• Home
  • »
  • News
  • »
  • national-international
  • »
  • Narendra Modi-Pawan Kalyan: ನರೇಂದ್ರ ಮೋದಿ-ಪವನ್ ಕಲ್ಯಾಣ್ ಭೇಟಿ, ಆಂಧ್ರ-ತೆಲಂಗಾಣದಲ್ಲಿ ಅರಳುತ್ತಾ ಕಮಲ?

Narendra Modi-Pawan Kalyan: ನರೇಂದ್ರ ಮೋದಿ-ಪವನ್ ಕಲ್ಯಾಣ್ ಭೇಟಿ, ಆಂಧ್ರ-ತೆಲಂಗಾಣದಲ್ಲಿ ಅರಳುತ್ತಾ ಕಮಲ?

ನಟ ಪವನ್ ಕಲ್ಯಾಣ್-ಪ್ರಧಾನಿ ಮೋದಿ

ನಟ ಪವನ್ ಕಲ್ಯಾಣ್-ಪ್ರಧಾನಿ ಮೋದಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಖ್ಯಾತ ನಟ ಕಮ್ ರಾಜಕಾರಣಿ, ಜನಸೇನಾ ಪಕ್ಷದ (Janasena Party) ಸ್ಥಾಪಕ ಪವನ್ ಕಲ್ಯಾಣ್ (Pawan Kalyan) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  • News18 Kannada
  • Last Updated :
  • Telangana, India
  • Share this:

ತೆಲಂಗಾಣ: ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ತೆಲಂಗಾಣದಲ್ಲಿ (Telangana) ಶತಾಯ ಗತಾಯ ಕಮಲ ಅರಳಿಸುವುದಕ್ಕೆ ಬಿಜೆಪಿ (BJP) ಹರಸಾಹಸ ಪಡುತ್ತಿದೆ. ಅದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತೆಲಂಗಾಣದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ವಿಶ್ವಾಸದ ಮಾತನ್ನಾಡಿದ್ದಾರೆ. ದಕ್ಷಿಣ ಭಾರತ ಪ್ರವಾಸದ ಎರಡನೇ ದಿನವಾದ ಇಂದು ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಮತ್ತು ಉಪಕ್ರಮಗಳಿಗೆ ಚಾಲನೆ ನೀಡಿದರು. ಈ ವೇಳೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಭರವಸೆ ನೀಡಿದ್ರು. ಇನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಖ್ಯಾತ ನಟ ಕಮ್ ರಾಜಕಾರಣಿ, ಜನಸೇನಾ ಪಕ್ಷದ (Janasena Party) ಸ್ಥಾಪಕ ಪವನ್ ಕಲ್ಯಾಣ್ (Pawan Kalyan) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.


ಪವನ್ ಕಲ್ಯಾಣ್ ಭೇಟಿಯಾದ ನರೇಂದ್ರ ಮೋದಿ


ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಖ್ಯಾತ ನಟ ಕಮ್ ರಾಜಕಾರಣಿ, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಶಾಖಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪವನ್ ಕಲ್ಯಾಣ್ ಭೇಟಿಯಾಗಿ, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.


ಮೋದಿ ಭೇಟಿ ಬಳಿಕ ಪವನ್ ಹೇಳಿದ್ದೇನು?


ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಮೋದಿಯವರೊಂದಿಗೆ ಚರ್ಚಿಸಿದ್ದೇನೆ. ಅವರು ತೆಲುಗು ಜನರು ಮತ್ತು ಅವರ ಯೋಗಕ್ಷೇಮದ ಬಗ್ಗೆ ಕೇಳಿದರು. ಅವರು ತೆಲುಗು ಜನರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು" ಎಂದಷ್ಟೇ ಹೇಳಿದ್ದಾರೆ.


“ಕಮಲ ಅರಳುವ ದಿನಗಳು ದೂರವಿಲ್ಲ”


ದಕ್ಷಿಣ ಭಾರತ ಪ್ರವಾಸದ ಎರಡನೇ ದಿನವಾದ ಇಂದು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡಿದರು. ಇಂದು ಮಧ್ಯಾಹ್ನ ಹೈದರಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ್ ರಾಷ್ಟ್ರ ಸಮಿತಿ (ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ರಾಜ್ಯದ ಜನರಿಗೆ "ದ್ರೋಹ" ಮಾಡಿದೆ ಎಂದು ಹೇಳಿದರು. "ಸೂರ್ಯೋದಯವು ದೂರವಿಲ್ಲ, ಕತ್ತಲೆ ಮಾಯವಾಗುತ್ತದೆ ಮತ್ತು ಕಮಲವು ರಾಜ್ಯಾದ್ಯಂತ ಅರಳುತ್ತದೆ" ಎಂದು  ಭರವಸೆಯ ಮಾತನ್ನಾಡಿದರು.


ಶಿಷ್ಟಾಚಾರ ಉಲ್ಲಂಘಿಸಿದ ತೆಲಂಗಾಣ ಸಿಎಂ


ಪ್ರತಿ ಬಾರಿ ಪ್ರಧಾನಿ ಮೋದಿ ತೆಲಂಗಾಣಕ್ಕೆ ಆಗಮಿಸಿದಾಗ ಪ್ರೋಟೋಕಾಲ್ ಪ್ರಕಾರ ಅವರನ್ನು ಸ್ವೀಕರಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿಯನ್ನು ಬರಮಾಡಿಕೊಳ್ಳಬೇಕು. ಆದರೆ ಅವರು ಬಾರದೆ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದಾರೆ. ಇಂದೂ ಸಹ ಸಿಎಂ ಚಂದ್ರಶೇಖರ್ ರಾವ್ ಅವರು ಪ್ರಧಾನಿ ಸ್ವಾಗತಕ್ಕೆ ಬರದೇ ಗೈರಾಗಿದ್ದರು.


“ಪ್ರಧಾನಿ ಮೋದಿ ತೆಲಂಗಾಣಕ್ಕೆ ಬರಬೇಡಿ”


ಪ್ರಧಾನಿ ಮೋದಿ ತೆಲಂಗಾಣಕ್ಕೆ ಬರಬೇಡಿ ಎಂದು ಹೈದರಾಬಾದ್ ಮತ್ತು ರಾಮಗುಂಡಂನ ಆಯಕಟ್ಟಿನ ಸ್ಥಳಗಳಲ್ಲಿ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಪ್ಲೆಕಾರ್ಡ್‌ಗಳನ್ನು ಹಾಕಲಾಗಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.


ಇದನ್ನೂ ಓದಿ: Elections: 2 ದಿನ, ದಕ್ಷಿಣದ 4 ರಾಜ್ಯಗಳಿಗೆ ನಮೋ ಭೇಟಿ: 2024ರ ಎಲೆಕ್ಷನ್​ಗೆ ಬಿಜೆಪಿಗೆ ಹೊಸ ಗುರಿ, ಮೋದಿ ನಡೆಯೇ ಸಾಕ್ಷಿ!


ಕೆಸಿಆರ್‌ ವರ್ತನೆಗೆ ಬಿಜೆಪಿ ವಿರೋಧ


ಇನ್ನು ಸಿಎಂ ಕೆಸಿಆರ್ ವರ್ತನೆಗೆ ತೆಲಂಗಾಣ ಬಿಜೆಪಿ ಕಿಡಿಕಾರಿದೆ. "ಅವರು ಭಾರತದ ಪ್ರಧಾನಿ ಅಲ್ಲವೇ? ತೆಲಂಗಾಣ ಭಾರತದ ಭಾಗವಲ್ಲವೇ?" ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದಾರೆ. "ಕೆಸಿಆರ್ ಮಗುವಿನಂತೆ ವರ್ತಿಸುತ್ತಿದ್ದಾರೆ. ಅವರ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿಯು ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಗಳಿಸುತ್ತಿರುವ ಬಗ್ಗೆ ಅಸೂಯೆ ಪಟ್ಟಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ.

Published by:Annappa Achari
First published: