King Charles III: ಬ್ರಿಟನ್ ರಾಜನಾದ ಚಾರ್ಲ್ಸ್, ರಾಜಮನೆತನದಿಂದ ಅಧಿಕೃತ ಘೋಷಣೆ

ಬ್ರಿಟನ್ ರಾಣಿ ನಿಧನದ ಬಳಿಕ 73 ವರ್ಷ ವಯಸ್ಸಿನ ಚಾರ್ಲ್ಸ್ ಅವರು ಶತಮಾನಗಳ ಹಳೆಯ ಪ್ರೋಟೋಕಾಲ್ ಪ್ರಕಾರ ಅರಮನೆಯ ಉತ್ತರಾಧಿಕಾರಿಯಾದರು. ಇಂದು ಅವರನ್ನು ರಾಜ ಅಂತ ಅಧಿಕೃತವಾಗಿ ಘೋಷಿಸಲಾಯ್ತು. ಈ ಸಮಾರಂಭವು ಲಂಡನ್‌ನ ರಾಜಮನೆತನದ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆಯಿತು. 

ರಾಜಪದವಿಗೆ ಏರಿದ ಚಾರ್ಲ್ಸ್

ರಾಜಪದವಿಗೆ ಏರಿದ ಚಾರ್ಲ್ಸ್

  • Share this:
ಇಂಗ್ಲೆಂಡ್: ಪ್ರಿನ್ಸ್ ಚಾರ್ಲ್ III (Prince Charles III) ಅವರನ್ನು ಅಧಿಕೃತವಾಗಿ ಬ್ರಿಟನ್ ರಾಜ (King of Britain) ಅಂತ ಘೋಷಿಸಲಾಗಿದೆ. ಇಂದು ಸೇಂಟ್ ಜೇಮ್ಸ್ ಅರಮನೆಯಲ್ಲಿ (St James's Palace) ನಡೆದ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ III ಅವರನ್ನು ಅಧಿಕೃತವಾಗಿ ರಾಜ ಎಂದು ಘೋಷಿಸಲಾಯಿತು. ಕಳೆದ ಗುರುವಾರ ಇಂಗ್ಲೆಂಡ್‌ನ (England) ಬಾಲ್ಮೋರಲ್ ಕೋಟೆಯಲ್ಲಿ (almoral Castle) ಬ್ರಿಟಿಷ್ ರಾಣಿ (British Queen) ಎಲಿಜಬೆತ್ II (Elizabeth II) ನಿಧನರಾದರು. ಈ ಬಳಿಕ 73 ವರ್ಷ ವಯಸ್ಸಿನ ಚಾರ್ಲ್ಸ್ ಅವರು ಶತಮಾನಗಳ ಹಳೆಯ ಪ್ರೋಟೋಕಾಲ್ ಪ್ರಕಾರ ಅರಮನೆಯ ಉತ್ತರಾಧಿಕಾರಿಯಾದರು. ಇಂದು ಅವರನ್ನು ರಾಜ ಅಂತ ಅಧಿಕೃತವಾಗಿ ಘೋಷಿಸಲಾಯ್ತು. ಈ ಸಮಾರಂಭವು ಲಂಡನ್‌ನ ರಾಜಮನೆತನದ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆಯಿತು. ಇದರಲ್ಲಿ ಪ್ರವೇಶ ಮಂಡಳಿ, ಹಿರಿಯ ರಾಜಕಾರಣಿಗಳು ಮತ್ತು ರಾಜನಿಗೆ ಸಲಹೆ ನೀಡುವ ಅಧಿಕಾರಿಗಳು ಭಾಗವಹಿಸಿದ್ದರು.

ನೂತನ ಬ್ರಿಟನ್ ರಾಜನ ಭಾಷಣ

ಅಧಿಕಾರ ಸ್ವೀಕಾರದ ಬಳಿಕ ಜನರನ್ನು ಉದ್ದೇಶಿಸಿ ಪ್ರಿನ್ಸ್ ಚಾರ್ಲ್ ಮಾತನಾಡಿದರು. ತಮ್ಮ ತಾಯಿ, ದಿವಂಗತ ರಾಣಿ ಎಲಿಜಬೆತ್ II ಅವರನ್ನು ಅನುಕರಿಸಲು ಮತ್ತು ನಮ್ಮ ಉಳಿದ ಜೀವನವನ್ನು ಜನರಿಗೆ ಸೇವೆ ಸಲ್ಲಿಸಲು ಬಳಸುವುದಾಗಿ ಪ್ರತಿಜ್ಞೆ ಮಾಡಿದರು. " ನನ್ನ ತಾಯಿ ಜೀವನ ಪರ್ಯಂತ ಪ್ರೀತಿ ಮತ್ತು ನಿಸ್ವಾರ್ಥ ಸೇವೆಗೆ ಉದಾಹರಣೆಯಾಗಿ ಬಾಳಿದರು.  ಈ ಮಹಾನ್ ಪರಂಪರೆಯ ಬಗ್ಗೆ ಮತ್ತು ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಭಾರವಾದ ಜವಾಬ್ದಾರಿಗಳ ಬಗ್ಗೆ ನನಗೆ ಆಳವಾಗಿ ತಿಳಿದಿದೆ ಎಂದು ಚಾರ್ಲ್ಸ್ ತಮ್ಮ ಮೊದಲು ಭಾಷಣದಲ್ಲಿ ಹೇಳಿದರು

ಬ್ರಿಟನ್ ಸಂಸತ್ ಸದಸ್ಯರ ಮರು ಪ್ರಮಾಣವಚನ

ಯುಕೆ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ಹೊಸ ರಾಜ ಚಾರ್ಲ್ಸ್ III ರವರಿಗೆ ಔಪಚಾರಿಕವಾಗಿ ತಮ್ಮ ಸಂಸದೀಯ ಪ್ರಮಾಣವಚನವನ್ನು ಮರ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಲಿಂಡ್ಸೆ ಹೊಯ್ಲ್ ಅವರು "ಅವರ ಮೆಜೆಸ್ಟಿ ಕಿಂಗ್ ಚಾರ್ಲ್ಸ್, ಅವರ ಉತ್ತರಾಧಿಕಾರಿಗಳು ಮತ್ತು ಉತ್ತರಾಧಿಕಾರಿಗಳಿಗೆ ನಿಜವಾದ ನಿಷ್ಠೆಯನ್ನು ಹೊಂದುತ್ತಾರೆ" ಎಂದು ವಾಗ್ದಾನ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ.

ಇದನ್ನೂ ಓದಿ: Britain Royal Family: ಬ್ರಿಟನ್ ರಾಜಮನೆತನದ ಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ರಾಯಲ್ ಕಹಾನಿ

ಇನ್ನು ಸುದೀರ್ಘ ಸೇವೆ ಸಲ್ಲಿಸಿದ ಶಾಸಕರು ಮತ್ತು ಪ್ರಧಾನ ಮಂತ್ರಿ ಸಹಿತ ಎಲ್ಲಾ ಶಾಸಕರು ಚುನಾಯಿತರಾದ ನಂತರ ರಾಜನಿಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡುತ್ತಾರೆ. ದೊರೆ ಬದಲಾದಾಗ ಹೊಸ ಪ್ರತಿಜ್ಞೆ ಮಾಡುವುದು ಕಾನೂನಿನ ಪ್ರಕಾರ ಕಡ್ಡಾಯವೇನಲ್ಲ. ಆದರೆ ಎಲ್ಲಾ 650 ಶಾಸಕರು ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶವಿದೆ.

ಇದನ್ನೂ ಓದಿ: Kohinoor: ಬ್ರಿಟನ್ ರಾಣಿ ಮರಣದ ನಂತರ ಇವರ ಮುಡಿಗೇರಲಿದ್ಯಂತೆ ಕೊಹಿನೂರ್ ಕಿರೀಟ!

70 ವರ್ಷಗಳ ಕಾಲ ಕಾದಿದ್ದ ಚಾರ್ಲ್ಸ್

70 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಜಕುಮಾರ ಚಾರ್ಲ್ಸ್ (Prince Charles) ಅವರಿಗೆ ಯುಕೆಯ ರಾಜನಾಗುವ ಅದೃಷ್ಟ ಒಲಿದುಬಂದಿದೆ.  ಕಳೆದ ಗುರುವಾರದಂದು ಯುಕೆ ರಾಣಿ ಎಲಿಜಬೆತ್ ಅವರ ನಿಧನದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಅವರು ಈಗ ಯುನೈಟೆಡ್ ಕಿಂಗ್ಡಮ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ 14 ಕ್ಷೇತ್ರಗಳ ರಾಜನಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈ ರೀತಿ ರಾಜನ (King) ಪದವಿಗಾಗಿ 70 ಕ್ಕೂ ಹೆಚ್ಚು ವರ್ಷಗಳ ಕಾಯುವಿಕೆ ಯುಕೆ ಇತಿಹಾಸದಲ್ಲೇ ಅತಿ ಸುದೀರ್ಘ ಕಾಯುವಿಕೆಯೂ ಆಗಿದೆ ಎಂಬುದು ವಿಶೇಷ.
Published by:Annappa Achari
First published: