‘ಹಾರ್ದಿಕ್​​ ಪಟೇಲ್​​​ಗೆ ಬಿಜೆಪಿ ಪದೇಪದೇ ಕಿರುಕುಳ ನೀಡುತ್ತಿದೆ‘: ಪ್ರಿಯಾಂಕಾ ಗಾಂಧಿ ಆರೋಪ

ಮೊದಲಿಗೆ ಸ್ಥಳೀಯ ಅಪರಾಧ ಶಾಖೆ ಸಲ್ಲಿಸಿದ ದೇಶದ್ರೋಹ ಪ್ರಕರಣದಲ್ಲಿ ಹಾರ್ದಿಕ್​​ ಪಟೀಲ್​​ ಬಂಧನವಾಗಿತ್ತು. ನಂತರ 2016ರ ಜುಲೈನಲ್ಲಿ ಕೋರ್ಟ್​ ಜಾಮೀನು ನೀಡಿತ್ತು. ಈ ಮಧ್ಯೆಯೇ 2019ರ ಲೋಕಸಭಾ ಚುನಾವಣೆಗೆ ಮುನ್ನ ಹಾರ್ದಿಕ್​​ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

 • Share this:
  ನವದೆಹಲಿ(ಜ.19): ಗುಜರಾತ್​​​​ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಮತ್ತು ಕಾಂಗ್ರೆಸ್​​ ಮುಖಂಡ ಹಾರ್ದಿಕ್​​​​ ಪಟೇಲ್​​​ಗೆ ಬಿಜೆಪಿ ಪದೇಪದೇ ಕಿರುಕುಳ ನೀಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಪ್ರಿಯಾಂಕಾ ಗಾಂಧಿ, ಪಟೇಲ್ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ರೈತರ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಹೋರಾಟಗಾರನಿಗೆ ಬಿಜೆಪಿ ಪ್ರತಿನಿತ್ಯ ಕಿರುಕುಳ ನೀಡುತ್ತಿದೆ ಎಂದು ಕುಟುಕಿದ್ದಾರೆ.

  ಹಾರ್ದಿಕ್​​ ಪಟೇಲ್​​ ಬಡವರ ಪರ ದನಿಯೆತ್ತಿದ್ದಾರೆ. ತಮ್ಮ ಸಮುದಾಯದ ಯುವಕರಿಗೆ ಉದ್ಯೋಗ ಕೊಡಿಸಬೇಕೆಂದು ಬೀದಿಗಿಳಿದಿದ್ಧಾರೆ. ಪಾಟೀದಾರ್​​ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಹಾರ್ದಿಕ್​​ ಪಾಟೀಲ್​​ಗೆ ದೇಶದ್ರೋಹಿ ಎನ್ನುತ್ತಿದೆ ಎಂದು ಟ್ವೀಟ್ ಮೂಲಕ ಪ್ರಿಯಾಂಕಾ ದೂರಿದ್ದಾರೆ.

  ದೇಶದ್ರೋಹ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್​​ರನ್ನು ಅಹಮದಾಬಾದ್‌ ಜಿಲ್ಲೆಯ ವೀರಂಗಾಂನಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದರು. ಪಟೇಲ್ ಬಂಧನವನ್ನು ಡಿಸಿಪಿ ರಾಜ್‌ದೀಪ್ ಸಿಂಗ್ ಜಲಾ ಎಂಬುವರು  ದೃಢಪಡಿಸಿದ್ದರು. ಅಹಮದಾಬಾದ್‌ನ ಸೆಷನ್ಸ್‌ ಕೋರ್ಟ್‌ ವಾರಂಟ್‌ ಜಾರಿ ಮಾಡಿದ ಬಳಿಕವೇ ಹಾರ್ದಿಕ್‌ರನ್ನು ಬಂಧಿಸಲಾಗಿತ್ತು.

  ಇದನ್ನೂ ಓದಿ: ಮೊದಲ ಬಾರಿಗೆ ಮುಸ್ಲಿಮೇತರರಿಗೂ ಬಾಗಿಲು ತೆಗೆದ ನಗರದ 170 ವರ್ಷದ ಐತಿಹಾಸಿಕ ಮೋದಿ ಮಸೀದಿ; ದಾಖಲಾಯ್ತು ಹೊಸ ಇತಿಹಾಸ

  ಆಗಸ್ಟ್ 25, 2015ರಂದು ಅಹಮದಾಬಾದ್​​ನಲ್ಲಿ ಪಾಟೀದರ್​​ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆದಿತ್ತು. ಇಲ್ಲಿ ಪಟೇಲ್ ಸಮುದಾಯ ಆಯೋಜಿಸಿದ್ದ ರ‍್ಯಾಲಿಯೂ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ಘಟನೆ ಸಂಬಂಧ ಹಾರ್ದಿಕ್​​ ಪಟೇಲ್​​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದರು.

  ಮೊದಲಿಗೆ ಸ್ಥಳೀಯ ಅಪರಾಧ ಶಾಖೆ ಸಲ್ಲಿಸಿದ ದೇಶದ್ರೋಹ ಪ್ರಕರಣದಲ್ಲಿ ಹಾರ್ದಿಕ್​​ ಪಟೀಲ್​​ ಬಂಧನವಾಗಿತ್ತು. ನಂತರ 2016ರ ಜುಲೈನಲ್ಲಿ ಕೋರ್ಟ್​ ಜಾಮೀನು ನೀಡಿತ್ತು. ಈ ಮಧ್ಯೆಯೇ 2019ರ ಲೋಕಸಭಾ ಚುನಾವಣೆಗೆ ಮುನ್ನ ಹಾರ್ದಿಕ್​​ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
  First published: