PM Modi Diwali: ಪ್ರತಿಬಾರಿಯಂತೆ ನಾಳೆ ಯೋಧರೊಂದಿಗೆ ದೀಪಾವಳಿ ಆಚರಿಸಲಿರುವ ಪ್ರಧಾನಿ ಮೋದಿ

2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಕೂಡ ಆ ಸಂಪ್ರದಾಯ ಮುಂದುವರೆಸಿದ್ದಾರೆ

ಯೋಧರೊಂದಿಗೆ ಮೋದಿ ಸಂಭ್ರಮ

ಯೋಧರೊಂದಿಗೆ ಮೋದಿ ಸಂಭ್ರಮ

 • Share this:
  ನವದೆಹಲಿ (ನ. 3): ದೀಪಾವಳಿ (Deepavali) ಆಚರಣೆಗೆ ದೇಶಾದ್ಯಂತ ಜನರು ಸಜ್ಜಾಗಿದ್ದಾರೆ. ಬೆಳಕಿನ ಹಬ್ಬದ ಈ ಸಂಭ್ರಮವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ (Prime minister Narendra modi) ಅವರು ದೇಶದ ಯೋಧರೊಂದಿಗೆ ಆಚರಿಸಿ, ಸಿಹಿ ಹಂಚಲಿದ್ದಾರೆ. ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಮತ್ತು ಬ್ರಿಟನ್ ಗೆ ತೆರಳಿದ್ದ ಪ್ರಧಾನಿ ಮೋದಿ ಇಂದು  ದೇಶಕ್ಕೆ ಮರಳುತ್ತಿದ್ದು, ನಾಳೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ತೆರಳಲಿದ್ದಾರೆ. ಅಲ್ಲಿನ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ ಭಾರತೀಯ ಸೇನಾ ಯೋಧರೊಂದಿಗೆ (Indian Solider) ದೀಪಾವಳಿ ಆಚರಿಸಲಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ಕಳೆದ ಆರು ವರ್ಷಗಳಿಂದಲೂ ಅಂದರೆ 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಕೂಡ ಆ ಸಂಪ್ರದಾಯ ಮುಂದುವರೆಸಿದ್ದಾರೆ

  ಪ್ರತಿ ವರ್ಷ ಕೂಡ ಸೈನಿಕರೊಂದಿಗೆ ಮೋದಿ ದೀಪಾವಳಿ

  ಕಳೆದ ವರ್ಷ ಪ್ರಧಾನಿ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್‌ನ ಲೊಂಗೆವಾಲಾ ಗಡಿಗೆ ತೆರಳಿ ಅಲ್ಲಿನ ಯೋಧರೊಂದಿಗೆ ದೀಪ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದ್ದರು.
  ಇನ್ನು 2019ರಲ್ಲಿ ದೀಪಾವಳಿ ಆಚರಿಸಲು ಪ್ರಧಾನಿಯವರು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ, ಅಲ್ಲಿನ ಯೋಧರೊಂದಿಗೆ ಕಾಲ ಕಳೆದಿದ್ದರು.

  ಭಯೋತ್ಪಾದಕ ಚಟುವಟಿಕೆ ನಡುವೆಯೂ ಮೋದಿ ಪ್ರವಾಸ

  ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಕೆಲವು ವಾರದ ಹಿಂದೆ ನಾಗರಿಕರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಹಲವಾರು ಭಯೋತ್ಪಾದಕ ದಾಳಿಗಳು ಇಲ್ಲಿ ನಡೆದಿವೆ. ಇದಲ್ಲದೆ, ಕಣಿವೆ ರಾಜ್ಯದಲ್ಲಿ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ ಅನೇಕ ಉನ್ನತ ವ್ಯಕ್ತಿಗಳು ಸೇರಿದಂತೆ ಅನೇಕ ಭಯೋತ್ಪಾದಕರು ಗುಂಡಿಕ್ಕಿ ಕೊಲ್ಲಲ್ಪಲಾಗಿದೆ.

  ಇದನ್ನು ಓದಿ: 100 ವರ್ಷದ ಹಿಂದೆ ಕಾಶಿ ತೊರೆದಿದ್ದ ಅನ್ನಪೂರ್ಣೆ ಮರಳಿ ವಾರಾಣಸಿಗೆ

  ಸೈನಿಕರಿಗೆ ಧೈರ್ಯ ತುಂಬಲಿರುವ ಪ್ರಧಾನಿ

  ಗಡಿ ನಿಯಂತ್ರಣ ರೇಖೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪ್ರಧಾನಿಯ ಉಪಸ್ಥಿತಿಯು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಸೈನಿಕರ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳದೊಂದಿಗೆ ಯುದ್ಧವು ಮುಂದುವರಿಯುತ್ತಿದೆ. ಕೋವಿಡ್​​ ನಿರ್ಬಂಧಗಳನ್ನು ತೆಗೆದುಹಾಕುವ ನಂತರ ಇಲ್ಲಿನ ಜನ ಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.

  ಇದನ್ನು ಓದಿ: ದೀಪಾವಳಿ ಹಬ್ಬದಂದು ದೆಹಲಿಯ ವಾಯು ಗುಣಮಟ್ಟ ‘ರೆಡ್ ಝೋನ್’ ಪ್ರವೇಶಿಸುವುದೇ?

  ಕಳೆದ ಆರು ವರ್ಷದಿಂದ ಯೋಧರೊಂದಿಗೆ ಸಂಭ್ರಮಾಚರಣೆ

  ಕಳೆದ ಬಾರಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು. 2014ರಲ್ಲಿ ಮೊದಲ ವರ್ಷದಲ್ಲಿ ಸಿಯಾಚಿನ್‌ಗೆ ಹೋದಾಗ ಜನರು ಆಶ್ಚರ್ಯಚಕಿತರಾದರು. ಆದರೆ ಇಂದು, ನನ್ನ ಭಾವನೆಗಳು ಎಲ್ಲರಿಗೂ ತಿಳಿದಿದೆ. ಸೈನಿಕರು ನನ್ನ ಕುಟುಂಬ. ಇಂದು ನಾನು ನನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಲು ಬಂದಿದ್ದೇನೆ.

  ಬಾಲ್ಯದ ಕನಸು

  ಈ ಕುರಿತು ಈ ಹಿಂದೆ ಮಾತನಾಡಿದ್ದ ಅವರು ನನಗೆ ಚಿಕ್ಕನಿಂದಲೂ ಸೇನೆ ಸೇರಬೇಕು ಎಂಬ ಕನಸಿತು. ಆದರೆ, ಕುಟುಂಬ ನಿರ್ವಹಣೆ ಜವಾಬ್ದಾರಿಯಿಂದ ಪೋಷಕರು ನಿರಾಕರಿಸಿದರು. ರೈಲ್ವೆ ನಿಲ್ದಾಣದಲ್ಲಿ ಟೀ ಮಾರುವ ವೇಳೆ ಯೋಧರನ್ನು ಕಂಡರೆ ನನಗೆ ಸಂತಸವಾಗುತ್ತಿತ್ತು. ಇದೇ ಕಾರಣದಿಂದ ನಾನು ಪ್ರತಿ ವರ್ಷ ಯೋಧರೊಂದಿಗೆ ದೀಪಾವಳಿ ಆಚರಿಸುವುದಾಗಿ ತಿಳಿಸಿದ್ದರು.
  Published by:Seema R
  First published: