ಜನಪ್ರಿಯ ಸೈಕಲ್ ಸವಾರಿ ಸಂತ ಬೈಕುಬಾಯ್ ಅವರನ್ನು ಗುಜರಾತ್​ಗೆ ತೆರಳಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ!

ಗುಜರಾತಿನಲ್ಲಿ ತಮ್ಮ ಸೈಕಲ್ ಸವಾರಿಯಿಂದಲೇ ಜನರ ನಡುವೆ ಚಿರಪರಿಚಿತರಾಗಿರುವ ಬೈಕುಬಾಯ್ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂದು ಉದ್ದೇಶಿಸಿ ಗುಜರಾತಿನ ಅಮ್ರೇಲಿ ಜಿಲ್ಲೆಯಿಂದ ದೆಹಲಿವರೆಗೆ ಸೈಕಲ್ ಯಾತ್ರೆ ಮಾಡಿದ್ದರು.

MAshok Kumar | news18
Updated:July 3, 2019, 3:38 PM IST
ಜನಪ್ರಿಯ ಸೈಕಲ್ ಸವಾರಿ ಸಂತ ಬೈಕುಬಾಯ್ ಅವರನ್ನು ಗುಜರಾತ್​ಗೆ ತೆರಳಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ!
ನರೇಂದ್ರ ಮೋದಿ ಮತ್ತು ಬೈಕುಬಾಯ್.
  • News18
  • Last Updated: July 3, 2019, 3:38 PM IST
  • Share this:
ಗುಜರಾತ್​ (ಜುಲೈ.03); ಇಂದು ಗುಜರಾತ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಸೈಕಲ್ ಸವಾರಿ ಸಂತ ಎಂದೇ ಖ್ಯಾತಿಯಾಗಿರುವ ಬೈಕುಬಾಯ್ ಅವರನ್ನು ಭೇಟಿ ಮಾಡಿದ್ದು, ಈ ಕುರಿತು ತಮ್ಮ ಖಾಸಗಿ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗುಜರಾತಿನಲ್ಲಿ ತಮ್ಮ ಸೈಕಲ್ ಸವಾರಿಯಿಂದಲೇ ಜನರ ನಡುವೆ ಚಿರಪರಿಚಿತರಾಗಿರುವ ಬೈಕುಬಾಯ್ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂದು ಉದ್ದೇಶಿಸಿ ಗುಜರಾತಿನ ಅಮ್ರೇಲಿ ಜಿಲ್ಲೆಯಿಂದ ದೆಹಲಿವರೆಗೆ ಸೈಕಲ್ ಯಾತ್ರೆ ಮಾಡಿದ್ದರು.

ಇದನ್ನೂ ಓದಿ : ನನ್ನ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿ ಇಲ್ಲ, ಹೀಗಾಗಿ ಚೀನಾಗೆ ಹೋಗುವೆ; ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ

ನೂರಾರು ಕಿಮೀ ದಾರಿಯ ಸೈಕಲ್ ಸವಾರಿಯಲ್ಲಿ ತಾವೂ ಸಹ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಇದು ಅವರಿಗೆ ಹಲವಾರು ಅಭಿಮಾನಿಗಳನ್ನು ಗಳಿಸಿಕೊಟ್ಟಿತ್ತು. ಅಲ್ಲದೆ, ಈ ವಿಚಾರ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ಬಂದಿತ್ತು.ಕೊನೆಗೂ ಬೈಕುಬಾಯ್ ನಿರೀಕ್ಷೆಯಂತೆಯೇ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಗುಜರಾತ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಬೈಕುಬಾಯ್ ಅವರನ್ನು ಖುದ್ದು ಭೇಟಿಯಾಗಿದ್ದಾರೆ. ಅಲ್ಲದೆ ಅವರ ಜೊತೆಗಿನ ಫೋಟೊವನ್ನು ಟ್ವೀಟ್ ಮಾಡಿರುವ ಮೋದಿ, “ಅವರ ಮಾನವೀಯತೆಯ ಗುಣ ಹಾಗೂ ಬದ್ಧತೆ ನನ್ನು ಬೆರಗುಗೊಳಿಸಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ತಡ ಮಾಡದೆ, ಶೀಘ್ರದಲ್ಲಿ ಕಾಂಗ್ರೆಸ್​ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ; ರಾಹುಲ್ ಗಾಂಧಿ

First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading