Tirupati: ತಿರುಪತಿ ದೇಗುಲದ ಆವರಣದಲ್ಲಿ ಸಿಗಲ್ಲ ಊಟ, ತಿಂಡಿ, ಕಾಫಿ, ಟಿಟಿಡಿ ಹೊಸ ರೂಲ್ಸ್ ಏನು ಗೊತ್ತಾ​!?

ತಿರುಮಲದ ತಿರುಪತಿ ದೇವಾಲಯದ ಆವರಣದಲ್ಲಿ ತಲೆ ಎತ್ತಿರೋ ಎಲ್ಲಾ ಖಾಸಗಿ ಹೋಟೆಲ್​ಗಳನ್ನು ತೆರವುಗೊಳಿಸಲು ಟಿಟಿಡಿ ನಿರ್ಧರಿಸಿದೆ.

ತಿರುಪತಿ ವೆಂಕಟೇಶ್ವರ ಸನ್ನಿಧಿ

ತಿರುಪತಿ ವೆಂಕಟೇಶ್ವರ ಸನ್ನಿಧಿ

  • Share this:
ತಿರುಪತಿ(ಫೆ .19): ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (Tirupati Venkateshwara) ಸೇರಿದಂತೆ 12 ದೇವಸ್ಥಾನಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (TTD), ಬೆಟ್ಟದ ಮೇಲಿನ ದೇವಸ್ಥಾನದ ಪಟ್ಟಣದಲ್ಲಿ ಯಾವುದೇ ಖಾಸಗಿ ತಿನಿಸುಗಳು ಮತ್ತು ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡದಿರಲು ನಿರ್ಧರಿಸಿದೆ. ಇನ್ನು ತಿರುಮಲದ ತಿರುಪತಿ ದೇವಾಲಯದ ಆವರಣದಲ್ಲಿ ತಲೆ ಎತ್ತಿರೋ ಎಲ್ಲಾ ಖಾಸಗಿ ಹೋಟೆಲ್​ಗಳನ್ನು(Private hotel)  ತೆರವುಗೊಳಿಸಲು ಟಿಟಿಡಿ ನಿರ್ಧರಿಸಿದೆ. ಏಕರೂಪದಲ್ಲಿ ಅನ್ನ ಪ್ರಸಾದ ವಿತರಿಸಲು ( Distribute)  ಆಡಳಿತ ಮಂಡಳಿಯು ಚಿಂತನೆ ನಡೆಸಿದೆ.  ತಿರುಮಲ ಬೆಟ್ಟದ ಎಲ್ಲ ಪ್ರಮುಖ, ಆಯಕಟ್ಟಿನ ಸ್ಥಳಗಳಲ್ಲಿ ಅನ್ನ ಪ್ರಸಾದ ವಿತರಿಸುವ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿರೋದಾಗಿ ಆಡಳಿತ ಮಂಡಳಿಯ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಭಕ್ತರಿಗೆ  ಏಕರೂಪದಲ್ಲಿ ಪ್ರಸಾದ ವಿತರಣೆ

ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರೋ ಎಲ್ಲಾ ಭಕ್ತಾದಿಗಳಿಗೆ ಏಕರೂಪದ ಆಹಾರ ಒದಗಿಸುವುದು ಇದರ ಗುರಿ ಎಂದು ಹೇಳಿದರು. ತಿರುಪತಿಯಲ್ಲಿ ಅನ್ನಪ್ರಸಾದ ಕೇಂದ್ರವನ್ನು ಪರಿಶೀಲಿಸಿದ ಅವರು, ಖಾಸಗಿ ಹೋಟೆಲ್​ಗಳು ಹಣಬೆಯಂತೆ ವ್ಯಾಪಿಸೋದನ್ನು ಗಮನಿಸಿದ್ರು. ಸದ್ಯ ಶ್ರೀ ಮಾತೃಶ್ರೀ ತರಿಗೊಂಡ ವೆಂಗಮಾಂಬಾ ಅನ್ನ ಪ್ರಸಾದ ಕೇಂದ್ರ ಮತ್ತು ವೈಕುಂಟುಂ ಸಾಲು ಕೇಂದ್ರದಲ್ಲಿ ದಿನವಿಡೀ ಉಚಿತ ಊಟ ಒದಗಿಸಲಾಗುತ್ತಿದೆ. ವೆಂಗಮಾಂಬಾ ಸಂಕೀರ್ಣವೊಂದರಲ್ಲಿಯೇ ನಿತ್ಯ ಸುಮಾರು 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಉಚಿತ ಅನ್ನ ಪ್ರಸಾದದ ಊಟದ ಮಳಿಗೆಗಳು

ಇದರ ಬದಲಾಗಿ ಇನ್ನೂ ಅನೇಕ ಉಚಿತ ಅನ್ನ ಪ್ರಸಾದದ ಊಟದ ಮಳಿಗೆಗಳು ಮತ್ತು ಕಿಯೋಸ್ಕ್ ಗಳನ್ನು ಸ್ಥಾಪಿಸಲು ನಿರ್ಧರಿಸಿರುವುದರ ಜೊತೆಗೆ ಇತರ ಉದ್ಯಮಗಳನ್ನು ನಡೆಸುವುದಕ್ಕೆ ಅನುಮತಿ ನೀಡಲಾಗುತ್ತಿದೆ. ಮುಂಬೈನಲ್ಲಿ ಶ್ರೀವಾರಿ ದೇವಸ್ಥಾನ ನಿರ್ಮಿಸಲು ಭೂಮಿಗೆ ಅನುಮತಿ ಪಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಒಂದು ತಿಂಗಳೊಳಗೆ ಭೇಟಿ ಮಾಡಲು ಪ್ರಯತ್ನಿಸಲಾಗುವುದು. ಜೊತೆಗೆ ಆರ್ಜಿತಾ ಸೇವಾ ಟಿಕೆಟ್ ಗಳನ್ನು ಹೆಚ್ಚಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.

ಇದನ್ನೂ ಓದಿ: TTD: ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರೋಬ್ಬರಿ 9.2ಕೋಟಿ ರೂ ದಾನ ಮಾಡಿದ ಮಹಿಳೆ; ಕಾರಣ ಇದು!

3,096 ಕೋಟಿ ಬಜೆಟ್‌ಗೆ ಅನುಮೋದನೆ

ಗುರುವಾರ ನಡೆದ ಮಂಡಳಿಯ ಸಭೆಯ ನಂತರ, 2023 ರ ಆರ್ಥಿಕ ವರ್ಷಕ್ಕೆ ದೇವಾಲಯದ ಪಾಲನೆ ಮತ್ತು ಸಂಬಂಧಿತ ವೆಚ್ಚಗಳಿಗಾಗಿ ₹ 3,096 ಕೋಟಿಯನ್ನು ಬಜೆಟ್‌ಗೆ ಅನುಮೋದಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ದೇವಾಲಯಗಳ ಒಕ್ಕೂಟವನ್ನು ನಿರ್ವಹಿಸುವ ಸ್ವತಂತ್ರ ಟ್ರಸ್ಟ್‌ನ ಟಿಟಿಡಿ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕದ ತೀವ್ರತೆಯು ದೇಶಾದ್ಯಂತ ಕಡಿಮೆಯಾಗಿದೆ ಮತ್ತು ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಮಾರ್ಚ್ 2020 ರಿಂದ ಸ್ಥಗಿತಗೊಂಡಿದ್ದ ಅರ್ಜಿತ ಸೇವೆಗಳು ಮತ್ತು ದರ್ಶನಗಳನ್ನು ಪುನರಾರಂಭಿಸಲಾಗುವುದು. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸೂಚಿಸಿದಂತೆ ಮಕ್ಕಳಿಗಾಗಿ ಆಸ್ಪತ್ರೆಯನ್ನು 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಟ್ರಸ್ಟ್ ಅನುಮೋದನೆ ನೀಡಿದೆ ಎಂದು ಹೇಳಿದರು

ಇದನ್ನೂ ಓದಿ: ತಿರುಪತಿಯಲ್ಲಿ ಶ್ರೀ ಬಾಲಾಜಿ, ವಿಜಯವಾಡದಲ್ಲಿ NTR​; ಹೊಸ ಜಿಲ್ಲೆಗಳ ರಚನೆಗೆ ಮುಂದಾದ Andhra

ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರೋಬ್ಬರಿ 9.2ಕೋಟಿ ರೂ ದಾನ ಮಾಡಿದ ಮಹಿಳೆ

ದೇಶದ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ದೇಗುಲ ಆಂಧ್ರಪದೇಶದ ತಿರುಪತಿ ವೆಂಕಟೇಶ್ವರ  ಸನ್ನಿಧಿ. ತಿಮ್ಮಪ್ಪನ ದರ್ಶನಕ್ಕೆ ದೇಶ- ವಿದೇಶದಿಂದ ಭಕ್ತರು ಹರಿದು ಬರುತ್ತಾರೆ. ದಿನವೊಂದಕ್ಕೆ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಹರಿದು ಬರುತ್ತಾರೆ. ಕೋವಿಡ್ ಸಮಯದಲ್ಲೂ ದಾಖಲೆ ನಿಧಿಯನ್ನು ಟಿಟಿಡಿ (TTD) ಸಂಗ್ರಹಿಸಿತು. ತಿಮ್ಮಪ್ಪನ ದರ್ಶನದ ಜೊತೆಗೆ ತಿಮ್ಮಪ್ಪನ ಸನ್ನಿಧಿಗೆ ದಾನ ನೀಡುವ ಭಕ್ತರು ಸಂಖ್ಯೆ ಕೂಡ ಕಡಿಮೆ ಇಲ್ಲ.

ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಭಕ್ತರು ದೇಗುಲಕ್ಕೆ ಕೋಟಿ ಕೋಟಿ ರೂಗಳನ್ನು ದಾನ  ಮಾಡುವ ಕುರಿತು ಈ ಹಿಂದೆ ವರದಿ ಆಗಿದೆ. ಆದರೆ, ಈ ಬಾರಿ ಮಹಿಳೆಯೊಬ್ಬರು ಬರೋಬ್ಬರಿ 9. 2 ಕೋಟಿ ರೂ ದಾನ ಮಾಡಿ ಸುದ್ದಿಯಾಗಿದ್ದಾರೆ. ಸಾವಿಗೂ ಮುನ್ನ 6 ಕೋಟಿ ನೀಡಿದ್ದ ಮಹಿಳೆ ಆಕೆಯ ಕಾಲದ ನಂತರೂ ದೇಗುಲಕ್ಕೆ 3. 2 ಕೋಟಿ ರೂ ಹಣ ನೀಡುವಂತೆ ನೋಡಿಕೊಂಡಿದ್ದಾರೆ.
Published by:Pavana HS
First published: