Prince Charles: 70 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ, ರಾಜನಾದ ಪ್ರಿನ್ಸ್ ಚಾರ್ಲ್ಸ್!

ಯುಕೆ ರಾಣಿ ಎಲಿಜಬೆತ್ ಅವರ ನಿಧನದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಅವರು ಈಗ ಯುನೈಟೆಡ್ ಕಿಂಗ್ಡಮ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ 14 ಕ್ಷೇತ್ರಗಳ ರಾಜನಾಗಿ ಅಧಿಕಾರಕ್ಕೆ ಬರಲಿದ್ದಾರೆ. ಈ ರೀತಿ ರಾಜನ ಪದವಿಗಾಗಿ 70 ಕ್ಕೂ ಹೆಚ್ಚು ವರ್ಷಗಳ ಕಾಯುವಿಕೆ ಯುಕೆ ಇತಿಹಾಸದಲ್ಲೇ ಅತಿ ಸುದೀರ್ಘ ಕಾಯುವಿಕೆಯೂ ಆಗಿದೆ ಎಂಬುದು ವಿಶೇಷ.

 ಪ್ರಿನ್ಸ್ ಚಾರ್ಲ್ಸ್

ಪ್ರಿನ್ಸ್ ಚಾರ್ಲ್ಸ್

  • Share this:
ಕೊನೆಗೂ 70 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಜಕುಮಾರ ಚಾರ್ಲ್ಸ್ (Prince Charles) ಅವರಿಗೆ ಯುಕೆಯ ರಾಜನಾಗುವ ಅದೃಷ್ಟ ಒಲಿದುಬಂದಿದೆ. ಗುರುವಾರದಂದು ಯುಕೆ ರಾಣಿ ಎಲಿಜಬೆತ್ (Queen Elizabeth) ಅವರ ನಿಧನದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಅವರು ಈಗ ಯುನೈಟೆಡ್ ಕಿಂಗ್ಡಮ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ 14 ಕ್ಷೇತ್ರಗಳ ರಾಜನಾಗಿ ಅಧಿಕಾರಕ್ಕೆ ಬರಲಿದ್ದಾರೆ. ಈ ರೀತಿ ರಾಜನ (King) ಪದವಿಗಾಗಿ 70 ಕ್ಕೂ ಹೆಚ್ಚು ವರ್ಷಗಳ ಕಾಯುವಿಕೆ ಯುಕೆ ಇತಿಹಾಸದಲ್ಲೇ ಅತಿ ಸುದೀರ್ಘ ಕಾಯುವಿಕೆಯೂ (Waiting) ಆಗಿದೆ ಎಂಬುದು ವಿಶೇಷ.  ಈಗ ಚಾರ್ಲ್ಸ್ ಅವರೇನೋ ರಾಜನಾಗಿದ್ದಾರೆ, ಆದರೆ ಅವರ ಮುಂದಿನ ಹಾದಿ ಅಷ್ಟೊಂದು ಸುಗಮ ಎನ್ನಲಾಗುವುದಿಲ್ಲ. 73 ರ ಪ್ರಾಯದ ಚಾರ್ಲ್ಸ್ ಅವರ ಮುಂದೆ ಸಾಕಷ್ಟು ಕಠಿಣಮಯವಾದ ಸವಾಲುಗಳಿವೆ.

ಈ ಮುಂಚೆ ಇಂಗ್ಲೆಂಡ್ ರಾಣಿ ಎಲಿಜಬೆತ್ ಸಾಕಷ್ಟು ಜನಪ್ರೀಯರಾಗಿದ್ದರು ಹಾಗೂ ಅವರು ತಮ್ಮ ರಾಜಮನೆತನದಲ್ಲೇ ಅನೇಕ ಸಂಬಂಧಗಳು ಹದಗೆಟ್ಟಿದ್ದು ಹಾಗೂ ಬಕ್ಕಿಂಗ್ ಹ್ಯಾಮ್ ಅರಮೆಯ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಜನಾಂಗೀಯ ಆರೋಪಗಳು ಬಂದಿದ್ದನ್ನು ಎದುರಿಸಿದ್ದರು. ಈಗ ಹಿರಿಯನಾಗಿರುವ ಚಾರ್ಲ್ಸ್ ಅವರು ಈ ಅಂಶಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಯುಕೆಯ ಹೊಸ ರಾಜನಾಗಿ ಪ್ರಿನ್ಸ್ ಚಾರ್ಲ್ಸ್
ಚಾರ್ಲ್ಸ್ ಹೊಸ ರಾಜನಾಗಿದ್ದರೂ ತಮ್ಮ ಎರಡನೇ ಪತ್ನಿ ಕ್ಯಾಮೆಲಾ ಅವರಿಂದಾಗಿ ಮಿಶ್ರ ಪ್ರತಿಕ್ರಿಯೆ ಎದುರಿಸಬಹುದು, ಅಲ್ಲದೆ ಅವರು ಅಶಕ್ತ, ಎಲ್ಲದರಲ್ಲಿ ಮೂಗು ತೂರಿಸುವ ಜಾಯಮಾನದವರೆಂದು ಈಗಾಗಲೇ ಅವರ ವಿರೋಧಿಗಳಿಂದ ಜರಿಯಲಾಗುತ್ತಿದೆ ಎಂಬ ಮಾತುಗಳೂ ಸಹ ಕೇಳಿಬಂದಿವೆ. ಚಾರ್ಲ್ಸ್ ಅವರ ಸಸ್ಯಗಳೊಂದಿಗೂ ಮಾತನಾಡುವ ಮನಸ್ಥಿತಿ, ತಮ್ಮ ಮೊದಲ ಪತ್ನಿ ಪ್ರಿನ್ಸೆಸ್ ಡಯಾನಾ ಅವರೊಂದಿಗಿನ ವಿಫಲವಾದ ಮದುವೆ ಮುಂತಾದ ಅಂಶಗಳು ಅವರನ್ನೊಬ್ಬ ಅಸಮರ್ಥ ರಾಜನೆಂದೇ ಬಿಂಬಿಸಬಹುದೆಂಬ ಸುದ್ದಿಗಳೂ ಸಹ ಈ ಸಂದರ್ಭದಲ್ಲಿ ಹರಿದಾಡುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ:  Queen Elizabeth II: ರಾಣಿ ಎಲಿಜಬೆತ್ ಬದುಕಿನ ಅಪರೂಪದ ಚಿತ್ರಗಳಿವು

ಆದರೆ, ಇನ್ನೊಂದೆಡೆ ಚಾರ್ಲ್ಸ್ ಬೆಂಬಲಿಗರು ಹೇಳುವ ಪ್ರಕಾರ, ಚಾರ್ಲ್ಸ್ ತಾವು ಮಾಡುವ ಉತ್ತಮ ಕೆಲಸಗಳ ಅಸ್ಪಷ್ಟತೆಯು ಅವರನ್ನು ತಪ್ಪು ತಿಳಿಯುವಂತೆ ಮಾಡಿದೆ ಹಾಗೂ ಹವಾಮಾನ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಚಾರ್ಲ್ಸ್ ಪ್ರಸ್ತುತ ಸಮಯಕ್ಕಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂಬ ನಿಲುವನ್ನು ವ್ಯಕ್ತಪಡಿಸುತ್ತಾರೆ. ಬೆಂಬಲಿಗರ ಪ್ರಕಾರ, ಚಾರ್ಲ್ಸ್ ಅವರು ಬ್ರಿಟನ್ನಿನ ಎಲ್ಲ ಸಮುದಾಯ ಹಾಗೂ ಎಲ್ಲ ವರ್ಗದ ಜನರ ಬಗ್ಗೆ ಸಾಕಷ್ಟು ಕಾಳಜಿ ಇರುವ ವ್ಯಕ್ತಿಯಾಗಿದ್ದಾರೆ.

ಚಾರ್ಲ್ಸ್ ಚಾರಿಟಿ ಟ್ರಸ್ಟ್ 
ಚಾರ್ಲ್ಸ್ ಅವರ ಚಾರಿಟಿ ಟ್ರಸ್ಟ್ 50 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಬ್ರಿಟನ್ನಿನ ಒಂದು ಮಿಲಿಯನ್ ನಿರುದ್ಯೋಗಿಗಳು ಹಾಗೂ ದುರ್ಬಲ ಯುವಕರಿಗೆ ನೆರವು ನೀಡಿದೆ ಎಂದು ಚಾರ್ಲ್ಸ್ ಅಭಿಮಾನಿ ವರ್ಗದವರ ಮಾತಾಗಿದೆ.

"ನೀವು ಈಗ ಯಾವುದೇ ಜಯ ಗಳಿಸುವ ಸ್ಥಿತಿಯಲ್ಲಿಲ್ಲ, ನೀವು ಅಕ್ಷರಶಃ ಏನೂ ಮಾಡದೇ ಹೋದರೂ ಎಲ್ಲರೂ ನಿಮ್ಮನ್ನು ದೂರುತ್ತಾರೆ. ನೀವು ಏನನ್ನಾದರೂ ಪ್ರಯತ್ನಿಸಲು ಹೋಗಿ ಅದರಲ್ಲಿ ಸಿಲುಕಿಕೊಂಡರೆ, ಆಗ ನಿಮ್ಮ ಸಹಾಯಕ್ಕೆ ಏನಾದರೂ ಪ್ರಯತ್ನಿಸಿದರೂ ಸಹ ನಿಮ್ಮನ್ನು ದೂರುತ್ತಾರೆ" ಈ ಹಿಂದೆ ಚಾರ್ಲ್ಸ್ ಅವರು ಒಂದೊಮ್ಮೆ ಟಿವಿ ಡಾಕ್ಯೂಮೆಂಟರಿಯಲ್ಲಿ ಈ ರೀತಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಚಾರ್ಲ್ಸ್ ಆಧುನಿಕ ಕಾಲದ ಶೈಲಿಯಲ್ಲಿದ್ದರೂ ಅವರು ತಮ್ಮ ರಾಜಮನೆತನದ ವೈಭವ ಹಾಗೆಯೇ ಉಳಿಸಿಕೊಳ್ಳಬೇಕೆಂಬ, ಅದನ್ನು ಇಂದಿನ ಸಮಯಕ್ಕೆ ಸಮತೋಲನವಾಗಿರುವಂತೆ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ತೊಳಲಾಡುತ್ತಿದ್ದರು.

ವೈಯಕ್ತಿಕ ಜೀವನ
ಇನ್ನು, ಚಾರ್ಲ್ಸ್ ಅವರ ವೈಯಕ್ತಿಕ ಜೀವನವೂ ಒಂದು ರೀತಿಯಲ್ಲಿ ಸಂಪನ್ನವಾಗಿಲ್ಲ. ಅವರ ಇಬ್ಬರು ಮಕ್ಕಳಲ್ಲಿ 40 ರ ಪ್ರಾಯದ ವಿಲಿಯಮ್ (ಮುಂದಿನ ವಾರಸುದಾರ) ಸಾಂಪ್ರದಾಯಿಕ ಕರ್ತವ್ಯ, ಚಾರಿಟಿ ಹಾಗೂ ಸೈನ್ಯ ಶೋಭಾಯಾತ್ರೆಗಳಂತಹ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಬ್ಬ ಮಗ 37 ರ ಪ್ರಾಯದ ಹ್ಯಾರಿ ಅರಮೆನೆಯಲ್ಲಿ ವಾಸಿಸುವುದೇ ಇಲ್ಲ. ಹ್ಯಾರಿ ಹಾಲಿವುಡ್ಡಿನ ಮಾಜಿ ನಟಿ ಮೆಘನ್ ಅವರನ್ನು ಮದುವೆಯಾಗಿ ಅವರ ಕುಟುಂಬದೊಂದಿಗೆ ಲಾಸ್ ಏಂಜಲ್ಸ್ ನಲ್ಲಿ ವಾಸಿಸುತ್ತಾರೆ. ಇನ್ನು, ಚಾರ್ಲ್ಸ್ ಅವರ ಸಹೋದರರು ಅವರೊಂದಿಗೆ ಒಂದೊಮ್ಮೆ ನಿಕಟ ಸಂಬಂಧ ಹೊಂದಿದ್ದರೂ ಈಗ ಮಾತುಗಳನ್ನೂ ಸಹ ಆಡುವುದಿಲ್ಲ.

ಇದನ್ನೂ ಓದಿ: Queen Elizabeth II: ಪಾಸ್​ಪೋರ್ಟ್​ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!

ಜನನ
ಚಾರ್ಲ್ಸ್ ಫಿಲಿಪ್ ಅರ್ಥರ್ ಜಾರ್ಜ್ ಎಂಬ ಪೂರ್ಣ ಹೆಸರುಳ್ಳ ಪ್ರಿನ್ಸ್ ಚಾರ್ಲ್ಸ್ ಅವರು ಹುಟ್ಟಿದ್ದು ನವೆಂಬರ್ 14, 1948 ರಂದು. ಈ ಹಿಂದೆ ಇದ್ದ ರಾಜಮನೆತನಗಳಲ್ಲಿ ಕಂಡುಬರುವಂತಹ ಬೆಳೆಯುವಿಕೆಯನ್ನು ಅವರು ಕಾಣಲಿಲ್ಲ, ಬದಲಾಗಿ ಅವರನ್ನು ವಿಭಿನ್ನ ರೀತಿಯಲ್ಲಿ ಬೆಳೆಸಲಾಯಿತು. ಅವರು ಮೂರು ವರ್ಷದವರಾಗಿದ್ದಾಗಲೇ ಅಂದರೆ 1952ರ ಸಮಯದಲ್ಲಿ ಅವರು ಯುಕೆಯ ರಾಜಮನೆತನದ ವಾರಸುದಾರನಾದರೆ ಅವರ ತಾಯಿ ಎಲಿಜಬೆತ್ ರಾಣಿಯಾಗಿ ಕಿರಿಟ ಧರಿಸಿದರು.

ಶಿಕ್ಷಣ
ಚಾರ್ಲ್ಸ್ ಅವರು ಈ ಹಿಂದೆ ರಾಜಮನೆತನದ ರಾಜಕುಮಾರರು ಪಡೆಯುತ್ತಿದ್ದ ಮನೆಯಲ್ಲೀ ಖಾಸಗಿ ಶಿಕ್ಷಣ ಪಡೆಯಲಿಲ್ಲ, ಬದಲಾಗಿ ಅವರನ್ನು ಶಾಲೆಗೆ ಕಳುಹಿಸಲಾಯಿತು. ತದನಂತರ ಅವರನ್ನು ಕಠಿಣವಾದ ಬೋರ್ಡಿಂಗ್ ಶಾಲೆಗೂ ಕಳುಹಿಸಲಾಯಿತು. ಆ ಸಮಯವನ್ನು ಚಾರ್ಲ್ಸ್ ನರಕಯಾತನೆ ಎಂದು ಮುಂದೆ ವಿವರಿಸಿದ್ದರು.

ತದನಂತರ, ಅವರು ತಮ್ಮ ಸಂಪ್ರದಾಯ ಮುರಿಯುತ್ತ ಕೆಂಬ್ರಿಡ್ಜ್ ನಲ್ಲಿರುವ ಟ್ರಿನಿಟಿ ಕಾಲೇಜಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. 1969 ರಲ್ಲಿ ಅವರನ್ನು ಪ್ರಿನ್ಸ್ ಆಫ್ ವೇಲ್ಸ್ ಅನ್ನಾಗಿ ಘೋಷಿಸಲಾಯಿತು. ಅದರ ಮುಂದಿನ ವರ್ಷದಲ್ಲಿ ಅವರು ತಮ್ಮ ಪದವಿ ಪೂರ್ಣಗೊಳಿಸುವ ಮೂಲಕ ಆ ರೀತಿ ಪದವಿ ಪಡೆದ ಮೊದಲ ಬ್ರಿಟಿಷ್ ರಾಜಕುಮಾರನಾದರು.

ಮದುವೆ
ಚಾರ್ಲ್ಸ್ ಅವರು ಎಂದಿಗೂ ತಮ್ಮ ವಿಫಲವಾದ ಡಯಾನಾ ಜೊತೆಯ ಮದುವೆ ಹಾಗೂ ತಾವು ಸಂಬಂಧ ಹೊಂದಿದ್ದ ಕ್ಯಾಮಿಲ್ಲಾ ಪಾರ್ಕರ್ ಅವರೊಂದಿಗಿನ ಅಂಶಕ್ಕಾಗಿಯೇ ಹೆಚ್ಚು ಜನಪ್ರೀಯರಾಗಿದ್ದಾರೆ. 1981 ರಲ್ಲಿ ಚಾರ್ಲ್ಸ್ ಅವರು ಜಾಗತಿಕ ಟಿವಿ ಪ್ರಸಾರದ ಮುಂದೆ ಡಯಾನಾ ಸ್ಪೆನ್ಸರ್ ಅವರೊಂದಿಗೆ ಮದುವೆಯಾದಾಗ ಸುಮಾರು 750 ಮಿಲಿಯನ್ ಜನರು ಅದನ್ನು ವೀಕ್ಷಿಸಿದ್ದರು. ಡಯಾನಾ ಅವರಿಗೊಬ್ಬ ಅತ್ಯುತ್ತಮ ಸಂಗಾತಿ ಎಂದೇ ಹೇಳಲಾಗುತ್ತಿತ್ತು. 1982 ಹಾಗೂ 84 ರಲ್ಲಿ ಅವರಿಗೆ ವಿಲಿಯಮ್ ಮತ್ತು ಹ್ಯಾರಿ ಎಂಬ ಇಬ್ಬರು ಪುತ್ರರು ಜನಿಸಿದರು. ಎಲ್ಲವೂ ಸರಿ ಎಂದೇ ತೋಚುತ್ತಿದ್ದರೂ ಪರದೆಯ ಒಳಗೆ ಬೇರೆಯದ್ದೇ ಕಥೆ ನಡೆಯುತ್ತಿತ್ತು.

ಇದನ್ನೂ ಓದಿ:  Queen Elizabeth-II ಮರಣದ ನಂತರ ಸ್ಕಾಟ್ಲೆಂಡ್‌ನಲ್ಲಿ ಆಪರೇಷನ್ ಯುನಿಕಾರ್ನ್ ಜಾರಿ: ಹೀಗಂದ್ರೆ ಏನು?

ತಮ್ಮ ಸಮಸ್ಯೆಗಳಿಗಾಗಿ ಕ್ಯಾಮಿಲ್ಲಾ ಅವರೇ ಕಾರಣ ಎಂದು ಡಯಾನಾ ದೂಷಿಸಿದ್ದರು. ಕೊನೆಗೆ ಡಯಾನಾ ಆ ಸಂಬಂಧದಿಂದ ಹೊರನಡೆಯಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅವರು ಟಿವಿ ಸಂದರ್ಶನವೊಂದರಲ್ಲಿ "ನನ್ನ ಮದುವೆಯಲ್ಲಿ ಮೂರು ಜನರಿದ್ದರು" ಎಂದು ಹೇಳುವ ಮೂಲಕ ಚಾರ್ಲ್ಸ್ ಅವರು ಕ್ಯಾಮಿಲ್ಲಾ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮಾತನಾಡಿದ್ದರು. 1996 ರಲ್ಲಿ ಡಯಾನಾ ವಿಚ್ಛೇದನ ಪಡೆದುಕೊಂಡರು. 1997ರ ಪ್ಯಾರಿಸ್ ಕಾರು ಅಪಘಾತದಲ್ಲಿ ಡಯಾನಾ ತೀರಿಕೊಂಡಾಗ ಅನೇಕರು ಇದು ಚಾರ್ಲ್ಸ್ ಹಾಗೂ ಕ್ಯಾಮಿಲ್ಲಾ ಅವರ ಪಿತೂರಿ ಎಂದು ದೂರಿದ್ದರು. ಈ ಮೂಲಕ ಚಾರ್ಲ್ಸ್ ಅವರ ಜನಪ್ರೀಯತೆ ಮತ್ತಷ್ಟು ಕುಸಿಯಿತು.

ಇದೀಗ, ಚಾರ್ಲ್ಸ್ ಮತ್ತೆ ರಾಜನಾಗಿದ್ದಾರಾದರೂ ಅವರಿಗೆ ರಾಣಿಗೆ ಸಿಲುಕಿದ್ದಂತಹ ಸ್ಥಾನ ಸಿಗುವುದೋ ಕಾದು ನೋಡಬೇಕು.
Published by:Ashwini Prabhu
First published: