Rudraksh: ಕಣ್ಮನ ಸೆಳೆಯುತ್ತಿದೆ ಶಿವಲಿಂಗ ಆಕೃತಿಯ ರುದ್ರಾಕ್ಷ್​ ಕೇಂದ್ರ; ಏನಿದರ ವಿಶೇಷತೆ?

"ರುದ್ರಾಕ್ಷ್" ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವು ಪ್ರಾಚೀನ ನಗರದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದೆ

ರುದ್ರಾಕ್ಷ್​ ಕೇಂದ್ರ

ರುದ್ರಾಕ್ಷ್​ ಕೇಂದ್ರ

 • Share this:
  ಪ್ರಧಾನಿ ನರೇಂದ್ರ ಮೋದಿ ಇಂದು ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಭಾರತ-ಜಪಾನ್​ ಸ್ನೇಹದ ಸಂಕೇತವಾಗಿ ನಿರ್ಮಿಸಲಾಗಿರುವ 186 ಕೋಟಿ ರೂಗಳ ರುದ್ರಾಕ್ಷ ಇಂಟರ್​ನ್ಯಾಷನಲ್​ ಕನ್ವೆಷನ್​ ಸೆಂಟರ್​ ಕ್ಯಾಂಪಸ್​ನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿದ್ದಾರೆ. ಶಿವಲಿಂಗದ ಆಕೃತಿಯಾಕಾರದಲ್ಲಿರುವ ಈ ಕಟ್ಟಡ ಎಲ್ಲರ ಗಮನ ಸೆಳೆದಿದೆ. ಇದರ ಜೊತೆಗೆ ಪ್ರಧಾನಿ ಕೂಡ ಈ ಕಟ್ಟಡದ ರ ಏರಿಯಲ್​ ವೀವ್​ ಫೋಟೊವನ್ನು ತಮ್ಮ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ರುದ್ರಾಕ್ಷ್" ಎಂದು ಹೆಸರಿಸಲಾದ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವು ಪ್ರಾಚೀನ ನಗರದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದು ಅವರು ತಿಳಿಸಿದ್ದಾರೆ

  ಮತ್ತೊಂದು ವಿಶೇಷ ಎಂದರೆ, ಶಿವಲಿಂಗದ ಆಕೃತಿಯಂತೆ ಇರುವ ಈ ಕೇಂದ್ರದಲ್ಲಿ 108 ರುದ್ರಾಕ್ಷವನ್ನು ಅಳವಡಿಸಲಾಗಿದ್ದು, ಈ ಕಟ್ಟಡವನ್ನು ಸಂಪೂರ್ಣವಾಗಿ ಎಲ್​ಇಡಿ ಲೈಟ್​ಗಳಿಂದ ನಿರ್ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಕಳೆದ 7 ವರ್ಷಗಳಲ್ಲಿ ಕಾಶಿಯನ್ನು ಹಲವು ಅಭಿವೃದ್ಧಿ ಯೋಜನೆಗಳು ಆರಂಭವಾಗಿದೆ, ರುದ್ರಾಕ್ಷ ಇಲ್ಲದೇ ಹೇಗೆ ಕಾಶಿ ಸೌಂದರ್ಯ ಪೂರ್ಣಗೊಳ್ಳಿಲಿದೆ. ಕಾಶಿ ಈಗ ರುದ್ರಾಕ್ಷವನ್ನು ಧರಿಸಿದೆ, ಕಾಶಿಯವ ಅಭಿವೃದ್ಧಿ ಹೊಳೆಯುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
  ಜಪಾನಿನ ಪ್ರಧಾನಿ ಶಿಂಜೊ ಅಬೆ ಕಾಶಿಗೆ ಬಂದಾಗ ಈ ರುದ್ರಕ್ಷಾ ಯೋಜನೆ ಕುರಿತು ಚರ್ಚಿಸಿದ್ದೇವು. ಅವರು ತಕ್ಷಣ ಈ ಯೋಜನೆಯ ಕಾರ್ಯಗತಕ್ಕೆ ಮುಂದಾದರು. ಅವರ ಸಹಕಾರದಿಂದಾಗಿ ಈ ಯೋಜನೆ ಸಾಕರ ಗೊಂಡಿದೆ ಎಂದು ಇದೇ ವೇಳೆ ಜಪಾನ್​ ಪ್ರಧಾನಿಗೆ ಧನ್ಯವಾದ ತಿಳಿಸಿದರು.

  ಹೇಗಿದೆ ರುದ್ರಾಕ್ಷ
  ಕಾಶಿಯ ಸಿಂಗ್ರಾ ಪ್ರದೇಶದಲ್ಲಿ 2. 87 ಎಕರೆಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಎರಡು ಅಂತಸ್ತಿನ ಈ ಐಷಾರಾಮಿ ಕೇಂದ್ರದಲ್ಲಿ 1,200 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

  ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದ ಮೂಲಕ ಜನರ ನಡುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನಗಳಿಗೆ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ನಗರದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  ಅಂತರರಾಷ್ಟ್ರೀಯ ಸಮ್ಮೇಳನಗಳು, ಪ್ರದರ್ಶನಗಳು ಮತ್ತು ಸಂಗೀತ ಕಚೇರಿಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸಲು ಈ ಕೇಂದ್ರ ಸೂಕ್ತವಾಗಿದೆ. ಈ ಕೇಂದ್ರದ ಗ್ಯಾಲರಿಯಲ್ಲಿ ವಾರಣಾಸಿಯ ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ಚಿತ್ರಿಸುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗಿದೆ

  ಇದನ್ನು ಓದಿ: ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಪಾಸಾದ ಮೂವರು ಸಹೋದರಿಯರು

  ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿರುವ ಈ ಕೇಂದ್ರವು ಸಾಕಷ್ಟು ಭದ್ರತೆ ಮತ್ತು ಸುರಕ್ಷತೆಯನ್ನು ಹೊಂದಿದೆ. ಈ ಕೇಂದ್ರಕ್ಕೆ ಸಾಮಾನ್ಯ ಪ್ರವೇಶ ದ್ವಾರದ ಜೊತೆಗೆ ಸೇವಾ ಪ್ರವೇಶ ದ್ವಾರ ಹಾಗೂ ವಿಐಪಿ ಪ್ರವೇಶದ್ವಾರವನ್ನು ಹೊಂದಿದೆ. ಅಂತರರಾಷ್ಟ್ರೀಯ ಕಾರ್ಯಕ್ರಮ ನಡೆಸಲು ಇದು ಸೂಕ್ತ ಸ್ಥಳವಾಗಿದೆ

  ಇನ್ನು ಈ ಕೇಂದ್ರದಲ್ಲಿ ಜಪಾನ್​ ಮಾದರಿಯ ಉದ್ಯಾನವನ ಹೊಂದಿದ್ದು, ಕಟ್ಟಡದ ಬೇಸ್​ಮೆಂಟ್​ನಲ್ಲಿ 120 ವಾಹನಗಳ ಪಾಕಿಂಗ್​ ವ್ಯವಸ್ಥೆಯನ್ನು ಕೂಡ ಹೊಂದಿದೆ, ಸಂಪೂರ್ಣ ಕ್ಯಾಂಪಸ್​ ಸಿಸಿಟಿವಿ ಹದ್ದುಗಣ್ಣಿನಲ್ಲಿದೆ. ಇದರ ಜೊತೆಗೆ ಸೌರ ವಿದ್ಯುತ್​ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ,

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: