ಮಹಾರಾಷ್ಟ್ರದ ಅಧಿಕಾರಕ್ಕಾಗಿ ಪ್ರಧಾನಿ ಮೋದಿ ಎನ್​ಸಿಪಿ ಎದುರು ಮೈತ್ರಿ ಪ್ರಸ್ತಾಪ ಇಟ್ಟಿದ್ದರು; ಸತ್ಯ ಬಿಚ್ಚಿಟ್ಟ ಶರದ್​ ಪವಾರ್​

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್​ಸಿಪಿ ಒಟ್ಟಾಗಿ ಸರ್ಕಾರ ರಚನೆ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನ್ನ ಎದುರು ಪ್ರಸ್ತಾಪಿಸಿದ್ದರು. ಆದರೆ, ಬಿಜೆಪಿ ಜೊತೆಗೂಡಿ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾನು ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ತಿಳಿಸಿದ್ದಾರೆ.

MAshok Kumar | news18-kannada
Updated:December 3, 2019, 9:00 AM IST
ಮಹಾರಾಷ್ಟ್ರದ ಅಧಿಕಾರಕ್ಕಾಗಿ ಪ್ರಧಾನಿ ಮೋದಿ ಎನ್​ಸಿಪಿ ಎದುರು ಮೈತ್ರಿ ಪ್ರಸ್ತಾಪ ಇಟ್ಟಿದ್ದರು; ಸತ್ಯ ಬಿಚ್ಚಿಟ್ಟ ಶರದ್​ ಪವಾರ್​
ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​.
  • Share this:
ಮುಂಬೈ (ಡಿಸೆಂಬರ್ 03); ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಟು ವೈರಿ ಪಕ್ಷವಾದ ಎನ್​ಸಿಪಿ ಜೊತೆಗೂ ಸಹ ಮೈತ್ರಿ ಸಾಧಿಸಲು ಸಿದ್ದವಾಗಿತ್ತಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಎನ್​ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ನೀಡಿರುವ ಹೇಳಿಕೆ. ಅಲ್ಲದೆ, ಈ ಮೂಲಕ ಅಧಿಕಾರಕ್ಕಾಗಿ ಬಿಜೆಪಿ ಏನುಬೇಕಾದರೂ ಮಾಡುತ್ತದೆ ಎಂಬ ವಿಚಾರ ಮತ್ತೊಮ್ಮೆ ಸಾಬೀತಾದಂತಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದೆ. ಬಿಜೆಪಿ ಮೈತ್ರಿಯಿಂದ ಹೊರ ನಡೆದಿರುವ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸುವಲ್ಲಿ ಸಫಲವಾಗಿದೆ. ಆದರೆ, ಈ ಎಲ್ಲಾ ಬಿಕ್ಕಟ್ಟುಗಳು ಕೊನೆಗೊಂಡ ಮೂರು ದಿನದ ನಂತರ “ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕಾಗಿ ಎನ್​ಸಿಪಿ ಜೊತೆಗೆ ಮೈತ್ರಿ ಸಾಧಿಸಿ ಸರ್ಕಾರ ರಚನೆ ಮಾಡಲು ಸಿದ್ದವಿದ್ದರು. ಆದರೆ, ನಾನು ಈ ಪ್ರಸ್ತಾಪವನ್ನು ನಿರಾಕರಿಸಿದ್ದೆ” ಎಂಬ ಮಹತ್ವದ ವಿಚಾರವನ್ನು ಶರದ್ ಪವಾರ್ ಇದೀಗ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ ಬೆನ್ನಲ್ಲೀಗ ಗೋವಾದಲ್ಲೂ ಬಿಜೆಪಿ ಸರ್ಕಾರಕ್ಕೆ ಕಾದಿದೆಯಾ ಕಂಟಕ: ಅನುಮಾನ ಮೂಡಿಸಿದ ಶಿವಸೇನೆ ನಡೆ

ಸೋಮವಾರ ಮರಾಠಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶರದ್ ಪವಾರ್, “ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್​ಸಿಪಿ ಒಟ್ಟಾಗಿ ಸರ್ಕಾರ ರಚನೆ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನ್ನ ಎದುರು ಪ್ರಸ್ತಾಪಿಸಿದ್ದರು. ಆದರೆ, ಬಿಜೆಪಿ ಜೊತೆಗೂಡಿ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾನು ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದೆ. ಅಲ್ಲದೆ, ನಮ್ಮ ವ್ಯಯಕ್ತಿಕ ಸಂಬಂಧಗಳು ಉತ್ತಮವಾಗಿವೆ ಅವು ಭವಿಷ್ಯದಲ್ಲೂ ಹಾಗೆ ಮುಂದುವರೆಯಲಿವೆ ಎಂದು ಸೂಚಿಸಿದ್ದೆ” ಎಂದಿದ್ದಾರೆ. ಈ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಅಜಿತ್ ಪವಾರ್ ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ತಪ್ಪು; ಪವಾರ್

ಮಹಾರಾಷ್ಟ್ರ ರಾಜಕಾರಣದಲ್ಲಿ ಕಳೆದ ವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರ ಅಳಿಯ ಅಜಿತ್ ಪವಾರ್ ಬಿಜೆಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದರು. ಅಲ್ಲದೆ, ಉಪ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರ ಕೇವಲ ನಾಲ್ಕೇ ದಿನಕ್ಕೆ ಅಂತ್ಯ ಕಂಡಿತ್ತು.

ಸಂದರ್ಶನದ ವೇಳೆ ಸ್ವತಃ ತಮ್ಮ ಸೋದರ ಅಳಿಯ ಅಜಿತ್ ಪವಾರ್​ ಪಕ್ಷದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದ ಕುರಿತು ಸಹ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಶರದ್ ಪವಾರ್, “ಅಜಿತ್ ಪವಾರ್ ಮಧ್ಯರಾತ್ರಿ ದಂಗೆ ಎದ್ದು ದೇವೇಂದ್ರ ಫಡ್ನವೀಸ್ ಜೊತೆಗೂಡಿ ಸರ್ಕಾರ ರಚಿಸಿದ್ದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಆ ಸರ್ಕಾರ ಅಲ್ಪ ಕಾಲದಲ್ಲೇ ಉರುಳಿತ್ತು.
Loading...

ಅಜಿತ್ ಪವಾರ್ ಬಿಜೆಪಿ ಜೊತೆಗೆ ಕೈಜೋಡಿಸಲು ಮುಂದಾದಾಗ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳ ಕುರಿತಾಗಿ ನಾನು ಆತನನ್ನು ಎಚ್ಚರಿಸಿದ್ದೆ. ಆದರೂ, ಆತ ನನ್ನ ಮಾತನ್ನು ಗಂಬೀರವಾಗಿ ಪರಿಗಣಿಸದೆ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿದ್ದ. ಇದು ಖಂಡಿತ ಕ್ಷಮಿಸಲು ಸಾಧ್ಯವಿಲ್ಲದ ಅಪರಾಧ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ ಸ್ಪೀಕರ್ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ; ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವಿರೋಧ ಆಯ್ಕೆ
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...