ಇಸ್ರೇಲ್ ಪ್ರಧಾನಿಯನ್ನು ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ

news18
Updated:January 14, 2018, 4:06 PM IST
ಇಸ್ರೇಲ್ ಪ್ರಧಾನಿಯನ್ನು ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ
news18
Updated: January 14, 2018, 4:06 PM IST
ನ್ಯೂಸ್ 18 ಕನ್ನಡ

ನವದೆಹಲಿ (ಜ.14) : ಭಾರತಕ್ಕೆ ಬಂದಿಳಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದರು.

ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್‌ನ ಎರಡನೇ ಪ್ರಧಾನಿ. 15 ವರ್ಷಗಳ ಬಳಿಕ ಅಲ್ಲಿನ ಮತ್ತೊಬ್ಬ ಪ್ರಧಾನಿಯ ಭಾರತದ ಭೇಟಿ ಇದಾಗಿದೆ. 2003ರಲ್ಲಿ ಆಗಿನ ಪ್ರಧಾನಿ ಏರಿಯಲ್‌ ಶರೋನ್‌ ಭಾರತಕ್ಕೆ ಬಂದಿದ್ದರು.

ಇಂದಿನಿಂದ ಆರು ದಿನ ಕಾಲ ಭಾರತ ಪ್ರವಾಸ ಕೈಗೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
First published:January 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ