Winter Sessionಗೂ ಮುನ್ನ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಸಾಧ್ಯತೆ

ಭಾನುವಾರ ಅಂದರೆ ನ. 28ರಂದು ಬೆಳಗ್ಗೆ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದು, ಬಳಿಕ ಅದೇ ದಿನ ಮಧ್ಯಾಹ್ನ ನಡೆಯಲಿರುವ ಬಿಜೆಪಿ ಸಂಸದೀಯ ಸಭೆ ನಡೆಯಲಿದ್ದು, ನಾಯಕರು ಭಾಗಿಯಾಗಲಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
    ನವದೆಹಲಿ (ನ. 22): ಚಳಿಗಾಲದ ಸಂಸತ್​ ಅಧಿವೇಶನಕ್ಕೂ (Winter Session) ಮುನ್ನ ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ (All party Meeting) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾಗಿಯಾಗುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ. ಇದೇ ನಂವೆಂಬರ್​ 29ರಿಂದ ಚಳಿಗಾಲದ ಸಂಸತ್​ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬ್​ 23ರವರೆಗೆ ಕಲಾಪಗಳು ನಡೆಯುವ ನಿರೀಕ್ಷೆಗಳು ಇವೆ. ಕಳೆದ ಚಳಿಗಾಲ ಅಧಿವೇಶನದಲ್ಲಿ ಸಂಸತ್​ನಲ್ಲಿ ಮಂಡನೆಯಾಗಿರುವ ವಿವಾದಿತ ಮೂರು ಕೃಷಿ ಮಸೂದೆಯನ್ನು ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಿಂಪಡೆಯಲಿದೆ.



    ಈಗಾಗಲೇ ಮಸೂದೆ ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಕಳೆದೊಂದು ವರ್ಷದಿಂದ ದೆಹಲಿಯ ಗಡಿ ಪ್ರದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಮಸೂದೆಯನ್ನು ಸಂಸತ್​ನಲ್ಲಿ ಹಿಂಪಡೆದ ಬಳಿಕವೇ ನಮ್ಮ ಹೋರಾಟ ನಿಲ್ಲಿಸಿ ಮನೆಗೆ ತೆರಳುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

    ಬಿಜೆಪಿ ಸಂಸದೀಯ ಸಭೆಯಲ್ಲೂ ಭಾಗಿ

    ಭಾನುವಾರ ಅಂದರೆ ನ. 28ರಂದು ಬೆಳಗ್ಗೆ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದು, ಬಳಿಕ ಅದೇ ದಿನ ಮಧ್ಯಾಹ್ನ ನಡೆಯಲಿರುವ ಬಿಜೆಪಿ ಸಂಸದೀಯ ಸಭೆ ನಡೆಯಲಿದ್ದು, ನಾಯಕರು ಭಾಗಿಯಾಗಲಿದ್ದಾರೆ.

    ಇದನ್ನು ಓದಿ: ಪಾಕ್​ ಯುದ್ಧ ವಿಮಾನ ಹೊಡೆದುರುಳಿಸಿದ್ದ ಗ್ರೂಪ್​ ಕ್ಯಾಪ್ಟನ್ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪ್ರದಾನ

    ಇನ್ನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ದೇಶದ ರೈತರು ವಿರೋಧಿಸಿದ್ದ ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಯಾರಿ ನಡೆಸಿದ್ದು, ಇದಕ್ಕಾಗಿ ಸಂಪುಟ ಸಭೆ ಬುಧವಾರ ಮಸೂದೆಯನ್ನು ಅಂಗೀಕರಿಸುವ ನಿರೀಕ್ಷೆಯಿದೆ.
    ಇನ್ನು ಇದೇ ವೇಳೆ ತ್ರಿಪುರಾ ಹಿಂಸಾಚಾರದ ವಿಷಯವನ್ನು ತೃಣಮೂಲ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆಯಿದೆ
    Published by:Seema R
    First published: