Hyderabad ಇನ್ನು 'ಭಾಗ್ಯನಗರ'ವಾಗುತ್ತಾ? ಹೊಸ ಹೆಸರಿನಿಂದ ಕರೆದ ಪ್ರಧಾನಿ ನರೇಂದ್ರ ಮೋದಿ!

ಹೈದರಾಬಾದ್‌ನಲ್ಲಿ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ  ಮೋದಿ, ಹೈದರಾಬಾದ್‌ ಅನ್ನು ಭಾಗ್ಯನಗರ ಅಂತ ಕರೆದರು.

ಹೈದರಾಬಾದ್ ನಗರ

ಹೈದರಾಬಾದ್ ನಗರ

  • Share this:
ಹೈದರಾಬಾದ್: ತೆಲಂಗಾಣ (Telangana) ರಾಜ್ಯದ ರಾಜಧಾನಿ (State Capital), ಮುತ್ತಿನ ನಗರಿ ಹೈದರಾಬಾದ್ (Hyderabad) ಇನ್ನು ಮುಂದೆ ಭಾಗ್ಯನಗರ (Bhagya Nagar) ಆಗಲಿದೆಯಾ? ಹೈದರಾಬಾದ್ ನಿಜಾಮ (Hyderabad Nizam) ಇಟ್ಟಿದ್ದ ಹೆಸರು (Name) ಬದಲಾಗಬೇಕು ಎಂಬ ಆಗ್ರಹ ಈ ಹಿಂದೆಯೂ ಕೇಳಿ ಬಂದಿತ್ತು. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೈದರಾಬಾದ್ ನಗರವನ್ನು ಹೊಸ ಹೆಸರಿನಿಂದ ಕರೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ (BJP) ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ ಅನ್ನು ಭಾಗ್ಯನಗರ ಅಂತ ಕರೆದಿದ್ದಾರೆ.

ಹೈದರಾಬಾದ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ

ಹೈದರಾಬಾದ್‌ನಲ್ಲಿ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ  ಮೋದಿ, ಹೈದರಾಬಾದ್‌ ಅನ್ನು ಭಾಗ್ಯನಗರ ಅಂತ ಕರೆದರು. ಅಲ್ಲದೇ ಹೈದರಾಬಾದ್‌ನ ಹೆಸರನ್ನು ಭಾಗ್ಯನಗರ ಎಂದು ಬದಲಿಸುವ ಮಾತನ್ನು ಪ್ರಧಾನಿ ಬಿಜೆಪಿಯ ಹಲವು ನಾಯಕರು ಕಾರ್ಯಕಾರಿಣಿಯಲ್ಲಿ ಆಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಭಾಗ್ಯನಗರ ಅಂತ ಬದಲಾವಣೆ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ರಘುಬರ್ ದಾಸ್ ಪಕ್ಷದ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

ಭಾಗ್ಯಲಕ್ಷ್ಮೀ ದೇವಿಯ ಪುಣ್ಯ ಭೂಮಿ

ಬಿಜೆಪಿ ನಾಯಕ ದಿನೇಶ್ ಶರ್ಮಾ ಅವರು ಹೈದರಾಬಾದ್ ಬದಲಿಗೆ ಭಾಗ್ಯನಗರ ಪದವನ್ನು ಉಲ್ಲೇಖಿಸಿದ್ದಾರೆ.  ಭಾಗ್ಯಲಕ್ಷ್ಮಿ ದೇವಿಯ ದಿವ್ಯ ಸಾನ್ನಿಧ್ಯವನ್ನು ಹೊಂದಿರುವ ಈ ಭೂಮಿಯನ್ನು ಒಂದು ಕಾಲದಲ್ಲಿ ಭಾಗ್ಯನಗರ ಎಂದು ಕರೆಯಲಾಗುತ್ತಿತ್ತು. ಭಾಗ್ಯನಗರವು ಅಭಿವೃದ್ಧಿ ಸೇರಿದಂತೆ ಎಲ್ಲಾ ರಂಗಗಳಲ್ಲಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ" ಎಂದು ದಿನೇಶ್ ಶರ್ಮಾ ಹೇಳಿದ್ದಾರೆ.

ಹೆಸರು ಬದಲಿಸುವ ಪ್ರಸ್ತಾಪ ಇದೇ ಮೊದಲೇನಲ್ಲ

ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಕೇಂದ್ರ ಹಂತಕ್ಕೆ ಬಂದಿರುವುದು ಇದೇ ಮೊದಲಲ್ಲ. 2020ರಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಗಳ (GHMC) ಪ್ರಚಾರದ ಸಮಯದಲ್ಲಿ, ಬಿಜೆಪಿ ನಾಯಕರು 'ಭಾಗ್ಯನಗರ' ಅಂತ ಕರೆದಿದ್ದರು. ಅಂದಿನ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಅದನ್ನೇ ಹೇಳಿದ್ದರು.

ಭಾಗ್ಯ ನಗರ ಅಂತ ಕರೆದಿದ್ದ ಯೋಗಿ ಆದಿತ್ಯನಾಥ್

ಅಂದು ಭಾಷಣ ಮಾಡಿದ್ದ ಯೋಗಿ ಆದಿತ್ಯನಾಥ್, "ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ, ಹೈದರಾಬಾದ್ ಹೆಸರನ್ನು ಭಾಗ್ಯನಗರವನ್ನು ಏಕೆ ಬದಲಾಯಿಸಲಿಲ್ಲ?" ಎಂದು ಪ್ರಶ್ನಿಸಿದ್ದರು.

ಆರ್‌ಎಸ್‌ಎಸ್‌ನಿಂದಲೂ ಒತ್ತಾಯ

ಇನ್ನು ಆರ್‌ಎಸ್‌ಎಸ್‌ನ ತೆಲಂಗಾಣ ನಾಯಕರು ಇತ್ತೀಚಿನ ದಿನಗಳಲ್ಲಿ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದರು.

ಇತಿಹಾಸಗಳಲ್ಲಿ ಹೈದರಾಬಾದ್ ಉಲ್ಲೇಖ

ಅಧಿಕೃತ ದಾಖಲೆಗಳ ಪ್ರಕಾರ, ಕುತುಬ್ ಶಾಹಿ ರಾಜವಂಶದವರು ಹೈದರಾಬಾದ್ ಅನ್ನು ತಮ್ಮ ಮುಖ್ಯ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡರು. ಇತಿಹಾಸಕಾರರು ಹೇಳಿದಂತೆ, ಹೈದರಾಬಾದ್ ಅನ್ನು ಮಹಮ್ಮದ್ ಕುಲಿ ಕುತುಬ್ ಷಾ ರಚಿಸಿದನು. ಅವರು ರಾಜಧಾನಿಯನ್ನು ಗೋಲ್ಕೊಂಡದಿಂದ ಹೈದರಾಬಾದ್‌ಗೆ ಸ್ಥಳಾಂತರಿಸಿದರು.

ಇದನ್ನೂ ಓದಿ: Telangana: ಮೋದಿ ಹುಲಿ, ತೆಲಂಗಾಣ ಸಿಎಂ KCR ನರಿ ಎಂದ ಬಿಜೆಪಿ ಮುಖಂಡ!

ವೇಶ್ಯೆಯ ನೆನಪಿಗಾಗಿ ಹೈದರಾಬಾದ್‌ ಹೆಸರು ಬಂತಾ?

ಹೈದರಾಬಾದ್ ಎಂಬ ಹೆಸರಿನ ವಿಷಯಕ್ಕೆ ಬಂದಾಗ, ಇದು ಸುಲ್ತಾನನ ಮಗ ಹೈದರ್‌ಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ ಮತ್ತು ತೆಲಂಗಾಣದ ಜನಪ್ರಿಯ ಜಾನಪದ ಪ್ರಕಾರ, ಸುಲ್ತಾನ್ ಮುಹಮ್ಮದ್ ಕುಲಿ ಕುತುಬ್ ಷಾ ಭಾಗ್ಮತಿ ಎಂಬ ಸ್ಥಳೀಯ ವೇಶ್ಯೆಯನ್ನು ಪ್ರೀತಿಸುತ್ತಿದ್ದರು. ಆಕೆಯ ಗೌರವಾರ್ಥವಾಗಿ ನಗರವನ್ನು ಭಾಗ್ಯನಗರ ಎಂದು ಹೆಸರಿಸಲಾಗಿದೆ ಎಂದು ನಂಬಲಾಗಿದೆ.
Published by:Annappa Achari
First published: