Indian Railways - ರೈಲ್ವೆ ಪ್ರಯಾಣ ದರ ನಿಗದಿ ಮಾಡಲು ಖಾಸಗಿಯವರೂ ಸ್ವತಂತ್ರ: ಸರ್ಕಾರ

ನಿರ್ದಿಷ್ಟ ರೈಲ್ವೆ ಮಾರ್ಗಗಳನ್ನ ನಿರ್ವಹಿಸುವ ಖಾಸಗಿಯವರಿಗೆ ತಮ್ಮದೇ ಪ್ರಯಾಣ ದರ ನಿಗದಿಪಡಿಸುವ ಸ್ವಾತಂತ್ರ್ಯ ನೀಡಲು ಸರ್ಕಾರ ಯೋಜಿಸಿದೆ. ಲಾಭವಿಲ್ಲದೆ ಸೊರಗುತ್ತಿರುವ ರೈಲ್ವೆ ವಲಯಕ್ಕೆ ಖಾಸಗಿ ಬಂಡವಾಳ ಆಕರ್ಷಿಸುವುದು ಸರ್ಕಾರದ ಉದ್ದೇಶ.

news18
Updated:September 18, 2020, 2:40 PM IST
Indian Railways - ರೈಲ್ವೆ ಪ್ರಯಾಣ ದರ ನಿಗದಿ ಮಾಡಲು ಖಾಸಗಿಯವರೂ ಸ್ವತಂತ್ರ: ಸರ್ಕಾರ
ಸಾಂದರ್ಭಿಕ ಚಿತ್ರ
  • News18
  • Last Updated: September 18, 2020, 2:40 PM IST
  • Share this:
ನವದೆಹಲಿ(ಸೆ. 18): ದೇಶದಲ್ಲಿ ತಾವು ನಿರ್ವಹಿಸುವ ರೈಲ್ವೆ ಸೇವೆಗಳಿಗೆ ಪ್ರತ್ಯೇಕ ಪ್ರಯಾಣ ದರ ನಿಗದಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರೈಲ್ವೆ ವಲಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಸರ್ಕಾರ ಈ ಉಪಾಯ ಯೋಜಿಸಿದೆ. “ಖಾಸಗಿ ರೈಲ್ವೆ ಸೇವೆ ಕಂಪನಿಗಳು ತಮ್ಮಿಚ್ಛೆಯ ಪ್ರಯಾಣ ದರ ನಿಗದಿ ಮಾಡಬಹುದು. ಆದರೆ, ಅವರ ರೈಲ್ವೆ ಮಾರ್ಗದಲ್ಲಿ ಹವಾನಿಯಂತ್ರಿತ ಬಸ್ಸುಗಳು ಹಾಗೂ ವಿಮಾನಗಳೂ ಕೂಡ ಸಂಚರಿಸುತ್ತವೆ. ಹೀಗಾಗಿ, ರೈಲ್ವೆ ಪ್ರಯಾಣ ದರವನ್ನು ಯೋಚಿಸಿ ನಿಗದಿ ಮಾಡಬೇಕು” ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಎಚ್ಚರಿಸಿದರು.

ವಿಶ್ವದ ಅತಿದೊಡ್ಡ ರೈಲ್ವೆ ನೆಟ್​ವರ್ಕ್ ಹೊಂದಿರುವ ಭಾರತೀಯ ರೈಲ್ವೆಯ ಪ್ರಯಾಣ ದರ ತೀರಾ ಅಗ್ಗ ಇದೆ. ಆದರೆ, ಇದೇ ಕಾರಣಕ್ಕೆ ಮೂಲಸೌಕರ್ಯದ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗದೆ ಇಲಾಖೆ ಬಳಲುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೂ ರೈಲ್ವೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆಯನ್ನು ಸರ್ಕಾರ ಖಾಸಗೀಕರಣ ಮಾಡುವತ್ತ ಹೆಜ್ಜೆ ಇರಿಸಿದೆ. ಆರಂಭದಲ್ಲಿ ಪಾಕ್ಷಿಕವಾಗಿ ಖಾಸಗಿಕರಣ ಆಗಲಿದೆ. 109 ಮಾರ್ಗಗಳಲ್ಲಿ 151 ರೈಲುಗಳ ನಿರ್ವಹಣೆಗೆ ಸರ್ಕಾರ ಖಾಸಗಿಯವರನ್ನು ಆಹ್ವಾನಿಸಿದೆ. ಅದಾನಿ ಎಂಟರ್​ಪ್ರೈಸಸ್, ಆಲ್ಸ್​ಟಾಮ್ ಎಸ್​ಎ, ಬೊಬಾರ್ಡಿಯರ್, ಜಿಎಂಆರ್ ಇನ್​ಫ್ರಾಸ್ಟ್ರಕ್ಚರ್ ಕಂಪನಿಗಳು ಈ ಪ್ರಸ್ತಾಪಕ್ಕೆ ಸ್ಪಂದಿಸಿವೆ. ಮುಂದಿನ 5 ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ 7.5 ಬಿಲಿಯನ್ ಡಾಲರ್ (ಸುಮಾರು 50 ಸಾವಿರ ಕೋಟಿ ರೂಪಾಯಿ) ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: Agri Reforms - ಕೇಂದ್ರ ಸರ್ಕಾರದ ಕೃಷಿ ಸುಧಾರಣೆಯ ಮಸೂದೆಗಳು: ರೈತರ ಆತಂಕಕ್ಕೆ ಏನು ಕಾರಣ?

ರೈಲ್ವೆ ಪ್ರಯಾಣ ಸೇವೆ ಜೊತೆಗೆ ವಿವಿಧ ನಗರಗಳಲ್ಲಿರುವ ರೈಲ್ವೆ ನಿಲ್ದಾಣಗಳನ್ನ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಖಾಸಗಿಯವರಿಗೆ ಆಹ್ವಾನ ಕೊಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸುವುದು ಹಾಗೂ ಲಾಭದಾಯಕವಾಗಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಆದರೆ, ರೈಲ್ವೆ ಖಾಸಗೀಕರಣಕ್ಕೆ ಅನೇಕ ಕಡೆಗಳಿಂದ ವಿರೋಧಗಳೂ ಇವೆ. ಬಡವರ ಪಾಲಿಗೆ ಬಹಳ ಮುಖ್ಯವಾಗಿರುವ ರೈಲ್ವೆಯನ್ನು ಖಾಸಗಿಯವರಿಗೆ ಒಪ್ಪಿಸಿದರೆ ಪ್ರಯಾಣದ ದುಬಾರಿಯಾಗುತ್ತದೆ. ಇದು ಬಡವರ ವಿರೋಧಿ ಕ್ರಮ ಎಂದು ಹಲವು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Published by: Vijayasarthy SN
First published: September 18, 2020, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading