Priyanka Gandhi| ಪ್ರಿಯಾಂಕ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದೆ ತಪ್ಪಾಯ್ತ?; ಮಹಿಳಾ ಪೇದೆಗಳ ವಿರುದ್ದ ತನಿಖೆಗೆ ಆದೇಶ
ಈ ಚಿತ್ರದಿಂದ ಆದಿತ್ಯನಾಥ್ ತುಂಬಾ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತಿದ್ದಾರೆ. ನನ್ನೊಂದಿಗೆ ಚಿತ್ರ ತೆಗೆಯುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು ಎಂದು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.
ಪ್ರಿಯಾಂಕ ಗಾಂಧಿ ಜೊತೆಗೆ ಪೋಟೋ ತೆಗೆದುಕೊಂಡ ಮಹಿಳಾ ಪೊಲೀಸರು.
ಆಗ್ರಾ (ಅಕ್ಟೋಬರ್ 21); ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ (Priyanka Gandhi) ಬುಧವಾರ ಆಗ್ರಾಕ್ಕೆ (Agra) ತೆರಳಿದ್ದರು. ಆದರೆ, ಪ್ರಿಯಾಂಕ ಗಾಂಧಿ ಆಗ್ರಾಕ್ಕೆ ಬರುವುದನ್ನು ಉತ್ತರಪ್ರದೇಶ (UttaraPradesh) ಸರ್ಕಾರ ತಡೆದಿತ್ತು. ಪೊಲೀಸರು ಪ್ರಿಯಾಂಕರನ್ನು ರಸ್ತೆಯಲ್ಲೇ ತಡೆದು ವಾಪಾಸ್ ಕಳುಹಿಸಿದ್ದರು. ಆದರೆ, ಈ ವೇಳೆ ಕೆಲವು ಮಹಿಳಾ ಪೊಲೀಸರು ಪ್ರಿಯಾಂಕ ಗಾಂಧಿ ಜೊತೆಗೆ ಖುಷಿಯಿಂದ ಸೆಲ್ಫಿ ತೆಗೆದುಕೊಂಡಿದ್ದರು. ಈ ಸೆಲ್ಫಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ (Viral Photo) ಆಗಿತ್ತು. ಫೋಟೋ ವೈರಲ್ ಆದ ಬೆನ್ನಿಗೆ ಇದೀಗ ಮಹಿಳಾ ಪೊಲೀಸರ ವಿರುದ್ದ ಪ್ರಾಥಮಿಕ ತನಿಖೆಗೆ ಲಕ್ನೋ (Luckno) ಪೊಲೀಸ್ ಆಯುಕ್ತ (Police Commissioner) ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಮಹಿಳಾ ಪೊಲೀಸರು ಪ್ರಿಯಾಂಕ ಗಾಂಧಿ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳುತ್ತಿರುವ ಚಿತ್ರ ವೈರಲ್ ಆಗುತ್ತಿದ್ದಂತೆ, ಮಹಿಳಾ ಪೊಲೀಸರ ವರ್ತನೆಯೂ ಪೊಲೀಸ್ ನಿಯಮಾವಳ ಉಲ್ಲಂಘನೆಯಾಗಿದೆಯೆ ಎಂದು ವಿಚಾರಿಸಲು ಕೇಂದ್ರೀಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಕೇಳಲಾಗಿದ್ದು, ಈ ವರದಿಯ ಆಧಾರಲ್ಲಿ ಮಹಿಳಾ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವುದೋ ಬೇಡವೇ ಎಂದು ಆಯುಕ್ತರು ನಿರ್ಧರಿಸಲಿದ್ದಾರೆ.
ಈ ಫೋಟೊ ವೈರಲ್ ಆಗುತ್ತಿದ್ದಂತೆ ಯುಪಿ ಸರ್ಕಾರ ಅವರ ವಿರುದ್ದ ಕ್ರಮ ಕೈಗೊಳ್ಳುತ್ತದೆ ಎಂದು ಹಲವರು ಅಂದಾಜಿಸಿದ್ದರು. ಇದೇ ಆತಂಕವನ್ನು ಪ್ರಿಯಾಂಕ ಗಾಂಧಿ ಕೂಡಾ ವ್ಯಕ್ತಪಡಿಸಿದ್ದಾರೆ. "ಈ ಚಿತ್ರದಿಂದ ಆದಿತ್ಯಾನಾಥ್ ಅವರು ತುಂಬಾ ಅಸಮಾಧಾನ ಗೊಂಡಿದ್ದಾರೆ ಎಂದು ಸುದ್ದಿ ಬರುತ್ತಿದೆ. ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಬಯಸುತ್ತಿದ್ದಾರೆ” ಎಂದು ಪ್ರಿಯಾಂಕ ಗಾಂಧಿ ಹೇಳಿದ್ದು, ನನ್ನೊಂದಿಗೆ ಚಿತ್ರ ತೆಗೆಯುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, "ಈ ಚಿತ್ರದಿಂದ ಆದಿತ್ಯನಾಥ್ ತುಂಬಾ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತಿದ್ದಾರೆ. ನನ್ನೊಂದಿಗೆ ಚಿತ್ರ ತೆಗೆಯುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು. ಸರ್ಕಾರ ಈ ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಜೀವನವನ್ನು ಹಾಳು ಮಾಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಹಲವಾರು ಮಹಿಳಾ ಪೊಲೀಸರು ಅವರೊಂದಿಗೆ ಖುಷಿಯಿಂದಲೇ ಸೆಲ್ಫಿ ತೆಗೆದುಕೊಂಡಿದ್ದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ