ಮೋಸ ಮಾಡಿ ವಿವಾಹವಾಗಿದ್ದಾರಾ ಪ್ರಿಯಾಂಕಾ: ಪಿಗ್ಗಿ ವಂಚನೆಗೆ ಬಲಿಯಾದರಾ ನಿಕ್​..?

Anitha E | news18
Updated:December 6, 2018, 5:14 PM IST
ಮೋಸ ಮಾಡಿ ವಿವಾಹವಾಗಿದ್ದಾರಾ ಪ್ರಿಯಾಂಕಾ: ಪಿಗ್ಗಿ ವಂಚನೆಗೆ ಬಲಿಯಾದರಾ ನಿಕ್​..?
Anitha E | news18
Updated: December 6, 2018, 5:14 PM IST
ಪ್ರಿಯಾಂಕಾ ಕೈಯಲ್ಲಿರುವ ಮದರಂಗಿ ಇನ್ನೂ ಬಣ್ಣ ಕಳೆದುಕೊಂಡಿಲ್ಲ. ಆಗಲೇ ಅವರ ವಿವಾಹದ ಬಗ್ಗೆ ಗಾಳಿ ಮಾತುಗಳು ಹರಡಲಾರಂಭಿಸಿದೆ. ಹೌದು ಪ್ರಿಯಾಂಕಾ-ನಿಕ್​ ವಿವಾಹ ಪ್ರೇಮ ವಿವಾಹವಲ್ಲ. ಬಲವಂತದ ವಿವಾಹ. ನಿಕ್​ರನ್ನು ಪ್ರಿಯಾಂಕಾ ಮೋಸದಿಂದ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.

ಹೀಗೆಂದು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದರೆ, ಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಕತೆಯನ್ನು ಹೇಳುತ್ತಿರುವುದು ನ್ಯೂಯಾರ್ಕ್​ನ 'ಕಟ್​ ನಿಯತಕಾಲಿಕೆ'.

ಇದನ್ನೂ ಓದಿ: 'ಟಗರು' ಡಾಲಿಗೆ 'ತೋತಾಪುರಿ' ಬಯಕೆ: ನವರಸನಾಯಕನಿಗೆ ಧನಂಜಯ್ ಕೋರಿಕೆ!

ನಿಕ್​, ಪ್ರಿಯಾಂಕಾರನ್ನು ಟೈಮ್​ಪಾಸ್​ಗಾಗಿ ಡೇಟಿಂಗ್​ ಮಾಡುತ್ತಿದ್ದರು. ಆದರೆ ಪ್ರಿಯಾಂಕಾ ನಿಕ್​ರನ್ನು ವಂಚಿಸಿ ಮದುವೆಯಾಗಿದ್ದಾರೆ ಎಂದು ಕತೆ ಕಟ್ಟಿ ಲೇಖನ ಪ್ರಕಟಿಸಿದೆ 'ಕಟ್​' ನಿಯತಕಾಲಿಕೆ.  ಈ ಕುರಿತು ಜಾಗತಿಕಮಟ್ಟದಲ್ಲಿ ಸಾಕಷ್ಟು ವಿಮರ್ಶೆ ವ್ಯಕ್ತವಾಗುತ್ತಿದೆ.

ಈ ವಿಷಯ ಪ್ರಕಟಿಸಿದ ಕಟ್​ ಮ್ಯಾಗಜೈನ್​ ವಿರುದ್ಧ ಕಿಡಿ ಕಾರಿರುವ ಪ್ರಿಯಾಂಕಾ ಇಂತಹ ಸುದ್ದಿಗಳಿಗೆ ನಾನು ಸೊಪ್ಪುಹಾಕುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.  ಇನ್ನೂ ಬಾಲಿವುಡ್​ ನಟರಾದ ಸೋನಮ್​ ಕಪೂರ್​, ಸ್ವರಭಾಸ್ಕರ್​ ಸೇರಿದಂತೆ ಹಲವರು ಪ್ರಿಯಾಂಕಾಗೆ ಬೆಂಬಲ ನೀಡಿದ್ದಾರೆ.

ಭಾರತೀಯ ಹೆಣ್ಣುಮಗಳೊಬ್ಬರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಾರಣಕ್ಕೆ ಅವರ ಮೇಲೆ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಿದೆ.
Loading...

 

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626