುಕೊಂಡು ಭಾರತದ ಚುನಾವಣಾ ಆಯೋಗ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಮುಂದೂಡಿತು. ಫೆಬ್ರವರಿ 14 ರಂದು ನಡೆಯಬೇಕಿದ್ದ ಚುನಾವಣೆಯನ್ನು ಫೆಬ್ರವರಿ 20 ಕ್ಕೆ ನಿಗದಿಯಾಗಿತ್ತು. ಪಂಜಾಬ್​ನಿಂದ ಅಧಿಕ ಭಕ್ತರು ಗುರು ರವಿದಾಸ್​ ಅವರ ಜಯಂತಿ ಹಿನ್ನಲೆ ವಾರಣಾಸಿಗೆ ತೆರಳುವುದರಿಂದ ಜನರ ಮತದಾನಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನಲೆ ಮತದಾನ ಮುಂದೂಡಬೇಕು ಎಂದು ಪಂಜಾಬ್​ನಲ್ಲಿನ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಹಿನ್ನಲೆ ಫೆ 20ರಂದು ಏಕ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.

  15-16ನೇ ಶತಮಾನದ ಸಂತ
  15-16 ನೇ ಶತಮಾನದ ಸಮಾಜ ಸುಧಾರಕನಾಗಿದ್ದ ಗುರು ರವಿದಾಸ್​ ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನತೆ ಮತ್ತು ಘನತೆಗಾಗಿ ಪ್ರತಿಪಾದಿಸಿದ ಸಂತ ರವಿದಾಸ್ ಅವರನ್ನು ದಲಿತ ಸಂತ ಎಂದು ಪರಿಗಣಿಸಲಾಗಿದೆ. ಅವರು ಲಿಂಗ ಸಮಾನತೆಯನ್ನು ಉತ್ತೇಜಿಸಿದರು ಲಿಂಗ ಅಥವಾ ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸಿದರು.
  Published by:Seema R
  First published: