ಮನೆಯೊಳಗೇ ಹಬ್ಬ ಮಾಡಿ; ಕನ್ನಡದಲ್ಲಿ ಯುಗಾದಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಅಮಿತ್​ ಶಾ

Ugadi 2020: ಕನ್ನಡಿಗರಿಗೆ ಕನ್ನಡದಲ್ಲಿಯೇ ಯುಗಾದಿಯ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಆರೋಗ್ಯ ಸಿಗಲಿ ಎಂದಿದ್ದಾರೆ. ಈ ವರ್ಷ ಎಲ್ಲರ ಆಕಾಂಕ್ಷೆಗಳನ್ನೂ ದೇವರು ಈಡೇರಿಸಲಿ ಎಂದಿದ್ದಾರೆ.

Sushma Chakre | news18-kannada
Updated:March 25, 2020, 11:35 AM IST
ಮನೆಯೊಳಗೇ ಹಬ್ಬ ಮಾಡಿ; ಕನ್ನಡದಲ್ಲಿ ಯುಗಾದಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಅಮಿತ್​ ಶಾ
ಪ್ರಧಾನಿ ನರೇಂದ್ರ ಮೋದಿ.
  • Share this:
ಬೆಂಗಳೂರು (ಮಾ. 25): ಇಂದು ಭಾರತೀಯ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ. ಬೇವು-ಬೆಲ್ಲ ತಿಂದು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಬೇಕಾದ ಇಂದು ಎಲ್ಲೆಡೆ ಕೊರೋನಾದ ಕರಾಳ ಛಾಯೆ ಆವರಿಸಿದೆ. ಎಲ್ಲರೂ ತಮ್ಮ ಮನೆಯಲ್ಲೇ ಸರಳವಾಗಿ ಯುಗಾದಿ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯ್ಲಲಿ ಕರ್ನಾಟಕದ ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ಕನ್ನಡಿಗರಿಗೆ ಕನ್ನಡದಲ್ಲಿಯೇ ಯುಗಾದಿಯ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಆರೋಗ್ಯ ಸಿಗಲಿ ಎಂದಿದ್ದಾರೆ. ಈ ವರ್ಷ ಎಲ್ಲರ ಆಕಾಂಕ್ಷೆಗಳನ್ನೂ ದೇವರು ಈಡೇರಿಸಲಿ. ವಿಪತ್ತುಗಳಿಂದ ಹೊರಗೆ ಬರಲು ಹೊಸ ಚೈತನ್ಯ ನೀಡಲಿ. ಪ್ರತಿಯೊಬ್ಬರೂ ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಹಬ್ಬವನ್ನು ಆಚರಿಸಿ ಎಂದು ಪ್ರಧಾನಿ ಶುಭಾಶಯ ಕೋರಿದ್ದಾರೆ.ಗೃಹ ಸಚಿವ ಅಮಿತ್​ ಶಾ ಕೂಡ ಕನ್ನಡದಲ್ಲಿ ಯುಗಾದಿಯ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಹೊಸ ವರ್ಷ ಯುಗಾದಿ ಹಬ್ಬದ ಶುಭಾಶಯಗಳು. ಈ ಹೊಸ ವರ್ಷದಂದು, ಮನೆಯಲ್ಲೇ ಇರುವುದರ ಮೂಲಕ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವುದರೊಂದಿಗೆ ಕೋವಿಡ್-‌19 ಮಹಾಮಾರಿಯನ್ನು ತೊಲಗಿಸುವ ಸಂಕಲ್ಪವನ್ನು ಮಾಡೋಣ. ನಿಮಗೆಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂತೋಷ ಲಭಿಸಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 
First published: March 25, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading