• Home
  • »
  • News
  • »
  • national-international
  • »
  • Priyanka Chopra: ಯುಎಸ್ ಮತದಾನದ ಹಕ್ಕಿನ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು ಗೊತ್ತಾ? ನೀವೊಮ್ಮೆ ಕೇಳಲೇ ಬೇಕು

Priyanka Chopra: ಯುಎಸ್ ಮತದಾನದ ಹಕ್ಕಿನ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು ಗೊತ್ತಾ? ನೀವೊಮ್ಮೆ ಕೇಳಲೇ ಬೇಕು

Image Instagrammed by Priyankachopra

Image Instagrammed by Priyankachopra

National News: ಯುಎಸ್ ಮತದಾನದ ಹಕ್ಕಿನ ಬಗ್ಗೆ ನಟಿ ಪ್ರಿಯಾಂಕಾ ಹೇಳಿದ್ದೇನು ನೀವೇ ನೋಡಿ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ ಮಹಿಳಾ ಲೀಡರ್‌ಶಿಪ್ ಫೋರಂ ಸಮಾವೇಶದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಇತ್ತೀಚಿನ ಚರ್ಚೆಯ ಪೋಸ್ಟ್ ಅನ್ನು ಪ್ರಿಯಾಂಕಾ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್  (Bollywood)  ನಟಿ ಪ್ರಿಯಾಂಕಾ ಚೋಪ್ರಾ   ( Priyanka Chopra) ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಅವರು ಸುದ್ದಿಯಲ್ಲಿರುವುದು ಅವರ ಮತದಾನದ ಹಕ್ಕಿನ ಬಗ್ಗೆ ಅಂತ ಹೇಳಬಹುದು. ಯುಎಸ್ ಮತದಾನದ ಹಕ್ಕಿನ ಬಗ್ಗೆ ನಟಿ ಪ್ರಿಯಾಂಕಾ ಹೇಳಿದ್ದೇನು ನೀವೇ ನೋಡಿ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ( National Committee) ಮಹಿಳಾ ಲೀಡರ್‌ಶಿಪ್ ಫೋರಂ ಸಮಾವೇಶದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಇತ್ತೀಚಿನ ಚರ್ಚೆಯ ಪೋಸ್ಟ್ ಅನ್ನು ಪ್ರಿಯಾಂಕಾ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ.


ನಟಿ ಪ್ರಿಯಾಂಕಾ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ?


ನಟಿ ಈವೆಂಟ್ ನ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಮತದಾನದ ಹಕ್ಕುಗಳ ಬಗ್ಗೆ ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. "ನಾನು ಈ ದೇಶದಲ್ಲಿ ಮತ ಚಲಾಯಿಸದಿದ್ದರೂ, ನನ್ನ ಪತಿ ಮತ್ತು ಒಂದು ದಿನ ನನ್ನ ಮಗಳು ಇಲ್ಲಿ ಮತ ಚಲಾಯಿಸುತ್ತಾರೆ” ಎಂದು ಹೇಳಿದ್ದಾರೆ.


ಆ ಟಿಪ್ಪಣಿಯ ಆರಂಭದಲ್ಲಿ, ಜಗತ್ತು ಮಹಿಳೆಯರ ಶಕ್ತಿಯನ್ನು ಹೇಗೆ ದುರ್ಬಲಗೊಳಿಸಿತು, ಆದರೆ ಈಗ ಮಹಿಳೆಯರು ಒಟ್ಟಾಗಿ ಸೇರಿ ಆ ಆದ ತಪ್ಪುಗಳನ್ನು ಸರಿಪಡಿಸಲು ಒಟ್ಟಾಗಿ ಕೆಲಸ ಮಾಡುವ ಸ್ಥಾನದಲ್ಲಿದ್ದಾರೆ ಎಂದು ಬರೆದಿದ್ದಾರೆ.


ಅಷ್ಟೇ ಅಲ್ಲದೆ ಡಬ್ಲ್ಯುಎಲ್ಎಫ್ (ವರ್ಲ್ಡ್ ಲೀಡರ್ ಫೋರಂ) ಮತ್ತು ಈ ಸಂಸ್ಥೆಯ ಸ್ಥಾಪಕ ಸದಸ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ಈ ಪ್ರಮುಖ ಸಂಭಾಷಣೆಗಳಲ್ಲಿ ತನ್ನನ್ನು ಆಹ್ವಾನಿಸಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.


ಇದನ್ನೂ ಓದಿ: ದಸರಾ ಶುಭಾಶಯ ತಿಳಿಸಿದ ಮೇಘಾ ಶೆಟ್ಟಿ, ಸೀರೆಯಲ್ಲಿ ಭಾರೀ ಸುಂದರಿ ಈ ಅನು ಸಿರಿಮನೆ


ನಟಿ ತನ್ನ ಟಿಪ್ಪಣಿಯನ್ನು ರೂತ್ ಬೇಡರ್ ಗಿನ್ಸ್ ಬರ್ಗ್ ನ ಉಲ್ಲೇಖದೊಂದಿಗೆ ಪ್ರಾರಂಭಿಸಿದಳು. “ಇಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಸ್ಥಾನಗಳಲ್ಲಿಯೂ ಮಹಿಳೆಯರು ಇದ್ದಾರೆ. ಮೊದಲಿನಿಂದಲೂ, ಜಗತ್ತು ಮಹಿಳೆಯರ ಶಕ್ತಿಯನ್ನು ದುರ್ಬಲಗೊಳಿಸಿದೆ. ನಮ್ಮನ್ನು ಮೌನಗೊಳಿಸಿದ್ದಾರೆ, ಆದರೆ ಅನೇಕ ನಿಸ್ವಾರ್ಥ ಮಹಿಳೆಯರ ಶಕ್ತಿ ಮತ್ತು ದೃಢ ನಿಶ್ಚಯಕ್ಕೆ ಧನ್ಯವಾದಗಳು. ಇಂದು ನಾವು ಒಟ್ಟಿಗೆ ಸೇರಿ ಆದ ತಪ್ಪುಗಳನ್ನು ಸರಿಪಡಿಸಲು ಸಾಮೂಹಿಕವಾಗಿ ಕೆಲಸ ಮಾಡುವ ಸ್ಥಾನದಲ್ಲಿದ್ದೇವೆ. ಕಳೆದ ರಾತ್ರಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಮಹಿಳಾ ನಾಯಕತ್ವ ವೇದಿಕೆಯ ಸಮ್ಮೇಳನದಲ್ಲಿ ಕಮಲಾ ಹ್ಯಾರಿಸ್ ಅವರೊಂದಿಗೆ ಸಮಯ ಹಂಚಿಕೊಳ್ಳುವ ಗೌರವವನ್ನು ನಾನು ಹೊಂದಿದ್ದೆ" ಎಂದು ನಟಿ ಹೇಳಿದರು.


ನವೆಂಬರ್ 8ಕ್ಕೆ ಅಮೆರಿಕದ ಮತದಾನ


ನವೆಂಬರ್ 8 ರಂದು ಮತದಾನ ಪ್ರಾರಂಭವಾಗುವ ಅಮೆರಿಕದ ಬಗ್ಗೆ ಮಾತಾಡುತ್ತಾ “ಪ್ರತಿಯೊಬ್ಬರಿಗೂ ಆ ನಿಟ್ಟಿನಲ್ಲಿ ಒಂದು ಮುಖ್ಯವಾದ ಪಾತ್ರವಿದೆ... ನಾಗರಿಕ ಪ್ರಕ್ರಿಯೆಯ ಭಾಗವಾಗಲು ಮತ್ತು ಮತದಾನದ ಹಕ್ಕನ್ನು ಚಲಾಯಿಸಲು, ಪುರುಷರು ಮತ್ತು ಮಹಿಳೆಯರು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ" ಎಂದು ಹೇಳಿದರು.


ಮತದಾನದ ಹಕ್ಕಿನ ಬಗ್ಗೆ ಏನ್ ಹೇಳ್ತಾರೆ ಪ್ರಿಯಾಂಕಾ?


ಮತದಾನದ ಹಕ್ಕಿನ ಬಗ್ಗೆ ಮಾತನಾಡಿದ ಪ್ರಿಯಾಂಕಾ "ನಾನು ಈ ದೇಶದಲ್ಲಿ ಮತ ಚಲಾಯಿಸದಿದ್ದರೂ, ನನ್ನ ಪತಿ ಮತ್ತು ಒಂದು ದಿನ ನನ್ನ ಮಗಳು ಮತ ಚಲಾಯಿಸಬಹುದು. ವಿ.ಪಿ. ಹ್ಯಾರಿಸ್ ಅವರೊಂದಿಗಿನ ನನ್ನ ಸಂಭಾಷಣೆಯು ಅತ್ಯಂತ ಜಟಿಲವಾದ ಸಮಸ್ಯೆಗಳ ಸುತ್ತ ಕೇಂದ್ರೀಕೃತವಾಗಿತ್ತು, ಅದನ್ನು ಪರಿಹರಿಸಲು, ಸ್ಪಷ್ಟವಾದ ದೃಷ್ಟಿಕೋನ ಮತ್ತು ಯೋಜನೆಯನ್ನು ಹೊಂದಿರಬೇಕು" ಎಂದು ಹೇಳಿದರು.


ಇದನ್ನೂ ಓದಿ: ರಶ್ಮಿಕಾ 2ನೇ ತಮಿಳು ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ವಿಜಯ್ ಮಾಸ್ ಲುಕ್


"ಈ ಸಂಘಟನೆಯನ್ನು ಸ್ಥಾಪಿಸುವಲ್ಲಿ ಸ್ಥಾಪಕ ಶಕ್ತಿಯಾದ ಡಬ್ಲ್ಯುಎಲ್ಎಫ್ ಮತ್ತು ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ಧನ್ಯವಾದಗಳು" ಎಂದು ಅವರು ಪೋಸ್ಟ್ ಅನ್ನು ಮುಕ್ತಾಯಗೊಳಿಸಿದರು.


ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ಮತ್ತು ನಟ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರು ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂಬ ಮಗಳ ಪೋಷಕರಾಗಿದ್ದಾರೆ.

First published: