ರಾಜ್ಯಸಭೆಯಲ್ಲೂ ಮುಂದುವರೆದ PM Modi ವಾಗ್ದಾಳಿ; ಕಾಂಗ್ರೆಸ್​​ಗೆ ಕುಟುಂಬದ ಹೊರತು ಚಿಂತಿಸಲು ಸಾಧ್ಯವಿಲ್ಲ

ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎಂದು ಬಯಸಿದ್ದರು. ಅದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಕಾಂಗ್ರೆಸ್ ಉಳಿದರೆ ಏನಾಗಲಿದೆ ಎಂಬುದು ಅವರಿಗೆ ತಿಳಿದಿತ್ತು.

ಲೋಕಸಭೆಯಲ್ಲಿ ಪ್ರಧಾನಿ (ಚಿತ್ರ ಕೃಪೆ: ಎಎನ್ಐ)

ಲೋಕಸಭೆಯಲ್ಲಿ ಪ್ರಧಾನಿ (ಚಿತ್ರ ಕೃಪೆ: ಎಎನ್ಐ)

 • Share this:
  ನವದೆಹಲಿ (ಫೆ. 8)  ಲೋಕಸಭೆಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ (Congress) ​ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ರಾಜ್ಯಸಭೆಯಲ್ಲೂ (Rajyasabha) ಟೀಕಾಪ್ರಹಾರ ನಡೆಸಿದ್ದಾರೆ. ಕಳೆದ 100 ವರ್ಷಗಳಲ್ಲಿ ಮನು ಕುಲ ಇಂಗಹ ಕೋವಿಡ್​ ಬಿಕ್ಕಟ್ಟನ್ನು ಕಂಡಿಲ್ಲ. ಇದರ ವಿರುದ್ಧ ಇಡೀ ಪ್ರಪಂಚ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಕ್ರಮಗಳಿಗೆ ಇಡೀ ಜಗತ್ತಿನಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಆದರೆ, ಕೆಲವು ರಾಜಕೀಯ ಪಕ್ಷಗಳ ಕೆಲವು ನಾಯಕರು ಕಳೆದ 2 ವರ್ಷಗಳಲ್ಲಿ ಅಪ್ರಬುದ್ಧರಂತೆ ವರ್ತಿಸಿದರು. ಲಸಿಕೆ ವಿರುದ್ಧ ಅಭಿಯಾನಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು.

  ಕರೋನಾ ಕುರಿತು ಸರ್ವಪಕ್ಷಗಳ ಸಭೆ ಕರೆದು, ಈ ಸಂಬಂಧ ಸರ್ಕಾರ ವಿವರವಾದ ಪ್ರಸ್ತುತಿಯನ್ನು ನೀಡಬೇಕಾಗಿದ್ದಾಗ, ಕೆಲವು ರಾಜಕೀಯ ಪಕ್ಷಗಳು ಸಭೆಗೆ ಹಾಜರಾಗದೇ, ಬಹಿಷ್ಕರಿಸಿದರು.

  ವಂಶ ಮೀರಿ ಎಂದಿಗೂ ಯೋಚಿಸಿಲ್ಲ
  ಕಾಂಗ್ರೆಸ್​ನ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ಇಲ್ಲದಿದ್ದರೆ ದೇಶವು ಹೇಗೆ ವಿಭಿನ್ನವಾಗುತ್ತಿತ್ತು ಎಂದು ವಿವರಣೆ ನೀಡಿದರು. ಕಾಂಗ್ರೆಸ್ಸಿನ ಸಮಸ್ಯೆಯೆಂದರೆ ಅದು ತನ್ನ ವಂಶವನ್ನು ಮೀರಿ ಎಂದಿಗೂ ಯೋಚಿಸಲಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವೆಂದರೆ ರಾಜವಂಶದ ಪಕ್ಷಗಳು. ಈ ಪಕ್ಷಗಳಿಗೆ ಕುಟುಂಬವೇ ಮುಖ್ಯವಾದಾಗ ಅಲ್ಲಿ ಪ್ರತಿಭೆಗಳು ಬಲಿಪಶುವಾಗುತ್ತವೆ ಎಂದರು.
  ಕಾಂಗ್ರೆಸ್ ಇಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

  ಗಾಂಧಿಜೀ ಕಾಂಗ್ರೆಸ್​ ಕಿತ್ತೊಗೆಯಬೇಕು ಎಂದು ಬಯಸಿದ್ದರು

  ಅವರಿಗೆಲ್ಲಾ ಭಾರತ ಎಂದರೆ ಇಂದಿರಾ, ಇಂದಿರಾ ಎಂದರೆ ಭಾರತ ಎಂದು ಟೀಕಿಸಿದರು
  ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎಂದು ಬಯಸಿದ್ದರು. ಅದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಕಾಂಗ್ರೆಸ್ ಉಳಿದರೆ ಏನಾಗಲಿದೆ ಎಂಬುದು ಅವರಿಗೆ ತಿಳಿದಿತ್ತು. ಗಾಂಧಿಯವರ ಆಶಯಗಳನ್ನು ಅನುಸರಿಸಿದ್ದರೆ, ಭಾರತವು ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು ಎಂದರು

  ಕಾಂಗ್ರೆಸ್​ ಇಲ್ಲದಿದ್ದರೆ ಈ ಸಮಸ್ಯೆಗಳು ಆಗುತ್ತಿರಲಿಲ್ಲ
  ಕಾಂಗ್ರೆಸ್​ ಇಲ್ಲದಿದ್ದರೆ ಭಾರತ ಸ್ವದೇಶಿ ಹಾದಿ ಹಿಡಿಯುತ್ತಿತ್ತು. ತುರ್ತುಪರಿಸ್ಥಿತಿಯ ಕಳಂಕ ಇರತ್ತಿರಲಿಲ್ಲ. ಭ್ರಷ್ಟಾಚಾರ ನೆಲೆಯೂರುತ್ತಿರಲಿಲ್ಲ. ಜಾತೀಯತೆ ಅಥವಾ ಪ್ರಾದೇಶಿಕತೆ ಇರುತ್ತಿರಲಿಲ್ಲ. ಸಿಖ್ಖರ ಹತ್ಯಾಕಾಂಡ ನಡೆಯುತ್ತಿರಲಿಲ್ಲ. ಕಾಶ್ಮೀರದಿಂದ ವಲಸೆ ಬರುತ್ತಿರಲಿಲ್ಲ. ತಂದೂರಿನಲ್ಲಿ ಮಹಿಳೆಯರನ್ನು ಸುಡುತ್ತಿರಲಿಲ್ಲ. ಮೂಲ ಸೌಕರ್ಯಕ್ಕಾಗಿ ಜನಸಾಮಾನ್ಯರು ಇಷ್ಟು ದಿನ ಕಾಯಬೇಕಾಗಿರಲಿಲ್ಲ. ಹೀಗೆ ಹಲವು ವಿಷಯಗಳನ್ನು ಪಟ್ಟಿ ಮಾಡಬಹುದು ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

  ಇದನ್ನು ಓದಿ : ಮುಂದಿನ 100 ವರ್ಷದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಲೋಕಸಭೆಯಲ್ಲಿ PM Modi ಮಾತಿನೇಟು!

  ಲತಾ ಮಂಗೇಶ್ಕರ್ ವಾಕ್​​ ಸ್ವಾತಂತ್ರ್ಯ ಕಿತ್ತುಕೊಂಡಿದ್ದ ಕಾಂಗ್ರೆಸ್​​

  ಇನ್ನು ಇದೇ ವೇಳೆ ದಿವಂಗತ ಗಾನ ಕೋಗಿಲೆ ಲತಾ ಮಂಗೇಶ್ಕರ್​ ವಿರುದ್ಧ ಕಾಂಗ್ರೆಸ್ ಹೇಗೆ ವರ್ತಿಸಿತು ಎಂದು ಕೂಡ ಸದನದಲ್ಲಿ ಉಲ್ಲೇಖಿಸಿದರು. ಲತಾ ಮಂಗೇಶ್ಕರ್​​ ಅವರು ಸಾವರ್ಕರ್ ಕವನ ಹೇಳಿದರು ಎಂಬ ಒಂದೇ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಆಲ್ ಇಂಡಿಯಾ ರೇಡಿಯೊದಿಂದ ತೆಗೆದುಹಾಕಿತು. ಇದೇನಾ ಕಾಂಗ್ರೆಸ್ ವಾಕ್ ಸ್ವಾತಂತ್ರ್ಯ? ಎಂದು ಪ್ರಶ್ನಿಸಿದರು

  ಇದನ್ನು ಓದಿ: ಭಾರತ ವಿಶ್ವ ನಾಯಕನಾಗಿ ಹೊರಹೊಮ್ಮಬೇಕು; ಲೋಕಸಭೆಯಲ್ಲಿ PM Modi

  ರಾಷ್ಟ್ರಪತಿ ವಂದನಾ ನಿರ್ಣಯದ ಭಾಷಣದ ಬದಲು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದನ್ನು ಖಂಡಿಸಿ, ಕಾಂಗ್ರೆಸ್​ ಸಂಸದರು ರಾಜ್ಯ ಸಭೆ ಸದನದಿಂದ ಹೊರ ನಡೆದರು.

  ಕೋವಿಡ್​ ಮೊದಲ ಅಲೆಯಲ್ಲಿ ವಲಸೆ ಕಾರ್ಮಿಕರಲ್ಲಿ ಸೋಂಕಿನ ಭಯವನ್ನು ಕಾಂಗ್ರೆಸ್​ ಹುಟ್ಟು ಹಾಕಿತು. ಈ ಮೂಲಕವೂ ಕಾಂಗ್ರೆಸ್​ ಕೊಳಕು ರಾಜಕೀಯ ಮಾಡಿತು. ಮೊದಲ ಅಲೆಯ ವೇಳೆ ಕಾಂಗ್ರೆಸ್​ ಬೇಜಾವಬ್ದಾರಿಯಿಂದ ವರ್ತಿಸಿತು. ಅಲಲದೇ ಮುಂಬೈ, ಬಿಹಾರ, ಉತ್ತರ ಪ್ರದೇಶದ ವಲಸಿಗರನ್ನು ಮನೆಗೆ ಮರಳುವಂತೆ ಪ್ರಚೋದಿಸಿದರು ಎಂದು ನಿನ್ನೆ ಲೋಕಸಭೆಯಲ್ಲೂ  ವಾಗ್ದಾಳಿ ನಡೆಸಿದ್ದರು.
  Published by:Seema R
  First published: