• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: 9 ವರ್ಷಗಳ ಮೋದಿ ಆಡಳಿತ, ಜಾಗತಿಕ ವ್ಯವಹಾರದಲ್ಲಿ ಭಾರತದ ಅಭೂತಪೂರ್ವ ಬೆಳವಣೆಗೆಯ ಒಂದು ನೋಟ

Narendra Modi: 9 ವರ್ಷಗಳ ಮೋದಿ ಆಡಳಿತ, ಜಾಗತಿಕ ವ್ಯವಹಾರದಲ್ಲಿ ಭಾರತದ ಅಭೂತಪೂರ್ವ ಬೆಳವಣೆಗೆಯ ಒಂದು ನೋಟ

ನರೇಂದ್ರ ಮೋದಿ ಮತ್ತು ವಿಶ್ವದ ನಾಯಕರು

ನರೇಂದ್ರ ಮೋದಿ ಮತ್ತು ವಿಶ್ವದ ನಾಯಕರು

ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಕೋವಿಡ್ ನಂತಹ ಮಹಾಮಾರಿ ಭಾರತ ಸೇರಿದಂತೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಟೀಕೆ, ಟಿಪ್ಪಣಿಯ ನಡುವೆಯೂ ಭಾರತ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೊಳಾಗಿತ್ತು.

ಮುಂದೆ ಓದಿ ...
  • Share this:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರಚನೆಯಾಗಿ  ಮೇ 30ಕ್ಕೆ  9 ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಚಂಡ ಗೆಲುವಿನೊಂದಿಗೆ ಸರಕಾರ ರಚಿಸಿದ್ದು, ಪ್ರಧಾನಿ ಮೋದಿ ಅವರು ಸಾರ್ಕ್ ದೇಶಗಳ ಮುಖಂಡರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಕೋವಿಡ್ ನಂತಹ ಮಹಾಮಾರಿ ಭಾರತ ಸೇರಿದಂತೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಟೀಕೆ, ಟಿಪ್ಪಣಿಯ ನಡುವೆಯೂ ಭಾರತ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೊಳಾಗಿತ್ತು.


ಪ್ರಧಾನಿ ಮೋದಿಯ ಪ್ರಭಾವ 


ಪಿಎಂ ಮೋದಿ ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರ ಉಪಸ್ಥಿತಿಯಲ್ಲಿ ವಿಶ್ವಾಸ ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಬಲಿಷ್ಠ ಚೀನಾವನ್ನು ಎದುರಿಸುವ ಶಕ್ತಿಯನ್ನು ಹೊಂದಿರುವ ಭಾರತ ದೇಶದ ಪರವಾಗಿ ಇತರೆ ಪಶ್ಚಿಮಾತ್ಯ ರಾಷ್ಟ್ರಗಳು ಬೆನ್ನೆಲುಬಾಗಿ ನಿಂತಿದ್ದು ಇದಕ್ಕೆಲ್ಲ ಕಾರಣ ಮೋದಿ ಎನ್ನುವುದು ಹಲವರ ಅಭಿಪ್ರಾಯ.


" ವಿವಿಧ ನಾಯಕರು ಮತ್ತು ವಿವಿಧ ದೇಶಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವ ನಮ್ಮ ಪಕ್ಷದ ಸಾಮರ್ಥ್ಯ, ವಿಶೇಷವಾಗಿ ಪ್ರಧಾನಿಯವರ ಸಾಮರ್ಥ್ಯದಿಂದಾಗಿ ಭಾರತವು ಉನ್ನತ ಹಂತಕ್ಕೆ ತಲುಪಿದೆ" ಎಂದು ಜಿ 20 ಶೆರ್ಪಾ ಅಮಿತಾಬ್ ಕಾಂತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: Narendra Modi: ಅನಿವಾಸಿ ಭಾರತೀಯರಿಂದಾಗಿ ಭಾರತ-ಆಸ್ಟ್ರೇಲಿಯಾ ನಡುವಿನ ಸಂಬಂಧ ಅಭಿವೃದ್ಧಿಗೊಂಡಿದೆ: ಪ್ರಧಾನಿ ಮೋದಿ


ಇತರ ದೇಶದವರ ಜೊತೆ ಮೋದಿ ಉತ್ತಮ ಬಾಂಧವ್ಯ 


ಪ್ರಧಾನಿ ಮೋದಿ ಅವರು ಆಗಸ್ಟ್ 2014 ರಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಭಾರತದ ಪರಿಧಿಯ ಹೊರಗಿನ ಮೊದಲ ಭೇಟಿಯ ಸಮಯದಲ್ಲಿ  ಉತ್ತಮ ಬಾಂಧವ್ಯವನ್ನು ಬೆಳೆಸಿದರು. ಕಳೆದ ಜುಲೈನಲ್ಲಿ ತಮ್ಮ ಸ್ನೇಹಿತನ (ಶಿಂಜೋ ಅಬೆ) ಹತ್ಯೆಯಾದಾಗ ಪ್ರಧಾನಿ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದರು. ಸ್ನೇಹಿತನ  ಅಂತ್ಯಕ್ರಿಯೆಗಾಗಿ ಅವರು ಜಪಾನ್‌ಗೆ ಹೋಗಿದ್ದರು ಎಂದು ವರದಿಗಳು ಉಲ್ಲೇಖಿಸುತ್ತವೆ.


" ಪ್ರಧಾನಿ ಮೋದಿ ಮೊದಲಿನಿಂದಲೂ ತಂತ್ರವನ್ನು ಹೂಡುತ್ತಲೇ ಬಂದಿದ್ದಾರೆ, ಅಧಿಕಾರ ಸ್ವೀಕರಾ ಸಮಾರಂಭಕ್ಕೆ ತಮ್ಮ ಹತ್ತಿರದ ನೆರೆಯ ದಕ್ಷಿಣ ಏಷ್ಯಾ  ನಾಯಕರನ್ನು ಆಹ್ವಾನಿಸುವ ಬಗ್ಗೆ ಯೋಚಿಸಿದ ಮೊದಲ ಭಾರತೀಯ ಪ್ರಧಾನಿ ಮೊದಿ. ಇದರಿಂದಾಗಿ ನಾವು ಇತರೆ ದೇಶದ ಜೊತೆ ಬಾಂಧವ್ಯ ಬೆಳಸಲು ಸಾಧ್ಯವಾಯಿತು" ಎಂದು ಭಾರತದ ಮಾಜಿ ರಾಯಭಾರಿ ಕಿಶನ್ ಎಸ್ ರಾಣಾ ಅವರು NDTV ಗೆ ತಿಳಿಸಿದ್ದಾರೆ.




ವಿದೇಶಾಂಗ ನೀತಿಯ ಕಾರ್ಯಸೂಚಿಯಲ್ಲಿ ಮೋದಿ ಪ್ರಮುಖ ಪಾತ್ರ


ಭಾರತದ ವಿದೇಶಾಂಗ ನೀತಿಯ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.


" ಇದು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಸಂಬಂಧಗಳಲ್ಲಿ ಅತಿದೊಡ್ಡ ಬದಲಾವಣೆಯಾಗಿದೆ. ದಶಕಗಳ ಪರಸ್ಪರ ಗಮನದ ನಂತರ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಈಗ ಅತ್ಯಂತ ನಿಕಟವಾದ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ ಮತ್ತು ಎರಡು ದೇಶದವರು ಒಪ್ಪಂದಗಳಿಗೆ ಸಹಿ ಹಾಕದೆ ಬಾಕಿ ಉಳಿದಿದ್ದ ಎಲ್ಲಾ ಒಪ್ಪಂದಗಳನ್ನು ಜಾರಿಗೆ ತರುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.


"ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ರಷ್ಯಾ ದೇಶಗಳ  ಐತಿಹಾಸಿಕ ನಿಕಟ ಸಂಬಂಧದ ಮೂಲಕ ಭಾರತವನ್ನು ವೀಕ್ಷಿಸುತ್ತಿಲ್ಲ, ಅಲ್ಲದೆ ಭಾರತವೂ, ಇಸ್ಲಾಮಾಬಾದ್ ಜೊತೆಗಿನ ಸಂಬಂಧದ  ಯುನೈಟೆಡ್ ಸ್ಟೇಟ್ಸ್ ಹೊಂದಿರುವ ಬಾಂಧವ್ಯದ ಬಗ್ಗೆ ಚಿಂತಿಸುತ್ತಿಲ್ಲ, ಎರಡೂ ದೇಶಗಳು ವಿಭಿನ್ನ ಮನಸ್ಥಿತಿಯಲ್ಲಿ ಒಂದಾಗಿವೆ ಎಂದು ಅವರು ತಿಳಿಸಿದ್ದಾರೆ.


ಯುಎಸ್ ನಿರ್ಣಾಯಕವಾಗಿ ಪೆಸಿಫಿಕ್ ಕಡೆಗೆ ತನ್ನ ದೃಷ್ಟಿಯನ್ನು ಬದಲಾಯಿಸಿದೆ, ಭಾರತವು ನೈಸರ್ಗಿಕ ಪಾಲುದಾರ, ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ನಡುವಿನ ಪಾಲುದಾರಿಕೆಯತ್ತ ಚಿತ್ತ ಹರಿಸಲಿದೆ. ನರೇಂದ್ರ ಮೋದಿ ಅವರು ಈ ಮೈತ್ರಿಗೆ ಚಾಲನೆ ನೀಡಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.


ಇದನ್ನೂ ಓದಿ: Interesting Facts: ಭಾರತೀಯ ರಾಜಕಾರಣಿಗಳು ಏಕೆ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಫ್ಯಾಕ್ಟ್​


ರಷ್ಯಾದೊಂದಿಗಿನ ಉತ್ತಮ ಬಾಂಧವ್ಯ ಹಾಗೂ ಉಕ್ರೇನ್‌ನೊಂದಿಗೆ ಸೇಹ್ನ


ಆದರೆ ರಷ್ಯಾದೊಂದಿಗಿನ ಭಾರತದ ಐತಿಹಾಸಿಕ ಸಂಬಂಧವು, ಯುಎಸ್‌ ಬೆಂಬಲಿತ ಉಕ್ರೇನ್‌ನಲ್ಲಿನ ಯುದ್ಧದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಜೈಶಂಕರ್ ತಿಳಿಸಿದ್ದಾರೆ. ಉಕ್ರೇನ್‌ನೊಂದಿಗೆ ಬಾಂಧವ್ಯವನ್ನು ಉಳಿಸಿಕೊಳ್ಳುವಾಗ, ಭಾರತವು ತನ್ನ ವಿದೇಶಾಂಗ ನೀತಿ ಯಾವಾಗಲೂ ಸ್ವತಂತ್ರವಾಗಿ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ.


ಅದಕ್ಕಾಗಿಯೇ ಪ್ರಧಾನಿ ಮೋದಿ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದರೆ ಇತರೆ ದೇಶಗಳ ಟೀಕೆಗಳ ಹೊರತಾಗಿಯೂ ರಷ್ಯಾದಿಂದ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.


ಭಾರತವು ಈ ವರ್ಷ ಜಿ 20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ, ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಒಮ್ಮತವನ್ನು ಪಡೆದುಕೊಳ್ಳಲು ಪಶ್ಚಿಮ, ರಷ್ಯಾ ಮತ್ತು ಚೀನಾವನ್ನು ಒಟ್ಟಿಗೆ ಸೇರಿಸಲು ಪ್ರಧಾನಿ ಮೋದಿ ಪ್ರಯತ್ನ ಮಾಡಿದರು ಎಂದು ವರದಿಗಳು ಉಲ್ಲೇಖಿಸಿವೆ.


ಈ ಎಲ್ಲದರ ನಡುವೆ, ಭಾರತದ ಗಡಿಗಳನ್ನು ಸ್ಥಿರಗೊಳಿಸುವುದು ಮತ್ತು ದೇಶದ ಅತಿದೊಡ್ಡ ಭೂತಂತ್ರದ ಬೆದರಿಕೆ ಚೀನಾವನ್ನು ಎದುರಿಸುವುದು ಒಂದು ಅಸಾಧಾರಣ ಸವಾಲಾಗಿದೆ, ಅದಕ್ಕೆ ಚತುರ ರಾಜತಾಂತ್ರಿಕತೆ ಮತ್ತು ಮಾನವ ಸ್ಪರ್ಶದ ಅಗತ್ಯವಿರುತ್ತದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

First published: