Independence Day: ನಾಳೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ, ಬಂಪರ್ ಗಿಫ್ಟ್​ ನಿರೀಕ್ಷೆ

ಕೆಂಪುಕೋಟೆಯಲ್ಲಿ ಒಂಭತ್ತನೇ ಬಾರಿ ಧ್ವಜಾರೋಹಣ ಮಾಡುತ್ತಿರುವ ಪ್ರಧಾನಿ ಮೋದಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ ದೇಶದ ಜನರಿಗೆ ಬಂಪರ್ ಕೊಡುಗೆ ಕೊಡಬಹುದು ಎನ್ನಲಾಗಿದೆ. ಮೋದಿ ಭಾಷಣದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ನಾಳೆ ಕೆಂಪುಕೋಟೆಯಲ್ಲಿ ಮೋದಿ ಭಾಷಣ

ನಾಳೆ ಕೆಂಪುಕೋಟೆಯಲ್ಲಿ ಮೋದಿ ಭಾಷಣ

  • Share this:
ನಮ್ಮ ಭಾರತ (India) ದೇಶ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ದೇಶದ ಮೂಲೆ ಮೂಲೆಯಲ್ಲೂ ಆಜಾದಿ ಕಾ ಅಮೃತ ಮಹೋತ್ಸವದ ಸಡಗರ ತುಂಬಿ ತುಳುಕುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರಂಗಾ (India Flag) ರಾರಾಜಿಸ್ತಿದೆ. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನಲೆ ನಾಳೆ ಪ್ರಧಾನಿ ನರೇಂದ್ರ ಮೋದಿ (Modi) ದೆಹಲಿಯ ಕೆಂಪುಕೋಟೆಯಲ್ಲಿ (Red Fort) ಧ್ವಜಾರೋಹಣ ಮಾಡಲಿದ್ದಾರೆ. ಕೆಂಪುಕೋಟೆಯಲ್ಲಿ ನಿಂತು 9ನೇ ಬಾರಿ ಧ್ವಜಾರೋಹಣ (Flag Hoisting)ಮಾಡುತ್ತಿರುವ ಪ್ರಧಾನಿ ಮೋದಿ ಭಾಷಣದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಅದರಲ್ಲೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಭರ್ಜರಿ ಘೋಷಣೆ ಕೂಡ ಮಾಡಬಹುದು ಎನ್ನಲಾಗ್ತಿದೆ.

ಕೆಂಪುಕೋಟೆಯಲ್ಲಿ ಒಂಭತ್ತನೇ ಬಾರಿ ಧ್ವಜಾರೋಹಣ ಮಾಡುತ್ತಿರುವ ಪ್ರಧಾನಿ ಮೋದಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ ದೇಶದ ಜನರಿಗೆ ಬಂಪರ್​ ಕೊಡುಗೆ ಕೊಡಬಹುದು ಎನ್ನಲಾಗಿದೆ. ಮೋದಿ ಭಾಷಣದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಜನರಲ್ಲಿ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ.

9ನೇ ಬಾರಿ ಮೋದಿ ಧ್ವಜಾರೋಹಣ

ಭಾರತ ದೇಶ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಅಂದಹಾಗೇ ಕೆಂಪುಕೋಟೆಯಲ್ಲಿ ಮೋದಿ ನೆರವೇರಿಸ್ತಿರೋದು 9 ಬಾರಿಯ ಧ್ವಜಾರೋಹಣ.

Prime Minister Modi speech at Red Fort tomorrow People are expected gift-
ನಾಳೆ ಮೋದಿ ಧ್ವಜಾರೋಹಣ


ನಾಳೆ ಮೋದಿ ಎಲ್ಲೆಲ್ಲಿಗೆ ಹೋಗ್ತಾರೆ?

ಬೆಳಗ್ಗೆ 7:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ.

ಬೆಳಗ್ಗೆ 7 ಗಂಟೆಗೆ ಮೋದಿ ರಾಜಘಾಟ್​​​ಗೆ ತೆರಳಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

ಬೆಳಗ್ಗೆ 7.15ಕ್ಕೆ ಕೆಂಪುಕೋಟೆ ಆಗಮನ. 3 ಸೇನೆಗಳಿಂದ ಗೌರವ ವಂದನೆ ಸ್ವೀಕಾರ

ಇದನ್ನೂ ಓದಿ: ಸ್ವಾತಂತ್ರ್ಯ ಅಮೃತೋತ್ಸವ, ನೆಹರೂ ಮರೆತ ಕರ್ನಾಟಕ ಸರ್ಕಾರ- ಕಾಂಗ್ರೆಸ್ ಆಕ್ರೋಶ

ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆ ಕೊಡುಗೆ ನಿರೀಕ್ಷೆ

ಪ್ರಧಾನಿಯಾದ ಬಳಿಕ ಮೋದಿ 9ನೇ ಬಾರಿ ಧ್ವಜಾರೋಹಣ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಬಂದಿರುವ ಹಿನ್ನಲೆ ಮೋದಿ ವಿಶೇಷ ಕೊಡುಗೆಗಳನ್ನು ದೇಶದ ಜನರಿಗಾಗಿ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ.

ಜನರಿಗೆ ಮೋದಿ ಗಿಫ್ಟ್​ ಸಾಧ್ಯತೆ

ವೈದ್ಯಕೀಯ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಮೋದಿ ಒಂದಷ್ಟು ಘೋಷಣೆ ಮಾಡಬಹುದು

ಹೀಲ್ ಇನ್ ಇಂಡಿಯಾ, ಹೀಲ್ ಬೈ ಇಂಡಿಯಾ ಯೋಜನೆ ಘೋಷಣೆಯಾಗಬಹುದು

ಕ್ಯಾನ್ಸರ್, ಮಧುಮೇಹದ ವಿರುದ್ಧ ಹೋರಾಡಲು ಔಷಧಿಗಳ ಬೆಲೆಯಲ್ಲಿ ಇಳಿಕೆ ಘೋಷಣೆ ಸಾಧ್ಯತೆ

ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡಬಹುದು

ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ಅಭಿವೃದ್ಧಿಗೆ ಯೋಜನೆ ಘೋಷಣೆ ಸಾಧ್ಯತೆ

ಇದನ್ನೂ ಓದಿ: ಜನರ ಬಳಿ ಮನೆಗಳೇ ಇಲ್ಲ ತಿರಂಗಾ ಎಲ್ಲಿ ಹಾರಿಸೋದು? ಮೋದಿ ಸರ್ಕಾರದ ವಿರುದ್ಧ ಉದ್ಧವ್ ಕಿಡಿ!

ಅಗತ್ಯವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ

ಬೆಲೆ ಏರಿಕೆಯಿಂದ ನಲುಗುತ್ತಿರುವ ಜನರಿಗೆ ಮೋದಿ ಸಿಹಿ ಸುದ್ದಿ ಕೊಡಬಹುದು ಎನ್ನಲಾಗ್ತಿದೆ. ಈಗಾಗಲೇ ತಿನ್ನೋ ಅನ್ನದಿಂದ ಹಿಡಿದು ಎಲ್ಲಾ ವಸ್ತುಗಳ ಮೇಲೆ ಜಿಎಸ್​ಟಿ ಬರೆ ಎಳೆದಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗಿದೆ. ಹಾಗಾಗಿ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಬಹುದು ಅಂತಾ ಜನ ನಿರೀಕ್ಷಿಸುತ್ತಿದ್ದಾರೆ.

ಇವುಗಳ ಜೊತೆಗೆ ಇನ್ನು ಹಲವು ಗಿಫ್ಟ್​​ಗಳನ್ನು ಜನರಿಗೆ ಕೊಡಬಹುದು ಎನ್ನಲಾಗ್ತಿದೆ. ಭಾಷಣದ ವೇಳೆ ಇನ್ನೂ ಹಲವು ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸುವ ಸಾಧ್ಯತೆಗಳಿದೆ.

ಉಗ್ರರ ಕರಿನೆರಳು, ಎಲ್ಲೆಡೆ ಕಟ್ಟೆಚ್ಚರ

ಕೆಂಪುಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣದ ಮೇಲೆ ಉಗ್ರರ ಕರಿನೆರಳು ಬಿದ್ದಿದೆ. ಡ್ರೋಣ್ ದಾಳಿಯಾಗಬಹುದು ಎಂದು  ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಸಾಕಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ.
Published by:Thara Kemmara
First published: