• Home
  • »
  • News
  • »
  • national-international
  • »
  • Prince William: ಕೇಟ್ ಮಿಡಲ್ಟನ್ ಅಂಗರಕ್ಷಕಿ ಸಾರ್ಜೆಂಟ್ ಎಮ್ಮಾಗೆ ವಿಶೇಷ ಗೌರವ ನೀಡಿದ ಪ್ರಿನ್ಸ್ ವಿಲಿಯಂ

Prince William: ಕೇಟ್ ಮಿಡಲ್ಟನ್ ಅಂಗರಕ್ಷಕಿ ಸಾರ್ಜೆಂಟ್ ಎಮ್ಮಾಗೆ ವಿಶೇಷ ಗೌರವ ನೀಡಿದ ಪ್ರಿನ್ಸ್ ವಿಲಿಯಂ

ಪ್ರಿನ್ಸ್ ವಿಲಿಯಂ, ಕೇಟ್ ಮಿಡಲ್ಟನ್ ಮತ್ತು ಸಾರ್ಜೆಂಟ್ ಎಮ್ಮಾ

ಪ್ರಿನ್ಸ್ ವಿಲಿಯಂ, ಕೇಟ್ ಮಿಡಲ್ಟನ್ ಮತ್ತು ಸಾರ್ಜೆಂಟ್ ಎಮ್ಮಾ

ವಿಲಿಯಂ ತಮ್ಮ ಪ್ರೀತಿಯ ಪತ್ನಿಯ ರಕ್ಷಣೆಯಲ್ಲಿ ದೀರ್ಘಾವಧಿಯಿಂದ ಸೇವೆ ಸಲ್ಲಿಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಠೆಗೆ ಅತ್ಯುತ್ತಮ ಗೌರವ ಸಲ್ಲಿಸಿದ್ದಾರೆ. ರಾಜಪ್ರಭುತ್ವಕ್ಕೆ ವಿಶೇಷ ಸೇವೆಗಳನ್ನು ಗುರುತಿಸುವ ಬ್ರಿಟಿಷ್ ಗೌರವವಾದ ರಾಯಲ್ ವಿಕ್ಟೋರಿಯನ್ ಆರ್ಡರ್ (RVO) ನ ಸದಸ್ಯರನ್ನಾಗಿ ಸಾರ್ಜೆಂಟ್ ಎಮ್ಮಾ ಪ್ರೊಬರ್ಟ್ ಅವರನ್ನು ಪ್ರಿನ್ಸಿ ವಿಲಿಯಂ ಸದಸ್ಯರನ್ನಾಗಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಬಕಿಂಗ್ಹ್ಯಾಮ್ ಅರಮನೆಯು (Buckingham Palace) ಅಂಗರಕ್ಷಕರಿಗೆ ನೀಡುವ ವಿಶೇಷ ಗೌರವಕ್ಕೆ ಸಾಕ್ಷಿಯಾಗಿದ್ದು, ಪ್ರಿನ್ಸಿ ವಿಲಿಯಂ, ಕೇಟ್ ಮಿಡಲ್ಟನ್ ಅವರ ಅಂಗರಕ್ಷಕಿಯಾದ ಸಾರ್ಜೆಂಟ್ ಎಮ್ಮಾ ಪ್ರೊಬರ್ಟ್‌ಗೆ (Sergeant Emma Probert) ವಿಶೇಷ ಗೌರವವನ್ನು ನೀಡಿದ್ದಾರೆ. ಹೀಗೆ ವಿಲಿಯಂ ತಮ್ಮ ಪ್ರೀತಿಯ ಪತ್ನಿಯ ರಕ್ಷಣೆಯಲ್ಲಿ ದೀರ್ಘಾವಧಿಯಿಂದ ಸೇವೆ ಸಲ್ಲಿಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಠೆಗೆ ಅತ್ಯುತ್ತಮ ಗೌರವ ಸಲ್ಲಿಸಿದ್ದಾರೆ. ರಾಜಪ್ರಭುತ್ವಕ್ಕೆ ವಿಶೇಷ ಸೇವೆಗಳನ್ನು ಗುರುತಿಸುವ ಬ್ರಿಟಿಷ್ ಗೌರವವಾದ ರಾಯಲ್ ವಿಕ್ಟೋರಿಯನ್ ಆರ್ಡರ್ (RVO) ನ ಸದಸ್ಯರನ್ನಾಗಿ ಸಾರ್ಜೆಂಟ್ ಎಮ್ಮಾ ಪ್ರೊಬರ್ಟ್ ಅವರನ್ನು ಪ್ರಿನ್ಸ್ ವಿಲಿಯಂ (Prince William) ಸದಸ್ಯರನ್ನಾಗಿ ಮಾಡಿದ್ದಾರೆ. ಎಮ್ಮಾ ಅವರು ರಾಜಮನೆತನಕ್ಕೆ ಸಲ್ಲಿಸಿದ ಗೌರವ ಇದಾಗಿದೆ ಎಂದೇ ಅರಮನೆಯ ವಕ್ತಾರರು ತಿಳಿಸಿದ್ದಾರೆ.


ರಾಯಲ್ ವಿಕ್ಟೋರಿಯನ್ ಆರ್ಡರ್ ಸದಸ್ಯ
51 ವರ್ಷ ವಯಸ್ಸಿನ ಸಾರ್ಜೆಂಟ್, 15 ವರ್ಷಗಳಿಂದ ಕೇಟ್ ಮಿಡಲ್ಟನ್ ಅಂರಗಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2010 ರಿಂದ ರಾಜಮನೆತನದ ಎಲ್ಲಾ ಸಂದರ್ಭಗಳಲ್ಲಿಯೂ, ಕಾರ್ಯಕ್ರಮಗಳಲ್ಲಿಯೂ ಮೂವರು ಮಕ್ಕಳ ತಾಯಿ ಮಿಡಲ್ಟನ್ ಅವರನ್ನು ಜೋಪಾನವಾಗಿ ನೋಡಿಕೊಳ್ಳುವ ಪ್ರಮುಖ ಜವಬ್ದಾರಿ ವಹಿಸಿಕೊಂಡಿದ್ದಾರೆ ಹಾಗೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.


ಕೇಟ್ ಹಾಗೂ ಸಾರ್ಜೆಂಟ್ ನಿಕಟ ಬಾಂಧವ್ಯವವನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ಆಪ್ತ ವಲಯಗಳು ಸುದ್ದಿಮಾಡಿವೆ. ಪರಸ್ಪರರ ಉಪಸ್ಥಿತಿಯನ್ನು ಆನಂದಿಸುವ ಸಾರ್ಜೆಂಟ್, ಹಾಗೂ ಕೇಟ್ ಹೆಚ್ಚಾಗಿ ಜೊತೆಯಾಗಿಯೇ ಸಮಯ ಕಳೆಯುತ್ತಾರೆ ಎಂಬುದಾಗಿ ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.


ವಿಶೇಷ ಗೌರವಕ್ಕೆ ಚಿರಋಣಿ ಎಂದ ಅಂಗರಕ್ಷಕಿ
ತಮಗೆ ನೀಡುವ ವಿಶೇಷ ಗೌರವವನ್ನು ಸ್ವೀಕರಿಸಲು ರಾಜಭವನದಲ್ಲಿ ಸಂತಸದಿಂದಲೇ ಹಾಜರಾದ ಪ್ರೊಬರ್ಟ್ ತಮಗೆ ಸಂದ ವಿಶೇಷ ಗೌರವಕ್ಕೆ ತಾನು ಚಿರಋಣಿ ಎಂದೇ ತಿಳಿಸಿದ್ದಾರೆ. ವಿಲಿಯಂ ಹಾಗೂ ಕೇಟ್ ವಿವಾಹದಂದು ಧರಿಸಿದ್ದ ಅದೇ ಉಡುಪನ್ನು ಧರಿಸಿ ವಿಶೇಷ ಗೌರವವನ್ನು ಸ್ವೀಕರಿಸಲು ಬಂದರು.


ಇದನ್ನೂ ಓದಿ: UK Political Crisis: ಬ್ರಿಟನ್ ಪಿಎಂ ರೇಸ್​ನಲ್ಲಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​ ಮುನ್ನಡೆ, 93 ಸಂಸದರ ಬೆಂಬಲ!


ರಾಜಮನೆತನದ ಅಧಿಕಾರಿಗಳು ಹಾಗೂ ಅಭಿಮಾನಿ ವಲಯದವರು ಪ್ರೋಬರ್ಟ್‌ರನ್ನು ಗೌರವಿಸಲು ಧಾವಿಸಿದ್ದರು ಹಾಗೂ ರಕ್ಷಣಾ ಅಧಿಕಾರಿಯ ನಿಷ್ಠಾವಂತ ಸೇವೆಯನ್ನು ಹೊಗಳಿದ್ದಾರೆ.


ರಾಜಮನೆತನದ ಅಭಿಮಾನಿ ವರ್ಗದ ಮಾತುಗಳೇನು?
ರಾಜಕುಮಾರಿಯನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ಧನ್ಯವಾದಗಳು! ಎಂದು ಒಬ್ಬ ಅಭಿಮಾನಿ ಹೇಳಿದರೆ, ಇನ್ನೊಬ್ಬರು ಪ್ರೋಬರ್ಟ್‌ಗೆ ಸಂದ ಗೌರವವು "ಅರ್ಹವಾಗಿದೆ" ಎಂದು ತಿಳಿಸಿದ್ದಾರೆ. ದೀರ್ಘಾವಧಿ ಸಮಯದಿಂದ ಪ್ರೋಬರ್ಟ್ ರಾಜಕುಮಾರಿಯ ಅಂಗರಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ರಾಜಕುಮಾರಿ ತಮ್ಮ ಸಿಬ್ಬಂದಿಗಳೊಂದಿಗೆ ಹೇಗೆ ವ್ಯವಹರಿಸುತ್ತಿದ್ದರು ಮತ್ತು ಎಷ್ಟು ಆದರಪೂರ್ವಕಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಇತರ ಅಭಿಮಾನಿ ವರ್ಗ ತಿಳಿಸಿದೆ. ವೇಲ್ಸ್‌ನ ರಾಜಕುಮಾರ ಮತ್ತು ರಾಜಕುಮಾರಿ ತಮ್ಮ ಸಿಬ್ಬಂದಿಯೊಂದಿಗೆ ಹೊಂದಿದ್ದ ಸಕಾರಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.


ರಾಜಕುಮಾರಿಯ ಅಂಗರಕ್ಷಕಿಗೆ ನೀಡುತ್ತಿರುವ ಈ ವಿಶೇಷ ಗೌರವದಿಂದ ರಾಜಮನೆತನ ಇನ್ನಷ್ಟು ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ ಎಂದು ಮಾಧ್ಯಮಗಳು ತಿಳಿಸಿವೆ. ರಾಜಕುಮಾರ ಹಾಗೂ ರಾಜಕುಮಾರಿ ತಮ್ಮ ಸಿಬ್ಬಂದಿಗೆ ಎಷ್ಟು ಮಹತ್ವದ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಎಂಬುದು ಈ ವಿಶೇಷ ಗೌರವದಿಂದಲೇ ತಿಳಿದು ಬರುತ್ತದೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿರುವ ಮಾತಾಗಿದೆ.


ಸಿಬ್ಬಂದಿಗಳನ್ನು ಪ್ರೀತಿ ಪೂರ್ವಕವಾಗಿ ನೋಡಿಕೊಳ್ಳುವ ವಿಲಿಯಂ ದಂಪತಿ
ದಂಪತಿಗಳು ಪುತ್ರ ಜಾರ್ಜ್ ಹುಟ್ಟಿದಾಗಿನಿಂದಲೂ ಒಂದೇ ದಾದಿಯನ್ನು ಹೊಂದಿದ್ದಾರೆ ಹಾಗೂ 15 ಕ್ಕಿಂತ ಹೆಚ್ಚಿನ ವರ್ಷಗಳಿಂದ ಅದೇ ಅಂಗರಕ್ಷಕನನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಸಿಬ್ಬಂದಿಯೊಂದಿಗೆ ಅವರು ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಎಷ್ಟು ನಿಕಟತೆಯನ್ನು ಹೊಂದಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ವಿಲಿಯಂ ಹಾಗೂ ಕೇಟ್‌ಗೆ ಅಭಿಮಾನ ವರ್ಗ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.


ಇದನ್ನೂ ಓದಿ:  Joe Biden: ಬೈಡೆನ್ ಕೋಪಕ್ಕೆ ಕಾರಣವಾಯ್ತಾ ಯುಎಸ್ ಆರೋಗ್ಯ ಕಾರ್ಯದರ್ಶಿಯ ಆ ಒಂದು ಹೇಳಿಕೆ?


ಸಾರ್ಜೆಂಟ್ ಎಮ್ಮಾ ಪ್ರೊಬರ್ಟ್ ಅವರು 2010 ರಿಂದ ವೇಲ್ಸ್ ರಾಜಕುಮಾರಿಗೆ ಅಂಗರಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ರಾಜಕುಮಾರಿಯ ಉತ್ತಮ ಸಂಗಾತಿಯೂ ಹೌದು. 2011 ರಲ್ಲಿ ನಡೆದ ವಿಲಿಯಂ ಹಾಗೂ ಕೇಟ್ ವಿವಾಹದಲ್ಲಿ ಕೂಡ ಸಾರ್ಜೆಂಟ್ ಭಾಗವಹಿಸಿದ್ದರು.

Published by:Ashwini Prabhu
First published: