ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೆಸರು?

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಘನತೆಯನ್ನು ಹೆಚ್ಚಿಸಲು ವಿರೋಧ ಪಕ್ಷ ಕೂಡ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

zahir | news18
Updated:March 3, 2019, 8:33 AM IST
ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೆಸರು?
ಪಾಕ್ ಪ್ರಧಾನಿ ಇಮ್ರಾನ್ ಖಾನ್
  • News18
  • Last Updated: March 3, 2019, 8:33 AM IST
  • Share this:
ಇಸ್ಲಾಮಾಬಾದ್: ಭಾರತದ ಜೊತೆಗಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಶಾಂತಿ ಮೂಲಕ ತಿಳಿಗೊಳಿಸಿದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ನೊಬೆಲ್​ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂದು ಪಾಕ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ. ಮಾಹಿತಿ ಖಾತೆ ಸಚಿವ ಫವಾದ್‌ ಚೌಧರಿ  ಸಂಸತ್ತಿನ ಕೆಳಮನೆಯ ಸೆಕ್ರೆಟರಿಯಟ್​ನಲ್ಲಿ ಈ ಮಂಡನೆ ಮಾಡಲಾಗಿದೆ.

ಭಾರತದ ಏರ್​ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಶಾಂತಿಯ ದ್ಯೋತಕವಾಗಿ ಬಿಡುಗಡೆಗೊಳಿಸಿ ಪಾಕ್ ಪ್ರಧಾನಿ ಹೊಸ ಸಂದೇಶ ಸಾರಿದ್ದರು. ಭಾರತವು ಯುದ್ದೋನ್ಮಾದದಲ್ಲಿರೂ ಇಂತಹ ಪರಿಸ್ಥಿತಿಯನ್ನು ಇಮ್ರಾನ್ ಖಾನ್ ಶಾಂತಿಯ ಮೂಲಕ ಬಗೆಹರಿಸಿದ್ದಾರೆ. ಒತ್ತಡದ ಸಮಯದಲ್ಲೂ ಜವಾಬ್ದಾರಿಯುತವಾಗಿ ವರ್ತಿಸಿದ ಪಾಕ್​ ಪ್ರಧಾನಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು ಎಂದು ಎಂದು ಫವಾದ್​ ಚೌಧರಿ ತಮ್ಮ ನಿರ್ಣಯದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಅಪ್ಪ ಭಾರತದ ಕೃಷಿ ಸಚಿವ, ಮಗ ಪಾಕ್ ಸೇನಾಧಿಕಾರಿ: ಇದು ತೆರೆಮರೆಯ ಕಥೆ..!

ಸೋಮವಾರದಿಂದ ಪಾಕ್ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಇಲ್ಲಿ ಈ ವಿಷಯ ಚರ್ಚೆಗೆ ಒಳಪಡುವ ನಿರೀಕ್ಷೆಯಿದೆ. ಈಗಾಗಲೇ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಈ ಇನ್ಸಾಫ್ ಪಕ್ಷ ಬಹುಮತ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣ ಬೆಂಬಲ ದೊರಕಲಿದೆ ಎನ್ನಲಾಗಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಘನತೆಯನ್ನು ಹೆಚ್ಚಿಸಲು ವಿರೋಧ ಪಕ್ಷ ಕೂಡ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಟಾಟಾ ಮೋಟರ್ಸ್​ನಿಂದ ಭಾರತೀಯ ಸೇನೆಗೆ ಉಡುಗೊರೆ: ಬಾಂಬ್ ಬಿದ್ದರೂ ಜಗ್ಗದು ಈ ವಾಹನ

First published: March 3, 2019, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading