• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Prince Harry: ನನ್ನ ತಾಯಿ ಡಯಾನಾ ಸಾವಿನ ನೆನಪಿನಿಂದ ಹೊರಬರಲು ಮದ್ಯವ್ಯಸನಿಯಾಗಿದ್ದೆ: ಪ್ರಿನ್ಸ್ ಹ್ಯಾರಿ

Prince Harry: ನನ್ನ ತಾಯಿ ಡಯಾನಾ ಸಾವಿನ ನೆನಪಿನಿಂದ ಹೊರಬರಲು ಮದ್ಯವ್ಯಸನಿಯಾಗಿದ್ದೆ: ಪ್ರಿನ್ಸ್ ಹ್ಯಾರಿ

ಪ್ರಿನ್ಸ್​ ಹ್ಯಾರಿ

ಪ್ರಿನ್ಸ್​ ಹ್ಯಾರಿ

ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳದ ಮಧ್ಯೆ ಆತ್ಮಹತ್ಯಾ ಆಲೋಚನೆಗಳನ್ನು ಮಾಡಿದ್ದಲ್ಲದೇ ಅವರ ಪತ್ನಿ ಮೇಘನ್ ಅವರನ್ನು ರಾಜಮನೆತನದವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.

 • Share this:

ರಾಜಕುಮಾರ ಹ್ಯಾರಿ 1997ರಲ್ಲಿ ತನ್ನ ತಾಯಿ ಡಯಾನಾ ಸಾವಿನ ನೋವಿನಿಂದ ಹೊರ ಬರಲು ಮಧ್ಯ ವ್ಯಸನಿಯಾಗಿದ್ದರಂತೆ. ಅಷ್ಟೇ ಅಲ್ಲದೇ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಆಲೋಚಿಸುತ್ತಿದ್ದರೂ ತನ್ನನ್ನು ಮತ್ತು ತನ್ನ ಹೆಂಡತಿ ಮೇಘನ್ ಅವರನ್ನು ಬ್ರಿಟಿಷ್ ರಾಜಮನೆತನವು ನಿರ್ಲಕ್ಷಿಸಿದೆ ಎಂದು ಹ್ಯಾರಿ ಆರೋಪಿಸಿದರು.


ಇಂಗ್ಲೆಂಡ್‌ನ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ರಾಜಮನೆತನದ ಹಿರಿಯ ಸದಸ್ಯರಾಗಿ ತಮ್ಮ ಜವಾಬ್ದಾರಿಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಮತ್ತು ತಮ್ಮ ಮಗ ಆರ್ಚಿಯೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯರಂತೆ ಜೀವನವನ್ನು ನಡೆಸುತ್ತಿದ್ದಾರೆ.


ಈ ಸಂದರ್ಭದಲ್ಲಿ, ರಾಜಕುಮಾರ ಹ್ಯಾರಿ ಇತ್ತೀಚೆಗೆ ರಾಜಮನೆತನದ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ. ಅವರು ರಾಜಮನೆತನದ ಬಗ್ಗೆ ಮತ್ತು ರಾಜಮನೆತನದಲ್ಲಿ ಅವರ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.


ಇದನ್ನೂ ಓದಿ:ಕೋವಿಡ್ -19 ಸಂಶೋಧನೆಗೆ ದೇಹ ದಾನ ಮಾಡಿದ ಮೊದಲ ಭಾರತೀಯ ಮಹಿಳೆ ಜ್ಯೋತ್ಸ್ನಾ ಬೋಸ್

ತನ್ನ ತಾಯಿ ಡಯಾನಾ ಸಾವಿನ ನಂತರ ತಾನು ಕುಗ್ಗಿದ್ದೆ ಮತ್ತು ಒಂದು ಹಂತದಲ್ಲಿ 12 ವರ್ಷದ ಹುಡುಗನಾಗಿದ್ದರೂ ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದೆ ಎಂದು ಹ್ಯಾರಿ ಹೇಳಿದರು. ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳದ ಮಧ್ಯೆ ಆತ್ಮಹತ್ಯಾ ಆಲೋಚನೆಗಳನ್ನು ಮಾಡಿದ್ದಲ್ಲದೇ ಅವರ ಪತ್ನಿ ಮೇಘನ್ ಅವರನ್ನು ರಾಜಮನೆತನದವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.


ಈಗ 36ರ ಹರೆಯದ ಹ್ಯಾರಿ, ಪ್ಯಾರಿಸ್ ಕಾರು ಅಪಘಾತದಲ್ಲಿ ಡಯಾನಾಳನ್ನು ಕಳೆದುಕೊಂಡ ಆಘಾತದ ಬಗ್ಗೆ ಮಾತನಾಡಿದ್ದಾರೆ. ನಂತರ ತನ್ನ ತಾಯಿಯ ಶವಪೆಟ್ಟಿಗೆಯ ಹಿಂದೆ 12 ವರ್ಷದ ಮಗುವಿನಂತೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದು ಪ್ರಪಂಚಾದ್ಯಂತ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ ಎಂದು ಹೇಳಿದ್ದಾರೆ.


"ನಾನು ಮದ್ಯವ್ಯಸನಿಯಾಗಿದ್ದೆ; ನಾನು ಮದ್ಯ ತೆಗೆದುಕೊಳ್ಳಲು ಸಿದ್ಧನಾಗಿದ್ದೆ; ನಾನು ಭಾವಿಸಿದಂತೆ ಕಡಿಮೆ ಭಾವನೆ ಮೂಡಿಸುವಂತಹ ಕೆಲಸಗಳನ್ನು ಮಾಡಲು ಪ್ರಯತ್ನಿಸಲು ನಾನು ಸಿದ್ಧನಿದ್ದೇನೆ" ಎಂದು ಹ್ಯಾರಿ ಓಪ್ರಾ ವಿನ್ಫ್ರೇಗೆ ಆ್ಯಪಲ್ ಟಿವಿ ಸರಣಿಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೇಳಿಕೊಂಡರು.


“ನಾನು ಸಂಪೂರ್ಣವಾಗಿ ಅಸಹಾಯಕನಾಗಿದ್ದೇನೆ. ನನ್ನ ಕುಟುಂಬವು ಸಹಾಯ ಮಾಡುತ್ತದೆ ಎಂದು ನಾನು ಭಾವಿಸಿದೆ. ಆದರೆ ಪ್ರತಿಯೊಬ್ಬರ ಕೇಳುವಿಕೆ, ವಿನಂತಿ, ಎಚ್ಚರಿಕೆ, ಅದು ಏನೇ ಇರಲಿ, ಒಟ್ಟು ಮೌನ ಅಥವಾ ಸಂಪೂರ್ಣ ನಿರ್ಲಕ್ಷ್ಯವನ್ನು ಎದುರಿಸಬೇಕಾಯಿತು. " ಎಂದು ಬೇಸರ ವ್ಯಕ್ತಪಡಿಸಿದರು.


ಹ್ಯಾರಿಯು ತನ್ನ 95 ವರ್ಷದ ಅಜ್ಜಿ, ರಾಣಿ ಎಲಿಜಬೆತ್ ಮತ್ತು 72 ವರ್ಷದ ತಂದೆ ಪ್ರಿನ್ಸ್ ಚಾರ್ಲ್ಸ್ ನೇತೃತ್ವದ ಬ್ರಿಟಿಷ್ ರಾಜಮನೆತನದ ಬಗ್ಗೆ ಸಾರ್ವಜನಿಕವಾಗಿ ಟೀಕಿಸುತ್ತಾ ರಾಜಪ್ರಭುತ್ವಕ್ಕೆ ಮತ್ತೊಂದು ಸಾರ್ವಜನಿಕ ಸಂಪರ್ಕ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ.
ಡಯಾನಾ ಸಾವಿನ ನೆನಪು ಇನ್ನೂ ಹ್ಯಾರಿಯಲ್ಲಿ ಕಾಡುತ್ತಿದ್ದು ಅದರ ನೆನಪನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.

top videos
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು