• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: ಆಸ್ಟ್ರೇಲಿಯಾ-ಭಾರತದ ನಡುವಿನ ಸಂಬಂಧದ ಬಗ್ಗೆ ಮೋದಿ ಟ್ವೀಟ್​, ಆಸೀಸ್​ ಮಿನಿಸ್ಟರ್ ಹೇಳಿದ ಶಿಕ್ಷಕಿ ಕುರಿತ ಸ್ಟೋರಿ ಶೇರ್ ಮಾಡಿ ಪಿಎಂ

Narendra Modi: ಆಸ್ಟ್ರೇಲಿಯಾ-ಭಾರತದ ನಡುವಿನ ಸಂಬಂಧದ ಬಗ್ಗೆ ಮೋದಿ ಟ್ವೀಟ್​, ಆಸೀಸ್​ ಮಿನಿಸ್ಟರ್ ಹೇಳಿದ ಶಿಕ್ಷಕಿ ಕುರಿತ ಸ್ಟೋರಿ ಶೇರ್ ಮಾಡಿ ಪಿಎಂ

ಭಾರತೀಯ ಮೂಲದ ಆಸ್ಟ್ರೇಲಿಯಾ ಶಿಕ್ಷಕಿ ಬಗ್ಗೆ ಮೋದಿ ಟ್ವೀಟ್

ಭಾರತೀಯ ಮೂಲದ ಆಸ್ಟ್ರೇಲಿಯಾ ಶಿಕ್ಷಕಿ ಬಗ್ಗೆ ಮೋದಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಸಚಿವರು ಹೇಳಿದ ಆಸಕ್ತಿದಾಯಕ ವಿಷಯವನ್ನು ಸರಣಿ ಟ್ವೀಟ್​ಗಳ ಮೂಲಕ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಡಾನ್ ಫಾರೆಲ್ ಅವರು ತಮ್ಮ ಶಿಕ್ಷಕರೊಬ್ಬರು ಗೋವಾದಿಂದ ವಲಸೆ ಬಂದಿದ್ದು ಹೇಗೆ ಎನ್ನುವುದರ ಕುರಿತು ಪ್ರಧಾನಿ ಮೋದಿಯವರಿಗೆ ತಿಳಿಸಿದರು. ಈ ವಿಚಾರವನ್ನು ಟ್ವೀಟ್ ಮಾಡಿರುವ ಮೋದಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದೊಡ್ಡ ಸಾಂಸ್ಕೃತಿಕ ಸಂಬಂಧವನ್ನು ಇದು ಒತ್ತಿಹೇಳುತ್ತದೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಸೇರಿದಂತೆ ಹಲವು ಆಸ್ಟ್ರೇಲಿಯಾ ಸಚಿವರು ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಸಂದರ್ಭದಲ್ಲಿ ಆಲ್ಬನೀಸ್​ ಜೊತೆ ಆಗಮಿಸಿರುವ ವಾಣಿಜ್ಯ ಸಚಿವ ಡಾನ್ ಫಾರೆಲ್ (Don Farrel)​ ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಹೇಳಿದ ಭಾರತೀಯ ಮೂಲದ ತಮ್ಮ ಶಿಕ್ಷಕರ ಬಗೆಗಿನ ಆಸಕ್ತಿದಾಯಕ ಸ್ಟೋರಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಫಾರೆಲ್​ ಅವರ ಶಿಕ್ಷಕರೊಬ್ಬರು (Teacher) ಗೋವಾದಿಂದ ಆಸ್ಟ್ರೇಲಿಯಾಗೆ (Australia) ವಲಸೆ ಹೋಗಿದ್ದರ ಬಗ್ಗೆ ಮೋದಿಯವರೊಂದಿಗೆ ಹಂಚಿಕೊಂಡಿದ್ದಾರೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶ್ರೀಮಂತ ಸಾಂಸ್ಕೃತಿಕ (Cultural) ಸಂಪರ್ಕವನ್ನು ಒತ್ತಿಹೇಳುತ್ತದೆ ಎಂದು ಮೋದಿ ತಿಳಿಸಿದ್ದಾರೆ.


ಡಾನ್ ಫಾರೆಲ್ ಕಥೆ ಟ್ವೀಟ್ ಮಾಡಿದ ಮೋದಿ


ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಸಚಿವರು ಹೇಳಿದ ಆಸಕ್ತಿದಾಯಕ ವಿಷಯವನ್ನು ಸರಣಿ ಟ್ವೀಟ್​ಗಳ ಮೂಲಕ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಡಾನ್ ಫಾರೆಲ್ ಅವರು ತಮ್ಮ ಶಿಕ್ಷಕರೊಬ್ಬರು ಗೋವಾದಿಂದ ವಲಸೆ ಬಂದಿದ್ದು ಹೇಗೆ ಎನ್ನುವುದರ ಕುರಿತು ಪ್ರಧಾನಿ ಮೋದಿಯವರಿಗೆ ತಿಳಿಸಿದರು. ಈ ವಿಚಾರವನ್ನು ಟ್ವೀಟ್ ಮಾಡಿರುವ ಮೋದಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದೊಡ್ಡ ಸಾಂಸ್ಕೃತಿಕ ಸಂಬಂಧವನ್ನು ಇದು ಒತ್ತಿಹೇಳುತ್ತದೆ ಎಂದು ಹೇಳಿದ್ದಾರೆ.


ಭಾರತೀಯ ಮೂಲದ ಶಿಕ್ಷಕಿಯ ಬಗ್ಗೆ ಗುಣಗಾನ


"ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಅವರಿಗೆ ನೀಡಿದ್ದ ಗೌರವಾರ್ಥ ಭೋಜನ ಕೂಟದ ಸಮಯದಲ್ಲಿ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫಾರೆಲ್ ಅವರು ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡರು. ಅವರು ಗ್ರೇಡ್ 1 ರಲ್ಲಿ ಓದುವಾಗ ಎಬರ್ಟ್ ಎನ್ನುವ ಶಿಕ್ಷಕಿಯಿಂದ ಸಾಕಷ್ಟು ಕಲಿತಿದ್ದರು. ಇದು ಅವರ ಜೀವನದ ಮೇಲೆ ಉತ್ತಮ ಪ್ರಭಾವ ಬೀರಿದೆ. ಈಗಲೂ ತಮ್ಮ ಶೈಕ್ಷಣಿಕ ಜೀವನದ ಮೂಲವಾಗಿರುವ ಎಬರ್ಟ್‌ ಅವನ್ನು ನೆನಪು ಮಾಡಿಕೊಳ್ಳುತ್ತೇನೆ" ಎಂದು ನನ್ನೊಂದಿಗೆ ಹಂಚಿಕೊಂಡರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: IIT Dharwad: ರಾಜ್ಯದ ಮೊದಲ ಐಐಟಿ ಲೋಕಾರ್ಪಣೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂಗೂ ಮೋದಿ ಚಾಲನೆ


1950ರ ದಶಕದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ ಎಬರ್ಟ್​


ಎಬರ್ಟ್, ಅವರ ಪತಿ ಮತ್ತು ಮಗಳು ಲಿಯೋನಿ 1950 ರ ದಶಕದಲ್ಲಿ ಭಾರತದ ಗೋವಾದಿಂದ ಆಸ್ಟ್ರೇಲಿಯಾದ ಅಡಿಲೇಡ್‌ಗೆ ವಲಸೆ ಹೋಗಿದ್ದರು. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದ್ದರು. ಎಬರ್ಟ್‌ ಅವರ ಮಗಳು ಲಿಯೋನಿ ಕೂಡ ಸೌತ್ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೀಚರ್ಸ್‌ನ ಅಧ್ಯಕ್ಷೆಯೂ ಆಗಿದ್ದಾರೆ ಎಂದು ತಿಳಿಸಿದರು. ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಶ್ರೀಮಂತ ಸಾಂಸ್ಕೃತಿಕ ಬಾಂಧವ್ಯವನ್ನು ಒತ್ತಿಹೇಳುವ ಈ ಕಥೆಯನ್ನು ಕೇಳಲು ನನಗೆ ಸಂತೋಷವಾಗುತ್ತಿದೆ. ಯಾರಾದರೂ ತನ್ನ ಶಿಕ್ಷಕರ ಬಗ್ಗೆ ಪ್ರೀತಿಯಿಂದ ಉಲ್ಲೇಖಿಸುವುದನ್ನು ಕೇಳಲು ಅಷ್ಟೇ ಸಂತೋಷವಾಗುತ್ತದೆ " ಎಂದು ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಕ್ರಮಕ್ಕೆ ಜೊತೆಯಾಗಿ ಕೆಲಸ


ಭಾರತ-ಆಸ್ಟ್ರೇಲಿಯಾ ಮೊದಲ ವಾರ್ಷಿಕ ಶೃಂಗಸಭೆಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ವ್ಯಾಪಕ ಮಾತುಕತೆ ನಡೆಸಿದರು. ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕ ಘಟಕಗಳ ವಿರುದ್ಧ ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಲು ನಿಕಟವಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.


" ಭಯೋತ್ಪಾದಕರ ಸುರಕ್ಷಿತ ಸ್ಥಳಗಳು ಮತ್ತು ಮೂಲಸೌಕರ್ಯಗಳನ್ನು ಬೇರುಸಹಿತ ಕಿತ್ತೊಗೆಯಲು, ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು ಮಾರ್ಗಗಳಿಗೆ ಕಡಿವಾಣ ಹಾಕಬೇಕು ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಲನೆಯನ್ನು ನಿಲ್ಲಿಸಲು ಎಲ್ಲಾ ದೇಶಗಳಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು " ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Published by:Rajesha M B
First published: