Ayodhya Deepotsav: ಅಯೋಧ್ಯೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರಿಂದ ದೀಪಾವಳಿ ಉದ್ಘಾಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಸೆ. 8): ಉತ್ತರ ಪ್ರದೇಶದಲ್ಲಿ (uttar pradesh) ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗಲಿರುವ ಹಿನ್ನಲೆ ಈಗಾಗಲೇ ಬಿಜೆಪಿ ಸಿದ್ಧತೆ ಆರಂಭಿಸಿದೆ. ಎರಡನೇ ಬಾರಿ ಕೂಡ ಬಿಜೆಪಿ ಗೆಲ್ಲುವ ರಣತಂತ್ರ ಹೂಡಿದ್ದು, ಇದಕ್ಕಾಗಿ ಈಗಾಗಲೇ ಕಾರ್ಯ ಆರಂಭಿಸಿದೆ. ಇದೆ ವಿಧಾನಸಭಾ ಚುನಾವಣಾ ಲೆಕ್ಕಾಚಾರವನ್ನು ಗಮನದಲ್ಲಿರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಈ ಬಾರಿ ಅಯೋಧ್ಯೆಯಲ್ಲಿ ದೀಪಾವಳಿ (ayodhya Deepotsava) ಆಚರಣೆಯನ್ನು ಉದ್ಘಾಟಿಸುವ ಸಾಧ್ಯತೆ ಇದೆ. ಅಯೋಧ್ಯೆಯ ಸರಯೂ ನದಿ ತಟದಲ್ಲಿ ಆಚರಿಸಲಾಗುವ ಈ ವಿಶೇಷ ದೀಪಾವಳಿ ಆಚರಣೆಯನ್ನು ಪ್ರತಿ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ (CM Yogi adithayanth)​ ಉದ್ಘಾಟಿಸುತ್ತಾ ಬರುತ್ತಿದ್ದಾರೆ.

  ಪ್ರಧಾನಿ ಮೋದಿ ಅವರು ನವೆಂಬರ್ 3 ರಂದು ಈ ಬೃಹತ್​ ಕಾರ್ಯಕ್ರಮವನ್ನು ಉದ್ಘಾಟಿಸುವ ಸಾಧ್ಯತೆಯಿದೆ, ಇದಕ್ಕಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ, ಅಯೋಧ್ಯೆಯ ಸರಯೂ ತಟದಲ್ಲಿ ಹೊಸ ಗಿನ್ನೆಸ್ ದಾಖಲೆ 6.5 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.

  ಇನ್ನು ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಧಾನಿ ಸಚಿವಾಲಯ ಅಧಿಕೃತ ಪಡಿಸಿಲ್ಲ. ಆದರೆ, ಈ ಕುರಿತು ಮಾತನಾಡಿರುವ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್, ಪ್ರಧಾನಿ ಮೋದಿ ಅವರನ್ನು ಮತ್ತೆ ಅಯೋಧ್ಯೆಯಲ್ಲಿ ನೋಡುತ್ತಿರುವುದು ನಮ್ಮ ಅದೃಷ್ಟ. ಈ ಬಾರಿ ದೀಪೋತ್ಸವಕ್ಕ ಅದ್ದೂರಿ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಬಾಲಿವುಡ್ ನ ಪ್ರಖ್ಯಾತ ಕಲಾ ವಿನ್ಯಾಸಕ ನಿತಿನ್ ಚಂದ್ರಕಾಂತ್ ದೇಸರ್ ದೀಪೋತ್ಸವದ ಕಲ್ಪನೆ ಸಜ್ಜುಗೊಳಿಸಿದ್ದು, ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.

  ಇದನ್ನು ಓದಿ: ರೈತರಿಗೆ ಬಂಪರ್ ಸುದ್ದಿ: ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಅನುಮೋದನೆ

  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಸ್ಟ್ 29 ರಂದು ಅಯೋಧ್ಯೆಗೆ ಭೇಟಿ ನೀಡಿ, ರಾಮನಿಗೆ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲು ಅಡಿಗಲ್ಲು ಹಾಕಿದರು. ಈ ವೇಳೆ ಮಾತನಾಡಿದ ಅವರು, ರಾಮನಿಲ್ಲದೆ ಅಯೋಧ್ಯೆ ಅಯೋಧ್ಯೆಯಲ್ಲ. ರಾಮ ಇರುವಲ್ಲಿ ಅಯೋಧ್ಯೆ ಇದೆ. ಭಗವಾನ್ ರಾಮನು ಈ ನಗರದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ, ಆದ್ದರಿಂದ ನಿಜವಾದ ಅರ್ಥದಲ್ಲಿ, ಈ ಸ್ಥಳವು ಅಯೋಧ್ಯೆ. ನನ್ನ ಕುಟುಂಬ ರಾಮನ ಮೇಲೆ ಹೆಚ್ಚಿನ ಗೌರವ ಪ್ರೀತಿ ಹೊಂದಿದ ಕಾರಣದಿಂದಲೇ ನನಗೆ ಈ ಹೆಸರು ಇಟ್ಟಿರಬಹುದು ಎಂದರು

  ಅಯೋಧ್ಯೆ ನಗರದಲ್ಲಿ ಕಳೆದ 4 ವರ್ಷಗಳಿಂದ ಭಗವಾನ್ ರಾಮನ ಪಟ್ಟಾಭಿಷೇಕ ಮತ್ತು ದಿವ್ಯ ದೀಪೋತ್ಸವ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತಿದೆ. ಈ ವರ್ಷವು ಐದನೇ ವರ್ಷವಾಗಿದೆ. ಯೋಗಿ ಆದಿತ್ಯನಾಥ್​ ಸರ್ಕಾರ ಅಸ್ತಿತ್ವಕಕೆ ಬಂದ ಬಳಿಕ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಇಲ್ಲಿ ಅನೇಕ ಲಕ್ಷಾಂತರ ದೀಪಗಳನ್ನು ಹಚ್ಚುವ ಮೂಲಕ ಪ್ರತಿ ಬಾರಿ ಹೊಸ ವಿಶ್ವ ದಾಖಲೆ ನಿರ್ಮಿಸಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ , .ಸುಮಾರು 10,000ಕ್ಕೂ ಹೆಚ್ಚು ಸ್ವಯಂಸೇವಕರನ್ನು ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸುತ್ತಾರೆ. ಈ ಸಂಪೂರ್ಣ ಕಾರ್ಯಕ್ರಮ ರಾಮ್‌ನ ಪೈಡಿ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಖಲ ಸಿದ್ಧತೆಗಳನ್ನು ತಿಂಗಳುಗಳ ಮುಂಚೆಯೇ ಆರಂಭಿಸಲಾಗುತ್ತದೆ. ಕೊರೊನಾ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು,  ಕಳೆದ ಬಾರಿ ದಾಖಲೆಯ ದೀಪೋತ್ಸವವನ್ನು ಅಯೋಧ್ಯೆಯಲ್ಲಿ ಬೆಳಗಿಸುವ ಮುನ್ನ ನಗರವನ್ನು ಜಗಮಗಿಸಲಾಗಿತ್ತು
  Published by:Seema R
  First published: