‘ಬಂಧಿತ ಐಪಿಎಸ್​​ ಅಧಿಕಾರಿ ಭೇಟಿಗೋದಾಗ ಲಕ್ನೋ ಪೊಲೀಸರು ನನ್ನ ಕುತ್ತಿಗೆ ಹಿಡಿದು ತಳ್ಳಿದರು‘; ಪ್ರಿಯಾಂಕಾ ಗಾಂಧಿ ಆರೋಪ

76 ವರ್ಷದ ನಿವೃತ್ತ ಐಪಿಎಸ್​ ಅಧಿಕಾರಿ ಎಸ್ಆರ್​​ ದರಪುರಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಹೀಗಾಗಿ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಭೇಟಿ ನೀಡಲು ಶನಿವಾರ ತೆರಳಿದ್ದರು.

ಕಾಂಗ್ರೆಸ್​​ ನಾಯಕಿ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್​​ ನಾಯಕಿ ಪ್ರಿಯಾಂಕಾ ಗಾಂಧಿ

  • Share this:
ಲಕ್ನೋ(ಡಿ.29): ಪೌರತ್ವ ಕಾಯ್ದೆ ವಿರೋಧಿಸಿ ಬಂಧನಕ್ಕೊಳಗಾದ ಉತ್ತರ ಪ್ರದೇಶದ ನಿವೃತ್ತ ಐಪಿಎಸ್​ ಅಧಿಕಾರಿ ಮನೆಗೆ ರಾಷ್ಟ್ರೀಯ ಕಾಂಗ್ರೆಸ್​​ನ ಪ್ರಧಾನ ಕಾರ್ಯದರ್ಶಿ​​ ಪ್ರಿಯಾಂಕಾ ಗಾಂಧಿ ಭೇಟಿ ನೀಡಲು ತೆರಳಿದ್ದರು. ಈ ವೇಳೆ ದಾರಿ ಮಧ್ಯೆ ನಿವೃತ್ತ ಐಪಿಎಸ್​ ಅಧಿಕಾರಿ ಭೇಟಿಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಲಕ್ನೋ ಪೊಲೀಸರು ತಡೆದಿದ್ದಾರೆನ್ನಲಾಗಿದೆ. ಹಾಗಯೇ ಲಕ್ನೋ ಪೊಲೀಸರು ನನ್ನೊಂದಿಗೆ ಅನುಚಿತ ವರ್ತನೆ ಮಾಡಿದರು. ನನ್ನಕುತ್ತಿಗೆ ಹಿಡಿದು ತಳ್ಳಿದರು ಎಂದು ಖುದ್ದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

76 ವರ್ಷದ ನಿವೃತ್ತ ಐಪಿಎಸ್​ ಅಧಿಕಾರಿ ಎಸ್ಆರ್​​ ದರಪುರಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಹೀಗಾಗಿ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಭೇಟಿ ನೀಡಲು ಶನಿವಾರ ತೆರಳಿದ್ದರು. ಆಗ ಲಕ್ನೋ ಪೊಲೀಸರು ಕಾಂಗ್ರೆಸ್​​ ನಾಯಕಿಯನ್ನು ತಡೆದಿದ್ದಾರೆ. ಬಳಿಕ ಪ್ರಿಯಾಂಕಾ ಪಕ್ಷದ ಕಾರ್ಯಕರ್ತರ ಸ್ಕೂಟರ್​​​ನಲ್ಲಿ ತೆರಳಿದ್ದಾರೆ.

Pejawar Seer Health: ಪೇಜಾವರ ಶ್ರೀಗಳ ಕೊನೆಯಾಸೆಯಂತೆ ಮಠಕ್ಕೆ ಶಿಫ್ಟ್​ ಮಾಡಲಾಗಿದೆ; ಸಂಸದೆ ಶೋಭಾ ಕರಂದ್ಲಾಜೆ

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, "ಲಕ್ನೋ ಪೊಲೀಸರಿಗೆ ನನ್ನನ್ನು ತಡೆಯುವ ಯಾವ ಹಕ್ಕು ಕೂಡ ಇಲ್ಲ. ಒಂದು ವೇಳೆ ಅವರು ನನ್ನನ್ನು ಬಂಧಿಸುವುದಿದ್ದರೆ ಹಾಗೆ ಮಾಡಲಿ," ಎಂದು ಇಂದಿರಾನಗರ ದರಪುರಿ ಮನೆಗೆ ಭೇಟಿ ನೀಡಿದ ಬಳಿಕ ಹೇಳಿದರು. ಪ್ರಿಯಾಂಕಾ ಇದೇ ವೇಳೆ ಬಿಜೆಪಿ ಸರ್ಕಾರದ ನಡೆಯನ್ನು ಸಹ ಖಂಡಿಸಿದರು.

ಘಟನೆಯನ್ನು ವಿವರಿಸಿದ ಪ್ರಿಯಾಂಕಾ, "ನಾವು ನಮ್ಮ ಪಾಡಿಗೆ ಹೋಗುತ್ತಿದ್ದೆವು. ಆಗ ಪೊಲೀಸರು ಬಂದು ನೀವು ಹೋಗಲು ಆಗಲ್ಲ ಎಂದರು. ನಾನು ಏಕೆ ಎಂದು ಕೇಳಿದೆ. ನೀವು ಮುಂದೆ ಹೋಗಲು ನಾವು ಅನುಮತಿ ನೀಡಲ್ಲ ಎಂದರು. ನಾನು ವಾಹನದಿಂದ ಇಳಿದು ನಡೆಯಲು ಶುರು ಮಾಡಿದೆ. ಆಗ ಮಹಿಳಾ ಪೊಲೀಸ್​ ಸಿಬ್ಬಂದಿ ನನ್ನನ್ನು ಸುತ್ತುವರೆದು ಕುತ್ತಿಗೆ ಹಿಡಿದು ಕೆಳಗೆ ತಳ್ಳಿದರು. ನನ್ನನ್ನು ಬಲವಂತವಾಗಿ ತಡೆದರು. ಆದರೆ ನಾನು ಹಿಂದೆ ಸರಿಯಲ್ಲ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬ ನಾಗರಿಕನ ಜೊತೆ ನಾನು ನಿಲ್ಲುತ್ತೇನೆ. ಇದೇ ನಾನು ಮಾಡುವ 'ಸತ್ಯಾಗ್ರಹ'," ಎಂದು ಹೇಳಿದರು.

ಆರೋಪಗಳಿಗೆ ಸ್ವಾಗತ; ಬಿಜೆಪಿಯವರ ಒಳ್ಳೆಯ ಸಲಹೆಗಳನ್ನು ಪರಿಗಣಿಸುತ್ತೇವೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

 
Published by:Latha CG
First published: