Prince Harry: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಪ್ರಿನ್ಸ್ ಹ್ಯಾರಿ ಅಧಿಕೃತ ಹೇಳಿಕೆ ಬಿಡುಗಡೆ

ಅದ್ಭುತ ಆಡಳಿತಗಾರ್ತಿಯಾಗಿದ್ದ ಅಜ್ಜಿಗೆ ಮೊಮ್ಮಗ ಹ್ಯಾರಿ (Harry) ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಭಾವನಾತ್ಮಕ ಹೇಳಿಕೆ ನೀಡಿ ಅಜ್ಜಿಗೆ ಹ್ಯಾರಿ ವಿದಾಯ ಹೇಳಿದ್ದಾರೆ. ಎಲಿಜಬೆತ್‌ ಸಾವಿನ ನಂತರ ಅವರ ಮೊಮ್ಮಗ ರಾಜಕುಮಾರ ಹ್ಯಾರಿ ತನ್ನ ಮೊದಲ ಅಧಿಕೃತ ಹೇಳಿಕೆಯನ್ನು (Official statement) ಬಿಡುಗಡೆ ಮಾಡಿದ್ದಾರೆ. 

ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಹ್ಯಾರಿ

ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಹ್ಯಾರಿ

  • Share this:
ಬ್ರಿಟನ್‌ ನ ರಾಣಿ ಎಲಿಜಬೆತ್‌ (Queen Elizabeth of Britain) ಸಾವಿಗೆ ಇಡೀ ಜಗತ್ತು ಸಂತಾಪ ಸೂಚಿಸಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ತೀರಿಕೊಂಡಿದ್ದು, ಪ್ರಪಂಚದಾದ್ಯಂತ ಅವರ ಗುಣಗಾನ ನಡೆದಿದೆ. ಅದ್ಭುತ ಆಡಳಿತಗಾರ್ತಿಯಾಗಿದ್ದ ಅಜ್ಜಿಗೆ ಮೊಮ್ಮಗ ಹ್ಯಾರಿ (Harry) ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಭಾವನಾತ್ಮಕ ಹೇಳಿಕೆ ನೀಡಿ ಅಜ್ಜಿಗೆ ಹ್ಯಾರಿ ವಿದಾಯ ಹೇಳಿದ್ದಾರೆ. ಎಲಿಜಬೆತ್‌ ಸಾವಿನ ನಂತರ ಅವರ ಮೊಮ್ಮಗ ರಾಜಕುಮಾರ ಹ್ಯಾರಿ ತನ್ನ ಮೊದಲ ಅಧಿಕೃತ ಹೇಳಿಕೆಯನ್ನು (Official statement) ಬಿಡುಗಡೆ ಮಾಡಿದ್ದಾರೆ.  ತನ್ನ ಅಧಿಕೃತ ಹೇಳಿಕೆಯಲ್ಲಿ ಎಲಿಜಬೆತ್‌ ಅವರನ್ನು ಮನದುಂಬಿ ಹೊಗಳಿದ್ದಾರೆ.

ಆ ಅಧಿಕೃತ ಹೇಳಿಕೆಯಲ್ಲಿ ಏನಿದೆ?
ಎಲಿಜಬೆತ್‌ ಅವರನ್ನು ಮಾಗದರ್ಶಿ, ದಿಕ್ಸೂಚಿ ಎಂದು ಶ್ಲಾಘಿಸಿರುವ ಪ್ರಿನ್ಸ್‌ ಹ್ಯಾರಿ, ಅವರ ಆಶೀರ್ವಾದ ಹಾಗೂ ಘನತೆಯನ್ನು ಕೊಂಡಾಡಿದ್ದಾರೆ. ಅದೇ ವೇಳೆ ತನ್ನ ತಂದೆ 3ನೇ ಚಾರ್ಲ್ಸ್ ರನ್ನು ಗೌರವಿಸಲು ಮರೆಯಲಿಲ್ಲ.

ರಾಣಿ ಎಲಿಜಬೆತ್‌ ಜೀವನ ಸಾಧನೆ ನೆನಪಿಸಿಕೊಂಡಿರುವ ಪ್ರಿನ್ಸ್‌ ಹ್ಯಾರಿ, ಸೇವೆ ಮತ್ತು ಕರ್ತವ್ಯ ಬದ್ಧತೆಯಲ್ಲಿ ಅವರು ಅನೇಕರಿಗೆ ಮಾರ್ಗದರ್ಶನ ನೀಡುವ ದಿಕ್ಸೂಚಿಯಾಗಿದ್ದಾರೆ ಎಂದಿದ್ದಾರೆ. ಇಡೀ ವಿಶ್ವದ ಗೌರವವನ್ನು ಅವರು ಸಂಪಾದನೆ ಮಾಡಿದ್ದರು. ಘನತೆ ಗೌರವವನ್ನು ಅವರು ಜೀವನದುದ್ದಕ್ಕೂ ಉಳಿಸಿಕೊಂಡು ಬಂದಿದ್ದು, ಅದನ್ನು ಇಲ್ಲಿಯ ಪರಂಪರೆಯನ್ನಾಗಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:  Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ಬದುಕೆನ್ನುವುದು ಮೊದಲ ಭೇಟಿಯಂತೆಯೇ ಕೊನೆಯ ಬೇರ್ಪಡುವಿಕೆಯನ್ನೂ ಒಳಗೊಂಡಿದೆ. ಹೀಗಂತ ಹೇಳಿದ್ದು ರಾಣಿ ಎಲಿಜಬೆತ್.‌ ಎಲಿಜಬೆತ್‌ ಅವರ ಪತಿ ತೀರಿಕೊಂಡಾಗ ಅವರು ಹೇಳಿದ ಮಾತುಗಳನ್ನು ನಾವಿಂದು ನೆನೆಯಬೇಕಿದೆ. ಈ ಮಾತುಗಳು ಅವರ ಈ ಸಾವಿನ ಸಂದರ್ಭದಲ್ಲಿ ನಮಗೆಲ್ಲರಿಗೂ ಸಾಂತ್ವನ ಹೇಳುವಂಥ ಮಾತುಗಳಾಗಿವೆ ಅಂತ ಹ್ಯಾರಿ ಹೇಳಿದ್ದಾರೆ.

ಅಜ್ಜಿಗೆ ಧನ್ಯವಾದ ಹೇಳಿದ ಪ್ರಿನ್ಸ್ ಹ್ಯಾರಿ
ಆದರೆ ಅಜ್ಜಿ, ನಿಮ್ಮ ಈ ಅಂತಿಮ ಅಗಲಿಕೆ ನಮಗೆ ಅತೀವ ದುಃಖ ತಂದಿದೆ. ನಮ್ಮ ಎಲ್ಲ ಮೊದಲ ಭೇಟಿಗೂ ನಾನು ಕೃತಜ್ಞನಾಗಿದ್ದೇನೆ. ನಿಮ್ಮೊಂದಿಗಿನ ನನ್ನ ಬಾಲ್ಯದ ನೆನಪುಗಳಿಂದ ನನ್ನ ಕಮಾಂಡರ್‌ ಇನ್‌ ಚೀಫ್‌ ಆಗಿ ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದ ಮೊದಲ ಕ್ಷಣದ ವರೆಗೆ, ನನ್ನ ಪ್ರೀತಿಯ ಹೆಂಡತಿಯನ್ನು ಭೇಟಿಯಾದ ಕ್ಷಣ, ನಿಮ್ಮ ಮೊಮ್ಮಕ್ಕಳನ್ನು ನೀವು ತಬ್ಬಿಕೊಂಡ ಕ್ಷಣ, ನಾನು ನಿಮ್ಮೊಂದಿಗೆ ಕಳೆದ ಸಮಯವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಬರೀ ನಾವು ಮಾತ್ರವಲ್ಲ.. ಇಡೀ ಜಗತ್ತು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದೆ ಎಂದು ಹ್ಯಾರಿ ಹೇಳಿದ್ದಾರೆ.

ಅಲ್ಲದೇ ನಿಮ್ಮ ಸೇವೆ, ನಿಮ್ಮ ಬದ್ಧತೆಗೆ ಧನ್ಯವಾದಗಳು. ನೀವು ನೀಡಿರುವ ಸಲಹೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮ ಅದ್ಭುತ ನಗುವಿಗೆ ನಮ್ಮ ಧನ್ಯವಾದ. ನೀವು ಮತ್ತು ಅಜ್ಜ ಒಂದಾಗಿದ್ದೀರಿ. ಒಟ್ಟಿಗೆ ಇಬ್ಬರೂ ಶಾಂತಿ ನೆಮ್ಮದಿಯಿಂದ ಇರುತ್ತೀರಿ ಅಂದುಕೊಂಡು ನಾವೂ ನಗುತ್ತೇವೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಈ ಹೇಳಿಕೆಯನ್ನು ಆರ್ಚ್‌ವೆಲ್‌ ವೆಬ್‌ ಸೈಟ್‌  ಪೋಸ್ಟ್‌ 
ನಾವೀಗ ನನ್ನ ತಂದೆ ಕಿಂಗ್‌ ಚಾರ್ಲ್ಸ್‌ ಅವರ ಹೊಸ ಪಾತ್ರದಲ್ಲಿ ಗೌರವಿಸುತ್ತೇವೆ ಅಂತಲೂ ಪ್ರಿನ್ಸ್‌ ಹ್ಯಾರಿ ತಮ್ಮ ಅಧಿಕೃತ ಹೇಳಿಕೆಯಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಪ್ರಿನ್ಸ್‌ ಹ್ಯಾರಿ ತಮ್ಮ ಈ ವೈಯಕ್ತಿಯ ಅಧಿಕೃತ ಹೇಳಿಕೆಯನ್ನು ಅವರ ಮತ್ತು ಅವರ ಪತ್ನಿ ಮೇಘನ್‌ ಅವರ ಆರ್ಚ್‌ವೆಲ್‌ ವೆಬ್‌ ಸೈಟ್‌ ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ:  Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ!

ಕಳೆದ ಶನಿವಾರ ಹ್ಯಾರಿ ಅವರು ತಮ್ಮ ಪತ್ನಿ ಮೇಘನ್‌ ಜೊತೆ ತಮ್ಮ ಸಹೋದರ ಪ್ರಿನ್ಸ್‌ ವಿಲಿಯಂ ಹಾಗೂ ಅವರ ಪತ್ನಿ ಕ್ಯಾಥರೀನ್‌ ಅವರನ್ನು ಭೇಟಿಯಾಗಿದ್ದರು. ಈ ಮಧ್ಯೆ ಪ್ರಿನ್ಸ್‌ ಹ್ಯಾರಿ ತಮ್ಮ ಪತ್ನಿ ಮೇಘನ್‌ ಅವರೊಂದಿಗೆ ರಾಜಮನೆತನದಿಂದ ಕರ್ತವ್ಯದಿಂದ ಕೆಳಗಿಳಿದಿದ್ದಾರೆ ಮತ್ತು ̄2020 ರಲ್ಲಿ ಅವರು ಯುನೈಟೆಡ್‌ ಸ್ಟೇಟ್ಸ್‌ ಗೆ ಸ್ಥಳಾಂತರಗೊಂಡಿದ್ದಾರೆ.
Published by:Ashwini Prabhu
First published: