Subramanian Swamy| ದೇಶದ ಆರ್ಥಿಕ ಚೇತರಿಗೆ 12 ಪತ್ರ ಬರೆದರೂ ಪ್ರಧಾನಿ ಮೋದಿ ಕ್ಯಾರೆ ಎಂದಿಲ್ಲ; ಸುಬ್ರಮಣಿಯನ್ ಸ್ವಾಮಿ ಕಿಡಿ

ಕುದುರೆಯನ್ನು ನೀರು ಇರುವಲ್ಲಿಗೆ ಕರೆದೊಯ್ಯಬಹುದು ಆದರೆ ನೀರು ಕುಡಿಯುವಂತೆ ಮಾಡುವುದು ಹೇಗೆ? ನಾನು ಆರ್ಥಿಕತೆ ಸರಿಪಡಿಸಲು ಸಲಹೆ ನೀಡಿ ಪ್ರಧಾನಿ ಮೋದಿಯವರಿಗೆ 12 ಪತ್ರ ಬರೆದಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಸುಬ್ರಮಣಿಯನ್ ಸ್ವಾಮಿ.

ಸುಬ್ರಮಣಿಯನ್ ಸ್ವಾಮಿ.

 • Share this:
  ಚೆನ್ನೈ(ಸೆಪ್ಟೆಂಬರ್​ 18); ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕೊರೋನಾ (CoronaVirus) ಕಾಲದ ಲಾಕ್​ಡೌನ್ (LockDown) ದೇಶದ ಆರ್ಥಿಕತೆ (Indian Economi) ಮೇಲೆ ಮತ್ತಷ್ಟು ಪೆಟ್ಟು ನೀಡಿದೆ. ಪರಿಣಾಮ ಅಗತ್ಯ ವಸ್ತುಗಳ ಮತ್ತು ತೈಲ (Petrol-Diesel Rate) ಬೆಲೆ ದಿನೇ ದಿನೇ ಏರುತ್ತಲೇ ಇದೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ದೇಶದ ಆರ್ಥಿಕ ಚೇತರಿಕೆ ಪ್ರಸ್ತುತ ತುರ್ತಾಗಿ ಆಗಬೇಕಾದ ಅಗತ್ಯ ವಿಚಾರವಾಗಿದೆ. ಆದರೆ, ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ಸಂಸದ ಮತ್ತು ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy), "ದೇಶದ ಆರ್ಥಿಕತೆಯನ್ನು ಸರಿಪಡಿಸಲು ಈವರೆಗೆ ಪ್ರಧಾನಿ ನೇಂದ್ರ (Narendra Modi) ಮೋದಿಗೆ 12 ಪತ್ರ ಬರೆದಿದ್ದೆ, ಆದರೆ, ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅಸಮಾಧಾನ ಹೊರಪಡಿಸಿದ್ದಾರೆ.

  ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸುಬ್ರಮಣಿಯನ್ ಸ್ವಾಮಿ, "ಹದಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಮೋದಿಗೆ ಸಲಹೆ ನೀಡಿ ಎಂದು ಪ್ರತಿನಿತ್ಯ ನನಗೆ ನೂರಾರು ಕರೆಗಳು ಬರುತ್ತಿವೆ. ಸಣ್ಣ ಪುಟ್ಟ ವ್ಯಾಪರಿಗಳು ಫೋನ್ ಮಾಡುತ್ತಿರುತ್ತಾರೆ. ಕುದುರೆಯನ್ನು ನೀರು ಇರುವಲ್ಲಿಗೆ ಕರೆದೊಯ್ಯಬಹುದು ಆದರೆ ನೀರು ಕುಡಿಯುವಂತೆ ಮಾಡುವುದು ಹೇಗೆ? ನಾನು ಆರ್ಥಿಕತೆ ಸರಿಪಡಿಸಲು ಸಲಹೆ ನೀಡಿ ಪ್ರಧಾನಿ ಮೋದಿಯವರಿಗೆ 12 ಪತ್ರ ಬರೆದಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.  ಇದಕ್ಕೆ ಟ್ವಿಟರ್ ಬಳಕೆದಾರರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ನಿಮ್ಮ ಮೊಬೈಲ್ ನಂಬರ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೂ ಉತ್ತರಿಸಿರುವ ಸುಬ್ರಮಣಿಯನ್ ಸ್ವಾಮಿಯವರು ನನ್ನ ನಂಬರ್ ಬಿಜೆಪಿ ವೆಬ್‌ಸೈಟ್ ಮತ್ತು ರಾಜ್ಯಸಭಾ ದಾಖಲೆಗಳಲ್ಲಿದೆ ಎಂದಿದ್ದಾರೆ.

  ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿರುವ ಸುಬ್ರಮಣಿಯನ್ ಸ್ವಾಮಿ ಸ್ವತಃ ಆರ್ಥಿಕ ತಜ್ಞರೂ ಹೌದು. ಹೀಗಾಗಿ ದೇಶದ ಆರ್ಥಿಕ ಕುಸಿತದ ವಿರುದ್ಧ ಅವರು ಆಗಿಂದಾಗ್ಗೆ ಸ್ವಪಕ್ಷೀಯ ಕೇಂದ್ರ ಸರ್ಕಾರದ ವಿರುದ್ಧವೇ ಕಿಡಿಕಾರುತ್ತಲೇ ಇದ್ದಾರೆ. ಸ್ವಪಕ್ಷೀಯರ ನಡೆಯ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದಾರೆ.

  ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ ಎಂದು ಜನರಿಗೆ ಎಚ್ಚರಿಕೆ ನೀಡುವ ತಮ್ಮದೇ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು, ಅಲ್ಲದೆ ದೊಡ್ಡ ಉದ್ಯಮಪತಿಗಳು ಬ್ಯಾಂಕುಗಳಿಗೆ 4.5 ಲಕ್ಷ ಕೋಟಿ ರೂ ಸಾಲ ತೀರಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು.

  ಇದನ್ನೂ ಓದಿ: Punjab Politics| ನವಜೋತ್ ಸಿಧು 'ಪಂಜಾಬ್‌ ರಾಜಕೀಯದ ರಾಖಿ ಸಾವಂತ್'; ಎಎಪಿ ನಾಯಕ ರಾಘವ್ ಚಡ್ಡಾ ಗೇಲಿ

  ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಟ್ವೀಟ್ ಮೂಲಕ ಕಿಡಿಕಾರಿದ್ದ ಸುಬ್ರಮಣಿಯನ್ ಸ್ವಾಮಿ, ನಾನು 6 ಬಾರಿ ಲೋಕಸಭೆ ಮತ್ತು ರಾಜ್ಯಸಭೆಗೆ ಸಂಸದನಾಗಿ ಆಯ್ಕೆಯಾಗಿದ್ದೇನೆ. ನಾನು ನನ್ನ ಸಾಮರ್ಥ್ಯದಿಂದ ಈ ಮಟ್ಟಕ್ಕೆ ಏರಿದ್ದೇನೆ ವಿನಃ ಯಾರ ಬೂಟೂ ನೆಕ್ಕಿ ಈ ಸ್ಥಿತಿಗೆ ಬಂದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: