ಗಾಂಧಿನಗರ, ಗುಜರಾತ್: ಪ್ರಧಾನಮಂತ್ರಿ (Prime Minister) ಹುದ್ದೆಯ ಜವಾಬ್ದಾರಿ ಹೊತ್ತು, ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ಅಪಾರ ಗೌರವಿಸುತ್ತಾರೆ‘, ಜೊತೆಗೆ ಬಹಳ ಪ್ರೀತಿಸುತ್ತಾರೆ. ತಾಯಿಯ ಆಶೀರ್ವಾದವನ್ನು ಪಡೆಯಲು ಮೋದಿಯವರು ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಇಂದು ಮೋದಿ ತಮ್ಮ ತಾಯಿ ಹೀರಾಬೆನ್ ಮೋದಿ ( Heeraban Modhi) ಅವರನ್ನು ಭೇಟಿ ಮಾಡಲು ಗುಜರಾತ್ನ ಗಾಂಧಿನಗರಕ್ಕೆ ಆಗಮಿಸಿದ್ದರು. ಗುಜರಾತ್ ಚುನಾವಣೆಗೂ ಮುನ್ನ ಅವರ ಮನೆಯಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ಪಾದ ಮುಟ್ಟಿ ಆಶೀರ್ವಾದ (Blessings) ಪಡೆದರು. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ನಾಳೆ ಅಂದರೆ ಡಿಸೆಂಬರ್ 5ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ವೋಟಿಂಗ್ನ ಒಂದು ದಿನದ ಮೊದಲು ಮೋದಿಯವರು ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ. ಜೊತೆಗೆ ಅವರ ಆಶೀರ್ವಾದವನ್ನೂ ಕೂಡ ಪಡೆದುಕೊಂಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ 100ನೇ ಹುಟ್ಟುಹಬ್ಬ ಆಚರಿಸಿ, ಪಾದವನ್ನು ತೊಳೆದಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿ ತಾಯಿಯ ಆಶೀರ್ವಾದವನ್ನು ಕೂಡ ಪಡೆದು, ಅಮ್ಮನ ಜನ್ಮದಿನದಂದು ಮಾತೃಶಕ್ತಿ ಯೋಜನೆ ಉದ್ಘಾಟನೆ ಮಾಡಿ, ಇದೇ ವೇಳೆ 21,000 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ಕೂಡ ಆರಂಭಿಸಿದ್ದರು. ವಿಶೇಷ ಅಂದ್ರೆ, ತಮ್ಮ ನೂರನೇ ವಯಸ್ಸಿನಲ್ಲೂ ಹೀರಾಬೆನ್ ಅವರು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಅವರು ಇನ್ನೂ ಯಾವುದೇ ಆಧಾರವಿಲ್ಲದೆ ಓಡಾಡುವುದಲ್ಲದೇ, ತಮ್ಮ ಎಲ್ಲಾ ಕೆಲಸಗಳನ್ನು ಸಹ ಸ್ವತಃ ತಾವೇ ಮಾಡಿಕೊಳ್ಳುತ್ತಾರೆ. ಅವರು ಪ್ರಸ್ತುತ ತನ್ನ ಕಿರಿಯ ಮಗ ಪಂಕಜ್ ಜೊತೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇನ್ನು ಉಸಿರಾಡುವುದೂ ಕಷ್ಟ, ಒಂದೇ ವರ್ಷದಲ್ಲಿ ಏರಿಕೆಯಾಯ್ತು ವಾಯುಮಾಲಿನ್ಯ!
ಇದೀಗ ಗುಜರಾತ್ನ ಜನರು 2022 ರ ಚುನಾವಣೆಯಲ್ಲಿ ಮತ ಚಲಾಯಿಸುವ ಒಂದು ದಿನದ ಮೊದಲು ಈ ಭೇಟಿ ಮಾಡಿದ್ದಾರೆ. ಹಾಗೆಯೇ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಇದರ ನಿಮಿತ್ತ ತಾಯಿಯೇ ಮೊದಲ ದೇವರು ಎಂಬ ಮಾತಿನಂತೆ ಮೋದಿಯವರು ತನ್ನ ಬ್ಯುಸಿ ಜೀವನದಲ್ಲಿಯೂ ಬಿಡುವು ಮಾಡಿಕೊಂಡು ಗುಜರಾತ್ನ ಗಾಂಧಿನಗರಕ್ಕೆ ಆಗಮಿಸಿದ್ದಾರೆ.
#WATCH | Prime Minister Narendra Modi arrives at the residence of his mother Heeraben Modi, in Gandhinagar, Gujarat pic.twitter.com/eomBD0wTtc
— ANI (@ANI) December 4, 2022
ತಾಯಿ ಮಗ ಒಟ್ಟಿಗೆ ಕುಳಿತು ಸಂತೋಷದಿಂದ ಮಾತನಾಡುತ್ತಾ ಟೀ ಕುಡಿಯುವ ವಿಡಿಯೋ ಇದೀಗ ಎಲ್ಲ ಕಡೆಯೂ ಸಖತ್ ಸುದ್ಧಿ ಆಗಿದೆ. ಅವರ ತಾಯಿಯ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅವರು ಅಹಮದಾಬಾದ್ನಲ್ಲಿ ಪ್ರಮುಖ್ಸ್ವಾಮಿ ಮಹಾರಾಜರ ಜನ್ಮದಿನದ ಶತಮಾನೋತ್ಸವ ಉತ್ಸವವನ್ನು ಉದ್ಘಾಟಿಸಿದರು. ಗಮನಾರ್ಹವಾಗಿ, ಇದು 30 ದಿನಗಳ ಉತ್ಸವವಾಗಿದೆ.
#WATCH | Gujarat: Prime Minister Narendra Modi meets his mother Heeraben Modi at her residence, in Gandhinagar. pic.twitter.com/C4uh1CMOFb
— ANI (@ANI) December 4, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ