Modi's Teacher: ಬಾಲ್ಯದ ಶಿಕ್ಷಕರನ್ನು ಭೇಟಿಯಾದ ಮೋದಿ, ಶಿಷ್ಯನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದ ಗುರು!

ಪ್ರಧಾನಿ ನರೇಂದ್ರ ಮೋದಿ ಬಾಲ್ಯದಲ್ಲಿ (Childhood) ತಮಗೆ ಅಕ್ಷರ ಕಲಿಸಿದ ಶಿಕ್ಷಕರೊಬ್ಬರ ಮನೆಗೆ ತೆರಳಿದ್ದಾರೆ. ಅವರ ಆಶೀರ್ವಾದ (Blessings) ಪಡೆದು, ಆರೋಗ್ಯ (Health) ವಿಚಾರಿಸಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಗುರುಗಳು, ಮೋದಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ.

ಶಿಕ್ಷಕರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

ಶಿಕ್ಷಕರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

  • Share this:
ಗುಜರಾತ್: ‘ಊರಿಗೆ ಅರಸನಾದರೂ (King) ತಾಯಿಗೆ (Mother) ಮಗ (Son)’ ಅಂತಾರೆ, ‘ಜಗತ್ತಿಗೆ ಸಾಮ್ರಾಟನಾದರೂ (Empire) ಗುರುವಿಗೆ (Teacher) ಆತ ಶಿಷ್ಯನೇ (Student)’ ಅಂತಾರೆ ಹಿರಿಯರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿಚಾರದಲ್ಲಿ ಈ ಎರಡು ಮಾತುಗಳೂ ಸತ್ಯವಾಗಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಡೀ ದೇಶವನ್ನೇ ಆಳುತ್ತಾರೆ. ಆದರೆ ತಾಯಿ ಹೀರಾಬೆನ್ (Heeraben) ಅವರ ಬಳಿ ಹೋದಾಗ, ಮಗುವಿನಂತೆ (Child) ಅವರ ಕಾಲ ಬದಿ ಕುಳಿತು ಯೋಗಕ್ಷೇಮ ವಿಚಾರಿಸುತ್ತಾರೆ. ನಿನ್ನೆಯೂ ಅಷ್ಟೇ ಗುಜರಾತ್ ಪ್ರವಾಸದಲ್ಲಿದ್ದ (Gujrat Tour) ಪ್ರಧಾನಿ ನರೇಂದ್ರ ಮೋದಿ ಬಾಲ್ಯದಲ್ಲಿ (Childhood) ತಮಗೆ ಅಕ್ಷರ ಕಲಿಸಿದ ಶಿಕ್ಷಕರೊಬ್ಬರ ಮನೆಗೆ ತೆರಳಿದ್ದಾರೆ. ಅವರ ಆಶೀರ್ವಾದ (Blessings) ಪಡೆದು, ಆರೋಗ್ಯ (Health) ವಿಚಾರಿಸಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಗುರುಗಳು, ಮೋದಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಗುರು ಶಿಷ್ಯನ ಬಾಂಧವ್ಯದ (Relationship) ಅಪರೂಪದ ಫೋಟೋಗಳು (Photos) ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಫುಲ್ ವೈರಲ್ (Viral) ಆಗಿವೆ.

ಶಿಕ್ಷಕರನ್ನು ಭೇಟಿಯಾದ ಪ್ರಧಾನಿ ಮೋದಿ

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯದ ಶಿಕ್ಷಕರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ. ನಿನ್ನೆ ಗುಜರಾತ್‌ನ ನವಸಾರಿಯ ವಡ್‌ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಬಾಲ್ಯದ ಶಿಕ್ಷಕ ಜಗದೀಶ್ ನಾಯಕ್ ಅವರ ಮನೆಗೆ ತೆರಳಿದ ಪ್ರಧಾನಿ, ಅವರ ಆಶೀರ್ವಾದ ಪಡೆದಿದ್ದಾರೆ.

ಕೆಲಸದ ಒತ್ತಡದಲ್ಲೂ ಗುರುಗಳ ಭೇಟಿ

ಒಂದು ದಿನದ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಹಲವು ಯೋಜನೆಗಳನ್ನು ಉದ್ಗಾಟಿಸಿದ್ದು, ಈ ನಡುವೆ ಬಿಡುವು ಮಾಡಿಕೊಂಡು ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ್ದಾರೆ. ವೃದ್ಧಾಪ್ಯದಲ್ಲಿರುವ ಶಿಕ್ಷಕ ಜಗದೀಶ್ ನಾಯಕ್ ಅವರ ಆರೋಗ್ಯ ವಿಚಾರಿಸಿದ ಮೋದಿ, ಅವರಿಗೆ ಧೈರ್ಯ ತುಂಬಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಶಿಕ್ಷಕ ಜಗದೀಶ್ ನಾಯಕ್, ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ.

ಇದನ್ನೂ ಓದಿ: Modi@8: ಯೋಧರೊಂದಿಗೇ ದೀಪಾವಳಿ ಆಚರಿಸುವ ಪ್ರಧಾನಿ ಮೋದಿ, ಇದರ ಹಿಂದೆ ಇದೆ ಒಂದೊಳ್ಳೆ ಉದ್ದೇಶ

ಗುರು ಶಿಷ್ಯನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಇನ್ನು  ಬಾಲ್ಯದಲ್ಲಿ ಕಲಿಸಿದ ಶಿಕ್ಷಕರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೊದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಶಿಕ್ಷಕರಿಗೆ ಕೈಮುಗಿದು ನಮಸ್ಕರಿಸುತ್ತಿದ್ದರೆ, ಅವರ ಶಾಲಾ ಶಿಕ್ಷಕರು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿದ್ದಾರೆ. ಇದಕ್ಕೆ ಮೋದಿ ಅಭಿಮಾನಿಗಳು, ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಖುಷಿಯಿಂದ ಕಾಮೆಂಟ್ ಮಾಡಿ, ಶೇರ್ ಮಾಡಿದ್ದಾರೆ.

ಹಲವು ಯೋಜನೆಗಳ ಉದ್ಘಾಟನೆ

ನಿನ್ನೆ ಪ್ರಧಾನಿ ಮೋದಿ ಒಂದು ದಿನದ ಗುಜರಾತ್ ಪ್ರವಾಸದಲ್ಲಿದ್ದರು. ತಮ್ಮ ಭೇಟಿಯ ವೇಳೆ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಅವರು 'ಗುಜರಾತ್ ಗೌರವ ಅಭಿಯಾನ'ದಲ್ಲಿ ಭಾಗವಹಿಸಿ, ನವಸಾರಿಯ ಬುಡಕಟ್ಟು ಪ್ರದೇಶವಾದ ಖುದ್ವೇಲ್‌ನಲ್ಲಿ ಸುಮಾರು 3,050 ಕೋಟಿ ರೂಪಾಯಿಗಳ ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಏಳು ಯೋಜನೆಗಳ ಉದ್ಘಾಟನೆ, 12 ಯೋಜನೆಗಳ ಶಂಕುಸ್ಥಾಪನೆ ಸಮಾರಂಭ ಮತ್ತು 14 ಯೋಜನೆಗಳ ಭೂಮಿಪೂಜೆ ಸೇರಿತ್ತು.

ಇದನ್ನೂ ಓದಿ: Modi@8: ಬಲವಂತದಿಂದಲ್ಲ, ದೇಶದ ವೈವಿಧ್ಯತೆ ಶಕ್ತಿ ಬಳಸಿ ದೇಶ ನಡೆಸಿದ ಮೋದಿ! ಯೋಗಿ ಮಾತುಗಳಿವು

ತಾಪಿ ಜಿಲ್ಲೆಯ ನಿವಾಸಿಗಳಿಗೆ ವಿದ್ಯುತ್ ಒದಗಿಸಲು 85 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ವೀರಪುರ ವ್ಯಾರಾ ಸಬ್ ಸ್ಟೇಷನ್ ಅನ್ನು ಪ್ರಧಾನಿ ಉದ್ಘಾಟಿಸಿದರು. ತ್ಯಾಜ್ಯ ನೀರು ಸಂಸ್ಕರಣೆಗೆ ಅನುಕೂಲವಾಗುವಂತೆ ವಲ್ಸಾದ್ ಜಿಲ್ಲೆಯ ವಾಪಿ ನಗರದಲ್ಲಿ 20 ಕೋಟಿ ರೂಪಾಯಿ ಮೌಲ್ಯದ 14 ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕವನ್ನು ಸಹ ಉದ್ಘಾಟಿಸಲಾಯಿತು.
Published by:Annappa Achari
First published: