ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಲ್-ಖೈದಾ ಭಯೋತ್ಪಾದನಾ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ ಘಟಕವನ್ನು ಭೇದಿಸಿದ ನಂತರ ಪ್ರಮುಖ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದೆ. ಭಾನುವಾರ ಲಕ್ನೋದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಒಂದೂವರೆ ವರ್ಷದ ಹಿಂದೆ ಮೂಲ ಹ್ಯಾಂಡ್ಲರ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದಂತಹ ಈ ಆರೋಪಿಗಳಿಗೆ, ಹ್ಯಾಂಡ್ಲರ್ ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದ ಅಲ್ಲದೇ ಸಾಮಾನ್ಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಬಾಂಬುಗಳನ್ನು ತಯಾರಿಸುವಂತೆ ಸೂಚನೆ ನೀಡಿದ್ದ ಎನ್ನಲಾಗಿದೆ.
ಎಟಿಎಸ್ ಬಂದಿಸಿರುವ ಇಬ್ಬರು ಉಗ್ರರು ನಗರದ ಕಾಕೋರಿ ಪ್ರದೇಶಕ್ಕೆ ಸೇರಿದವರು. ಭಾನುವಾರ ವಶಕ್ಕೆ ಪಡೆದಿದ್ದ ಎಟಿಎಸ್ ಸಾಕಷ್ಟು ವಿಚಾರಣೆಗೆ ಇವರನ್ನು ಒಳಪಡಿಸಿತ್ತು.
ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದ ಇಬ್ಬರು ಉಗ್ರರ ಬಂಧನದ ಅವಧಿ 14 ದಿನಗಳಾಗಿದ್ದು, ಮಂಗಳವಾರದಿಂದ ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮುಖ್ಯ ಆರೋಪಿ ವಿದ್ಯಾವಂತನಾಗಿದ್ದು, ಡಿಪ್ಲೊಮೋ ಪದವಿ ಪಡೆದುಕೊಂಡಿದ್ದಾನೆ. ಮೊದಲು ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ, ನಂತರ ತನ್ನದೇ ಆದ ಸ್ವಂತ ಬ್ಯಾಟರಿ ಅಂಗಡಿಯನ್ನು ನಡೆಸುತ್ತಿದ್ದ ಎಂದು ತಿಳಿಸಲಾಗಿದೆ.
ಅತ್ಯಂತ ಮುಂದುವರೆದ ಹಾಗೂ ಸುಧಾರಿತ ಬಾಂಬ್ ಇವರನ್ನು ಬಂಧಿಸುವಾಗ ದೊರೆತಿದ್ದು, ಇದನ್ನು ಪೋಟ್ಯಾಶಿಯಂ ನೈಟ್ರೇಟ್ ಮತ್ತು ಪಾಸ್ಪರಸ್ ಬಳಸಿ ತಯಾರಿಸಲಾಗಿದೆ ಎಂದು ಎಟಿಎಸ್ ತಿಳಿಸಿದೆ. ಇದನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಲು ಯೋಜಿಸಿದ್ದರು ಎಂದು ತನಿಖೆ ವೇಳೆ ತಿಳಿದಿದೆ.
ಪ್ರಮುಖ ಆರೋಪಿಯು ತನ್ನ ಹ್ಯಾಂಡ್ಲರ್ ಜೊತೆಗೆ ನಡೆಸಿದ ಸಂಭಾಷಣೆಯನ್ನು ತನಿಖೆ ವೇಳೆ ತಿಳಿಸಿದ್ದು, ಬಾಂಬ್ ತಯಾರಿಸಲು ಪಾಸ್ಪರಸ್ ದೊರೆಯುವುದು ಕಷ್ಟ ಎಂದಾಗ ಬೆಂಕಿ ಕಡ್ಡಿ ಬಳಸಿಕೊಂಡು ಅದರಲ್ಲಿರುವ ಪಾಸ್ಪರಸ್ ಬಳಸಿಕೋ ಎಂದು ಹೇಳಿದ್ದ ಎನ್ನಲಾಗಿದೆ.
ಅಲ್ಲದೇ ಈ ಜಾಲದಲ್ಲಿ ಇರುವ ಅನೇಕ ಜನರ ಹೆಸರನ್ನು ಇವನು ಬಾಯಿಬಿಟ್ಟಿದ್ದು ಅವರ ಶೋಧಕಾರ್ಯ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಎಟಿಎಸ್ ಮತ್ತೊಂದು ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಅಲ್ಖೈದಾ ತನ್ನ ಭಯೋತ್ಪಾದನಾ ನೆಲೆಯನ್ನು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಗಡಿಯಲ್ಲಿ ನಿರ್ಮಿಸಿಕೊಂಡಿದ್ದು, ಅಲ್ಲಿಂದ ತನ್ನ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೇ ಭಾರತದ ಯುವಕರನ್ನು ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ಹೇಳಿದೆ.
ಅಲ್ ಖೈದಾದ ಒಂದು ಅಂಗವಾದ ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಎಚ್) ಅಡಿಯಲ್ಲಿ ಈ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಇದನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ಮಿನ್ಹಾಜ್ ಅಹ್ಮದ್ ಮತ್ತು ಮಾಸಿರುದ್ದೀನ್ ಅಕ್ ಮುಶೀರ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಯನ್ನು ಶಕೀಲ್ ಎಂದು ಗುರುತಿಸಲಾಗಿದೆ. ಆಗಸ್ಟ್ 15 ರ ಮೊದಲು ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಮೂವರು ಆಮ್ಖೈದಾದ ಭಯೋತ್ಪಾದನಾ ನೆಲೆಯಾದ ಹಲ್ಮಾಂಡಿಯಿಂದ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಸ್ ಕಮಾಂಡೋಗಳು ಮಿನ್ಹಾಜ್ ಮತ್ತು ಮಸಿರುದ್ದೀನ್ ಇರುವ ಮನೆಯನ್ನು ಸುತ್ತುವರಿದು ಬಂಧಿಸಲಾಯಿತು. ಬಾಂಬ್ ನಿಗ್ರಹ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ಐಜಿ ಜಿಕೆ ಗೋಸ್ವಾಮಿ ನೇತೃತ್ವದ ಈ ಕಾರ್ಯಾಚರಣೆಯಲ್ಲಿ ಈವರೆಗೆ ಎರಡು ಪ್ರೆಶರ್ ಕುಕ್ಕರ್ ಬಾಂಬ್ಗಳು, ಟೈಮ್ ಬಾಂಬ್ಗಳು ಮತ್ತು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅನೇಕ ದಿನಗಳಿಂದ ಈ ಮನೆ ಮೇಲೆ ಕಣ್ಣಿಟ್ಟಿದ್ದ ಎಟಿಎಸ್ ಕೊನೆಗೂ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:
SBI ಗ್ರಾಹಕರೇ ಎಚ್ಚರ..! ಬ್ಯಾಂಕ್ನಿಂದ ಬಂದ ಹೊಸ ವಾರ್ನಿಂಗ್ ಬಗ್ಗೆ ನೀವು ತಿಳಿಯಲೇಬೇಕು
ಮಾಹಿತಿ ಖಚಿತವಾದ ನಂತರ ಎಟಿಎಸ್ ಭಾನುವಾರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸ್ಥಳದಲ್ಲೇ ಸ್ಥಳೀಯ ಪೊಲೀಸರು ಕೂಡ ಹಾಜರಿದ್ದರು. ಎಟಿಎಸ್ ಕಾಕೋರಿ ಪ್ರದೇಶವನ್ನು ಮೊಹರು ಮಾಡಿ ಹತ್ತಿರದ ಮನೆಗಳನ್ನು ಸ್ಥಳಾಂತರಗೊಳಿಸಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ