Football World Cup 2018

ಪ್ರಿಯಾರ ಕಣ್​​ ಸನ್ನೆಗಿಂತ ಗನ್​ ಸನ್ನೆ ಜೋರಾಯ್ತು: ಮಂಗಳವಾರ ರಾತ್ರಿ ಬಿಡುಗಡೆಯಾದ ಮತ್ತೊಂದು ವಿಡಿಯೋ ಸಹ ವೈರಲ್​

news18
Updated:February 14, 2018, 3:17 PM IST
ಪ್ರಿಯಾರ ಕಣ್​​ ಸನ್ನೆಗಿಂತ ಗನ್​ ಸನ್ನೆ ಜೋರಾಯ್ತು: ಮಂಗಳವಾರ ರಾತ್ರಿ ಬಿಡುಗಡೆಯಾದ ಮತ್ತೊಂದು ವಿಡಿಯೋ ಸಹ ವೈರಲ್​
news18
Updated: February 14, 2018, 3:17 PM IST
ನ್ಯೂಸ್ 18 ಕನ್ನಡ

ಮಲಯಾಳದ ‘ಒರು ಆಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯಿ ಪೂವಿ’ ಹಾಡು ಬಿಡುಗಡೆಯಾದ ನಂತರ ಪ್ರಿಯಾ ಪ್ರಕಾಶ್​ ವಾರಿಯರ್ ಈಗ ಎಲ್ಲರಿಗೂ ಚಿರಪರಿಚಿತ. ನಾಲ್ಕು ದಿನಗಳ ಹಿಂದೆಯಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಹಾಡಿನ ತುಣುಕಿನ ನಂತರ ಈಗ ಪ್ರಿಯಾ ಪ್ರಕಾಶ್​​ ಅವರ ಮತ್ತೊಂದು ವಿಡಿಯೋ ವೈರಲ್​ ಆಗಿದೆ.
ಮಂಗಳವಾರ ರಾತ್ರಿ  ‘ಒರು ಆಡಾರ್ ಲವ್’ ಸಿನಿಮಾದ ತಂಡ ಯೂಟ್ಯೂಬ್​ನಲ್ಲಿ ಟೀಸರ್ ಬಿಡುಗಡೆ ಮಾಡಿದ್ದು, ಈಗ ವಿಡಿಯೋ ಸಹ ಸಾಮಾಜಿಕ ಜಾಲಾತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪ್ರೇಮಿಗಳ ದಿನಾಚರಣೆ ಅಂಗವಾಗಿ ಚಿತ್ರತಂಡ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಈ ವಿಡಿಯೋ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ ಒನ್​ ಸ್ಥಾನದಲ್ಲಿದೆ. ಹಿಂದಿನ ಹಾಡಿನಲ್ಲಿ ಗೆಳೆಯನಿಗೆ ಕಣ್ಣು ಹೊಡೆದಿದ್ದ ಈ ಚೆಲುವೆ, ಟೀಸರ್​ನಲ್ಲಿ ತನ್ನ ಬೆರಳುಗಳಿಗೆ ಮುತ್ತಿಟ್ಟು ಅದನ್ನು  ಹುಡುಗನ ಕಡೆ ಹಾರಿ ಬಿಡುತ್ತಾಳೆ.  ಒಟ್ಟು 44 ಸೆಕೆಂಡ್​ಗಳ ಈ ವೀಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಯೂ ಟ್ಯೂಬ್​ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಯೊಳಗೆ 3 ಮಿಲಿಯನ್​ಗೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಒಮರ್ ಲೂಲು ನಿರ್ದೇಶನ ಮಾಡಿದ್ದು, ರೋಷನ್ ಅಬ್ದುಲ್ ರಹೂಫ್ ಹಾಗೂ ಪ್ರಿಯಾ ವಾರಿಯರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

 

 

 

 
First published:February 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ