ಕೇರಳ ನೆರೆ; 500 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

news18
Updated:August 18, 2018, 11:21 AM IST
ಕೇರಳ ನೆರೆ; 500 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
news18
Updated: August 18, 2018, 11:21 AM IST
ನ್ಯೂಸ್ 18 ಕನ್ನಡ

ತಿರುವನಂತಪುರಂ (ಕೇರಳ) ಆಗಸ್ಟ್ 18 : ಪ್ರವಾಹದಲ್ಲಿ ಮುಳುಗಿರುವ ಕೇರಳ ರಾಜ್ಯಕ್ಕೆ ಮಧ್ಯಂತರ ಪರಿಹಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನಿಧಿಯನ್ನು ಘೋಷಿಸಿದರು.  ಕೇರಳ ಸಿಎಂ  ಪಿಣರಾಯಿ ವಿಜಯನ್, ಕೇಂದ್ರ ಸಚಿವ ಕೆ.ಜೆ.ಆಲ್ಫೋನ್ಸ್ ಹಾಗೂ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದ ನಂತರ ಪ್ರಧಾನಿ ಮೋದಿ ಅವರು ಈ ಘೋಷಣೆ ಮಾಡಿದರು.

ಸಭೆ ನಂತರ ಪ್ರಧಾನಿ ಮೋದಿ ಅವರು ಮಳೆಯಿಂದ ತೀವ್ರ ಹಾನಿಗೆ ಒಳಗಾಗಿರುವ ಎರ್ನಾಕುಲಂ, ಪಥನಂತಿಟ್ಟ ಹಾಗೂ ಆಲ್​ಪುಜಾ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಆರಂಭಿಸಿದರು.


Loading...

ಈ ಮೊದಲು ಕೊಚ್ಚಿಯಲ್ಲಿ ಮಳೆ ಮುಂದುವರೆದಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಬೇಕಿದ್ದ ಉದ್ದೇಶಿತ ವೈಮಾನಿಕ ಸಮೀಕ್ಷೆಯನ್ನು ರದ್ದು ಮಾಡಲಾಗಿತ್ತು. ಆನಂತರ ನೆರೆ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ ಕೆ.ಜೆ.ಆಲ್ಫೋನ್ಸ್ ಹಾಗೂ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಹತ್ತು ದಿನಗಳು ಕಳೆದರೂ ಕೇಂದ್ರ ಸರ್ಕಾರ ತಡವಾಗಿ ಸ್ಪಂದಿಸುತ್ತಿದೆ ಎಂಬ ಆರೋಪದ ನಡುವೆ ಪ್ರಧಾನಿ ಮೋದಿ ಅವರು ಕೇರಳದ ಪ್ರವಾಹವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವ ನಿರೀಕ್ಷೆ ಇದೆ.

ಏತನ್ಮಧ್ಯೆ, ಯುಎಇ ಪ್ರಧಾನಿ ಶೈಕ್​ ಮೊಹಮ್ಮದ್​ ಮತ್ತು ಉಪಾಧ್ಯಕ್ಷರು ಕೇರಳ ಪ್ರವಾಹದ ಸಹಾಯಕ್ಕೆ ಒಂದು ತಂಡವನ್ನು ರಚಿಸಿದ್ದಾರೆ. ದುಬೈನಲ್ಲಿ ವಾಸವಾಗಿರುವ ಕೇರಳ ಜನರು ಅಲ್ಲಿನ ಪ್ರಧಾನಿಯಲ್ಲಿ ಈ ಮನವಿ ಮಾಡಿದ್ದು, ಅದಕ್ಕೆ ಅಲ್ಲಿನ ಸರ್ಕಾರ ಸ್ಪಂದಿಸಿದೆ.ನಿರಂತರವಾಗಿ ಸುರಿತ್ತಿರುವ ಮಳೆಯಿಂದಾಗಿ ಕೇರಳದ 14 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಮುಂದುವರಿಸಲಾಗಿದೆ. ಮರಣ ಮಳೆ ಈವರೆಗೂ 324 ಜನರನ್ನ ಬಲಿ ಪಡೆದಿದೆ . ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಸುರಕ್ಷಿತ ಸ್ಥಳಕ್ಕೆ ಶಿಪ್ಟ್‌ ಮಾಡಲಾಗುತ್ತಿದೆ.ಸೇನಾಪಡೆಯ 11 ಹೆಲಿಕಾಪ್ಟರ್​ಗಳು ಹಾಗೂ ಸೇನಾಪಡೆಯ ಮೋಟರ್ ​ಬೋಟ್‌ಗಳು ಸಂತ್ರಸ್ತರ ರಕ್ಷಣಾ​ ಕಾರ್ಯಾಚರಣೆ ನಡೆಸುತ್ತಿವೆ. 6 ಜಿಲ್ಲೆಗಳ ವಿವಿಧ ಕಡೆ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಈವರೆಗೂ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದ್ದು, ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ