• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • The Vial: ಭಾರತದ ವ್ಯಾಕ್ಸಿನೇಷನ್ ಡ್ರೈವ್ ಹೇಗಿತ್ತು? 'ದಿ ವೈಲ್'‌ನಲ್ಲಿ ಸಾಹಸ ಬಿಚ್ಚಿಟ್ಟ ಪ್ರಧಾನಿ ಮೋದಿ

The Vial: ಭಾರತದ ವ್ಯಾಕ್ಸಿನೇಷನ್ ಡ್ರೈವ್ ಹೇಗಿತ್ತು? 'ದಿ ವೈಲ್'‌ನಲ್ಲಿ ಸಾಹಸ ಬಿಚ್ಚಿಟ್ಟ ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

The Vial: ಕೊರೊನಾದಿಂದಾಗಿ ಭಾರತವು ಆದರೆ ಹಿಂದೆಂದೂ ನೋಡಿರದ ಭಯಾನಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಈ ವೇಳೆ ದೇಶದ ಪರ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ದೇಶವೇ ಹೋರಾಡಿತ್ತು.

  • Share this:

ಕೋವಿಡ್ (Covid) ಮಹಾಮಾರಿಯನ್ನು ಭಾರತ ಮಣಿಸಿದ್ದು ಹೇಗೆ? ಕೊರೊನಾಗೆ ಮದ್ದು (Corona Vaccine) ಕಂಡು ಹಿಡಿಯಲು ಪಟ್ಟ ಪ್ರಯತ್ನವೇನು? ಹೇಗಿತ್ತು ಭಾರತದ ವ್ಯಾಕ್ಸಿನೇಷನ್ ಹೋರಾಟ? ಈ ಎಲ್ಲಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವೇ ಹಿಸ್ಟರಿ ಟಿವಿ18ನ (History TV18) ಡಾಕ್ಯುಮೆಂಟರಿ ‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ' (The Vail -India's Vaccine Story') ಈ ಸಾಕ್ಷ್ಯಚಿತ್ರವಾಗಿದೆ. ಇದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂದು, ನಾನು ತೃಪ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ, ಕೋವಿಡ್ ವಿರುದ್ಧದ ಯುದ್ಧವನ್ನು ಮುನ್ನಡೆಸುವ ಬಗ್ಗೆ ಪ್ರಧಾನಿ ಮೋದಿ (Narendra Modi) ಮಾತನಾಡುತ್ತಾರೆ.


ಸಾಕ್ಷ್ಯಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ:


ಇದು ಭಾರತಕ್ಕೆ ಎಂದಿಗೂ ನಿಭಾಯಿಸಲು ಸಾಧ್ಯವಾಗದ ಯುದ್ಧದಂತೆ ತೋರುತ್ತಿತ್ತು. ಕೊರೊನಾದಿಂದಾಗಿ ಭಾರತವು ಆದರೆ ಹಿಂದೆಂದೂ ನೋಡಿರದ ಭಯಾನಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಈ ವೇಳೆ ದೇಶದ ಪರ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾತ್ರವಲ್ಲದೆ ವಿಜಯಶಾಲಿಯಾಗಿ ಹೊರಹೊಮ್ಮಲು ಎಲ್ಲರೂ ಒಟ್ಟಿಗೆ ಹೋರಾಡಿದರು.


ಹಿಸ್ಟರಿ ಟಿವಿ18 ನ ಹೊಚ್ಚ ಹೊಸ ಸಾಕ್ಷ್ಯಚಿತ್ರ 'ದಿ ವೈಲ್-ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ'ಯಲ್ಲಿ ಕೊರೊನಾ ವಿರುದ್ಧ ಹೋರಾಡಿದ ಅನುಭವವನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ‘ಜನರು ಶಿಕ್ಷಣ ಪಡೆಯುವವರೆಗೆ, ಒಟ್ಟಿಗೆ ಸೇರಿ ಮತ್ತು ವೈರಸ್‌ನಿಂದ ತಮ್ಮನ್ನು ಮತ್ತು ಕುಟುಂಬವನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುವವರೆಗಿನ ಎಲ್ಲಾ ಅಂಶಗಳನ್ನು ಹೇಳಿದರು.


ಇದನ್ನೂ ಓದಿ: The Vial: ಸಾಕ್ಷ್ಯಚಿತ್ರಕ್ಕೆ ದನಿಯಾಗಿದ್ದೇಕೆ ಮನೋಜ್ ಬಾಜಪೇಯಿ? ಅನುಭವ ಹಂಚಿಕೊಂಡ ಬಾಲಿವುಡ್ ನಟ


ನಮ್ಮ ಲಭ್ಯವಿರುವ ಆರೋಗ್ಯ ಮೂಲಸೌಕರ್ಯವು ಸಾಮಾನ್ಯ ಪರಿಸ್ಥಿತಿಗಾಗಿತ್ತು. ಆದರೆ ಇಡೀ ದೇಶವು ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಪರಿಸ್ಥಿತಿಯಲ್ಲಿ, ಸಂಪನ್ಮೂಲಗಳು ಕಡಿಮೆಯಾಗುತ್ತವೆ. ಇದನ್ನು ಪರಿಗಣಿಸಿ, ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಮೊದಲು ದಾರಿ ಹುಡುಕಬೇಕಿತ್ತು. ನಾವು ಲಸಿಕೆ ಅಭಿವೃದ್ಧಿಪಡಿಸಲು ಯಾವುದಾದರೂ ದೇಶಕ್ಕಾಗಿ ಕಾಯಬೇಕೆ ಅಥವಾ ನಮ್ಮ ಜೀನೋಮಿಕ್ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮತ್ತು ಲಸಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂದು ನಾವು ಭಾವಿಸಿದ್ದೇವು. ಇದಕ್ಕಾಗಿ ನಮ್ಮ ಲಸಿಕೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.




ವ್ಯಾಕ್ಸಿನ್​ಗೆ ಸರ್ಕಾರದಿಂದ 900 ಕೋಟಿ:


ಇನ್ನು, ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹೇಳಿದ್ದು, ‘ಕೊರೊನಾ ಲಸಿಕೆ ಸಂಶೋಧನೆಗಾಗಿ ಸರ್ಕಾರವು 900 ಕೋಟಿ ರೂಪಾಯಿಗಳನ್ನು ನೀಡಿತು ಎಂದು ಹೇಳಿದ್ದಾರೆ. ಇನ್ನು, ಪ್ರಧಾನಿ ಮೋದಿ ಕೊರೊನಾ ವೇಳೆ ನಮಗೆ ವೇಗವಾಗಿ ಲಸಿಕೆ ಕಂಡುಹಿಡಿಯುವುದು ಅಗತ್ಯವಿತ್ತು. ಇದಕ್ಕಾಗಿ ನಾವು ದೊಡ್ಡ ಕ್ಯಾನ್ವಾಸ್‌ನಲ್ಲಿ, ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆವು.


ಇದನ್ನೂ ಓದಿ: The Vial: ಜಗತ್ತನ್ನೇ ಆವರಿಸಿತ್ತು ಕೋವಿಡ್ 19, ಮೋದಿ ಮನಸ್ಸಿನಲ್ಲಿದ್ದ ಮೊದಲ ಆಲೋಚನೆ ಏನು?


ಲಸಿಕೆ ತಲುಪಿಸುವುದು ಸವಾಲಾಗಿತ್ತು:


ಆದಾಗ್ಯೂ, ಭಾರತಕ್ಕೆ ಸವಾಲು ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಮಾತ್ರವಾಗಿರಲಿಲ್ಲ. ಲಸಿಕೆಯನ್ನು ದೇಶದ ಮೂಲೆ ಮೂಲೆಗಳಿಗೂ ನಿಗದಿತ ಸಮಯದ ತಲುಪಿಸಬೇಕಿತ್ತು. ಈ ವೇಳೆ ಶ್ರೀಮಂತ ರಾಷ್ಟ್ರಗಳು ಸಹ 50-60 ಪ್ರತಿಶತಕ್ಕಿಂತ ಹೆಚ್ಚು ಇನಾಕ್ಯುಲೇಷನ್ ಅನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಭಾರತದ ಸುಗಮ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ CoWIN ಅಪ್ಲಿಕೇಶನ್‌ನ ಪಾತ್ರವನ್ನು ಶ್ಲಾಘಿಸಿದರು.


ಇತಿಹಾಸದ ಪುಟಗಳನ್ನು ತಿರುಗಿಸಿದಾಗ ಮತ್ತು ಸನ್ನಿವೇಶಗಳನ್ನು ವಿಶ್ಲೇಷಿಸಿದಾಗ, ಈ ಅವಧಿಯಲ್ಲಿ ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟವು ಮನುಕುಲಕ್ಕೆ ಒಂದು ಪಾಠವಾಗಿದೆ. ಇಂದು, ನನ್ನ ದೇಶದ ವೈದ್ಯರು, ಆಸ್ಪತ್ರೆಗಳು ಮತ್ತು ವಿಜ್ಞಾನಿಗಳು ಗಮನಾರ್ಹವಾದ ಕೆಲಸವನ್ನು ಮಾಡಿದ್ದಾರೆ ಎಂದು ನಾನು ತೃಪ್ತಿ ಹೊಂದಿದ್ದೇನೆ ಏಕೆಂದರೆ ಲಸಿಕೆಯ ಸುತ್ತ ಯಾವುದೇ ನಕಾರಾತ್ಮಕತೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

top videos


    'ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ' ಹಲವಾರು ಕಥೆಗಳನ್ನು ಹೊಂದಿದೆ. ಇದು ಲಸಿಕೆ ತಯಾರಕರ ಸಂದರ್ಶನಗಳನ್ನು ಒಳಗೊಂಡಿದೆ. ಭಾರತದ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಿಇಒ ಆದರ್ ಪೂನಾವಾಲಾ ಮತ್ತು ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ. ಕೃಷ್ಣ ಸೇರಿದಂತೆ ಅನೇಕರ ಜರ್ನಿಯ ಕಥೆಯನ್ನು ಜನ ಸಾಮಾನ್ಯರಿಗೆ ತಿಳಿಸಿಕೊಟ್ಟಿದೆ.

    First published: