News18 India World Cup 2019

ಶಾಂತಿ ಮಾತುಕತೆಗಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮುಂದೆ ನರೇಂದ್ರ ಮೋದಿ ಅಂಗಲಾಚಿದರೇ?

ಉಗ್ರ ಚಟುವಟಿಕೆ ನಿಲ್ಲಿಸುವ ವರೆಗೂ ಶಾಂತಿ ಮಾತುಕತೆ ಅಸಾಧ್ಯ ಎಂದಿದ್ದ ಮೋದಿ, ಈಗ ಇಮ್ರಾನ್​ ಖಾನ್​ಗೆ ಮನವಿ ಮಾಡಿದರೇ?

news18
Updated:August 20, 2018, 1:04 PM IST
ಶಾಂತಿ ಮಾತುಕತೆಗಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮುಂದೆ ನರೇಂದ್ರ ಮೋದಿ ಅಂಗಲಾಚಿದರೇ?
ಭಾರತ ಪ್ರಧಾನಿ ಮೋದಿ, ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರ ಸಾಂದರ್ಭಿಕ ದೃಶ್ಯ
news18
Updated: August 20, 2018, 1:04 PM IST
ಕರಾಚಿ (ಆಗಸ್ಟ್​ 20): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್​ ಖಾನ್​ರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ? ಈ ಪ್ರಶ್ನೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಷಾ ಮಹಮೂದ್​ ಕುರೇಶಿ ಬಹಿರಂಗ ಹೇಳಿಕೆ ನೀಡಿದ್ದು, ಮೋದಿ ಶಾಂತಿ ಮಾತುಕತೆಗಾಗಿ ಪತ್ರ ಬರೆದಿದ್ದಾರೆ ಎಂದಿದ್ಧಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಉಗ್ರರ ಒಳನುಸುಳುವಿಕೆ ಮತ್ತು ಉಗ್ರ ಚಟುವಟಿಕೆ ನಿಲ್ಲುವವರೆಗೂ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂಬ ನಿರ್ಧಾರ ತಳೆದಿದೆ. ಆದರೆ ಈಗ ಪಾಕಿಸ್ತಾನ ಹೇಳುತ್ತಿರುವಂತೆ ಮೋದಿಯವರು ಪತ್ರದಲ್ಲಿ ಶಾಂತಿ ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಪಾಕ್​ ಹೇಳುತ್ತಿರುವುದು ಸತ್ಯವೇ ಆದಲ್ಲಿ ಮೋದಿಯವರು ಯಾಕೆ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂಬ ಗಂಭೀರ ಪ್ರಶ್ನೆ ಏಳಲಿದೆ.

ಸೋಮವಾರ ಮಾಧ್ಯಮಗಳ ಜತೆ ಕರಾಚಿಯಲ್ಲಿ ಮಾತನಾಡಿದ ಪಾಕ್​ ವಿದೇಶಾಂಗ ಸಚಿವ ಷಾ ಮಹಮೂದ್​ ಕುರೇಶಿ, "ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಮ್ರಾನ್​ ಖಾನ್​ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಭಾರತ ಮತ್ತು ಪಾಕ್​ ನಡುವಿನ ಶಾಂತಿ ಮಾತುಕತೆಗಾಗಿ ಆಹ್ವಾನ ನೀಡಿದ್ದಾರೆ. ಜತೆಗೆ ನಿರಂತರ ಮಾತುಕತೆಯಿಂದ ಮಾತ್ರ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲು ಸಾಧ್ಯ ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ," ಎಂದು ಹೇಳಿದ್ದಾರೆ.

ಇತ್ತ ಬಿಜೆಪಿ ಮುಖಂಡರು ಮತ್ತು ಖುದ್ದು ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಭಾರತದ ನೆಲದಲ್ಲಿ ಉಗ್ರ ಚಟುವಟಿಕೆ ನಿಲ್ಲಿಸುವ ವರೆಗೂ ಶಾಂತಿ ಮಾತುಕತೆ ಅಸಾಧ್ಯ ಎಂದಿದ್ದರು. ಜತೆಗೆ ಉಗ್ರ ಹಫೀಜ್​ ಸಯೀದ್​ನನ್ನು ಭಾರತದ ವಶಕ್ಕೆ ನೀಡುವಂತೆ ಹಲವು ಬಾರಿ ಪಾಕ್​ಗೆ ಭಾರತ ಕೇಳಿದೆ. ಆದರೂ ಹಫೀಜ್​ ಸಯೀದ್​ಗೆ ಪಾಕ್​ ವಾಸ್ತವ್ಯ ನೀಡಿದೆ. ಪಠಾಣ್​ ಕೋಟ್​ ಸೇನಾನೆಲೆಯ ಮೇಲಿನ ದಾಳಿ, ಉರಿ, ಛತ್ತಿಸ್​ಗಢದ ಸುಕ್ಮಾ ದಾಳಿ, ಅಮರನಾಥ ಯಾತ್ರಾರ್ಥಿಗಳ ಮೇಲಿನ ದಾಳಿಗಳನ್ನು ದೇಶ ಇನ್ನೂ ಮರೆತಿಲ್ಲ. ಅದರ ನಂತರವೂ ಪದೇ ಪದೇ ಕದನ ವಿರಾಮವನ್ನು ಪಾಕ್​ ಮುರಿಯುತ್ತಲೇ ಬಂದಿದೆ. ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಲೂ ಪಾಕ್​ ಕುಮ್ಮಕ್ಕೇ ಕಾರಣ ಎಂದು ಭಾರತ ಆರೋಪಿಸಿದೆ.

ಈ ಎಲ್ಲದರ ನಡುವೆ ಪಾಕ್​ ಪ್ರಧಾನಿಗೆ ಶಾಂತಿ ಮಾತುಕತೆ ಕೋರಿ ಮೋದಿ ಪತ್ರ ಬರೆದಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಪಾಕಿಸ್ತಾನ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಪಾಕಿಸ್ತಾನದ ಭಾರತೀಯ ರಾಯಭಾರಿ ಅಜಯ್​ ಬಿಸಾರಿಯಾ ಈ ಬಗ್ಗೆ ನ್ಯೂಸ್​ 18ಗೆ ಮಾಹಿತಿ ನೀಡಿದ್ದು, ಪತ್ರ ಬರೆದಿರುವುದು ಸತ್ಯ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಇದೊಂದು ಕೇವಲ ಶಿಷ್ಟಾಚಾರದ ಪತ್ರವಾಗಿದ್ದು, ಶಾಂತಿ ಮಾತುಕತೆಯ ಬಗ್ಗೆ ಮೋದಿ ಪ್ರಸ್ತಾಪಿಸಿಲ್ಲ. ಜತೆಗೆ ಉಗ್ರರ ಚಟುವಟಿಕೆಗೆ ಪಾಕ್​ ಬ್ರೇಕ್​ ಹಾಕುವವರೆಗೂ ಶಾಂತಿ ಮಾತುಕತೆಗೆ ಭಾರತ ಮುಂದಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
Loading...

ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ಮೋದಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದರೆ ಊಹಾಪೋಹಗಳು ಮತ್ತು ಪಾಕ್​ ಸಚಿವ ನೀಡಿರುವ ಹೇಳಿಕೆ ಸತ್ಯವೋ ಇಲ್ಲವೋ ಎಂಬುದಕ್ಕೆ ಉತ್ತರ ಸಿಗಲಿದೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...