Modi in Italy: ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮೋದಿ ರೋಮ್ ಭೇಟಿ, ಎರಡು ಮಹತ್ವದ ಶೃಂಗಸಭೆಯಲ್ಲಿ ಭಾಗಿ

Modi in Italy: ಇಂದು ಮಧ್ಯಾಹ್ನ 3:30ಕ್ಕೆ ರೋಮ್​ನಲ್ಲಿರುವ ಗಾಂಧಿ  ಪ್ರತಿಮೆ(Gandhi Statue) ಬಳಿ ತೆರಳಿ, ಪ್ರಧಾನಿ ಮೋದಿ ನಮನ ಸಲ್ಲಿಸಲಿದ್ದಾರೆ.

ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿ

ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿ

  • Share this:
ಪ್ರಧಾನಿ ನರೇಂದ್ರ  ಮೋದಿ(Narendra Modi) ಎರಡು ಮತಹ್ವದ ಜಿ20 ಶೃಂಗಸಭೆ(G20 Summit)ಗಾಗಿ ರೋಮ್​(Rome)​ಗೆ ತೆರಳಿದ್ದಾರೆ. ಬೆಳಗ್ಗೆ 9:30ಕ್ಕೆ ಪ್ರಧಾನಿ ಮೋದಿ ರೋಮ್(Rome)​ ತಲುಪಿದ್ದಾರೆ.ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ರೋಮ್​ಗೆ ಭೇಟಿಕೊಡುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿರುವುದು. ಇಂದು ಮಧ್ಯಾಹ್ನ 3:30ಕ್ಕೆ ರೋಮ್​ನಲ್ಲಿರುವ ಗಾಂಧಿ  ಪ್ರತಿಮೆ(Gandhi Statue) ಬಳಿ ತೆರಳಿ, ಪ್ರಧಾನಿ ಮೋದಿ ನಮನ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 5:30ಕ್ಕೆ ಇಟಲಿಯ ಪ್ರಧಾನಿ(Italy President) ಮಾರಿಯೋ ಡ್ರಾಗಿ(Mario Draghi) ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಿ-20 ಶೃಂಗಸಭೆ ರೋಮ್​ ಹಾಗೂ 26ನೇ ವಿಶ್ಚಸಂಸ್ಥೆಯ ಹವಾಮಾನ ಬದಲಾವಣೆ (Climate Change) ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದು ಈ ಪ್ರವಾಸ ಕೈಗೊಂಡಿದ್ದಾರೆ. ಇಟಲಿ ಬಳಿಕ ಮೋದಿ ಯುಕೆ ಪ್ರವಾಸ

ಅಕ್ಟೋಬರ್ 30 ಮತ್ತು 31 ರಂದು ನಡೆಯುವ 16 ನೇ G20 ನಾಯಕರ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ . 20 ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳ ವಾರ್ಷಿಕ ಸಭೆಯ ಬದಿಯಲ್ಲಿ ಹಲವಾರು ದ್ವಿಪಕ್ಷೀಯ ಸಂವಾದಗಳನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೋಮ್‌ನಲ್ಲಿ ಸಾಂಕ್ರಾಮಿಕ ರೋಗದಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆಯ ಕುರಿತು ಚರ್ಚೆ ನಡೆಸಲಿದ್ದಾರೆ . ಪ್ರಧಾನಿ ಮೋದಿ ಅಕ್ಟೋಬರ್ 29ರಿಂದ 31 ರವರೆಗೆ ರೋಮ್ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿ ಯುಕೆಗೆ ಪ್ರಯಾಣ ಬೆಳೆಸಲಿದ್ದಾರೆ. ಯುಕೆಯ ಗ್ಲಾಸ್ಗೋದಲ್ಲಿ, ಹವಾಮಾನ ವೈಪರಿತ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯತೆಯ ಬಗ್ಗೆ ಸಮಗ್ರವಾಗಿ ಮಾತನಾಡಲಿದ್ದಾರೆ.

ಇದನ್ನು ಓದಿ : ಜೋ ಬೈಡನ್​, ಕಮಲಾ ಹ್ಯಾರಿಸ್​ ನಡುವೆ ಶೀತಲಸಮರ? ಅಮೆರಿಕ ಮಾಧ್ಯಮಗಳಲ್ಲಿ ಹೀಗೊಂದು ಗುಸುಗುಸು!

ಪ್ರಧಾನಿ ಮೋದಿಯವರ 3 ದಿನ ಇಟಲಿ ಪ್ರವಾಸದ ಸಂಕ್ಷಿಪ್ತ ವರದಿ ಇಲ್ಲಿದೆ

ಶುಕ್ರವಾರ(ಭಾರತದ ಕಾಲಮಾನ)

- ಮಧ್ಯಾಹ್ನ 1.30 :  EU ಕೌನ್ಸಿಲ್ ಅಧ್ಯಕ್ಷರು, ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗೆ ಸಭೆ

- ಮಧ್ಯಾಹ್ನ 3.30: ಇಲ್ಲಿನ ಪಿಯಾಝಾ ಗಾಂಧಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮಿಗೆ ಭೇಟಿ, ನಮನ

- ರಾತ್ರಿ 8.30 : ಇಟಲಿ ಪ್ರಧಾನಿ ಮಾರಿಯೋ ಡ್ರಾಗಿyವರ ಭೇಟಿ ಹಾಗೂ ಮಾತುಕತೆ

- ರಾತ್ರಿ 9.30 : ಇಲ್ಲಿನ ಸಮುದಾಯದವರ ಭೇಟಿ, ಚರ್ಚೆ

ಶನಿವಾರ (ಭಾರತದ ಕಾಲಮಾನ)

- ಮಧ್ಯಾಹ್ನ 12 : ರೋಮನ್​ ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರೊಂದಿಗೆ ದೂರವಾಣಿ ಕರೆ ಜೊತೆ ಮಾತುಕತೆ

- ಮಧ್ಯಾಹ್ನ 1.30 : ಜಿ20 ಶೃಂಗಸಭೆ  ಉದ್ಘಾಟನಾ ಸಮಾರಂಭದಲ್ಲಿ ಭಾಗಿ

- ಸಂಜೆ 5 : ಫ್ರಾನ್ಸ್​ ಅಧ್ಯಕ್ಷ ಇಮ್ಯನುಯೆಲ್​ ಮ್ಯಾಕ್ರನ್​ ಜೊತೆ ದ್ವೀಪಕ್ಷಿಯ ಮಾತುಕತೆ

- ಸಂಜೆ 6 : ಇಂಡೋನೇಷಿಯಾ ಅಧ್ಯಕ್ಷ ಜೋಕೊ ವಿಡೋಡೋ ಜೊತೆ ಸಭೆ, ಚರ್ಚೆ

- ಸಂಜೆ 6.30 : ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಭೇಟಿ, ಮಾತುಕತೆ

- ರಾತ್ರಿ 10.30 : ಜಿ20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ

- ರಾತ್ರಿ 12 : ಜಿ-20 ಶೃಂಗಸಭೆಯ ನಾಯಕರೊಂದಿಗೆ ಔತಣಕೂಟ

ಇದನ್ನು ಓದಿ : ಏಕ ರೂಪ ಕಾಯ್ದೆ ಜಾರಿಗೊಳಿಸಲು 60 ಅಂಶಗಳಿರುವ ಕ್ರಿಯಾ ಯೋಜನೆ ಸಿದ್ಧಪಡಿಸಿದ ಕೇಂದ್ರ ಸರ್ಕಾರ!

ಭಾನುವಾರ (ಭಾರತದ ಕಾಲಮಾನ)

- ಮಧ್ಯಾಹ್ನ 12.30 : ಇಟಲಿಯ ಪ್ರಸಿದ್ಧ ತಾಣವಾದ ಟ್ರಿವಿ ಫೌಂಟೆನ್​ಗೆ ಭೇಟಿ

- ಮಧ್ಯಾಹ್ನ 2.30: 2ನೇ ದಿನದ ಜಿ 20 ಶೃಂಗಸಭೆಯಲ್ಲಿ ಭಾಗಿ

- ಮಧ್ಯಾಹ್ನ 4.45 : ಸ್ಫೇನ್​ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್​ ಜೊತೆ ಮಾತುಕತೆ

- ಸಂಜೆ 7.30 : ಜರ್ಮನಿ ಅಧ್ಯಕ್ಷೆ ಏಂಜೆಲಾ ಮರ್ಕೆಲ್​ ಅವರ ಭೇಟಿ, ಮಾತುಕತೆ

- ರಾತ್ರಿ 10.30 : ಇಟಲಿಯಿಂದ ಯುಕೆ ದೇಶದ ಗ್ಲಾಸ್ಗೋ ಕಡೆ ಪ್ರಯಾಣ
Published by:Vasudeva M
First published: