• Home
  • »
  • News
  • »
  • national-international
  • »
  • Satyanarayan Puja: ಸತ್ಯನಾರಾಯಣ ಪೂಜೆ ಮಾಡಿಸಿದ್ರೂ ಹೆಣ್ಣು ಸಿಕ್ಕಿಲ್ಲ! ಅರ್ಚಕರಿಗೆ ಹಿಗ್ಗಾಮುಗ್ಗಾ ಥಳಿತ!

Satyanarayan Puja: ಸತ್ಯನಾರಾಯಣ ಪೂಜೆ ಮಾಡಿಸಿದ್ರೂ ಹೆಣ್ಣು ಸಿಕ್ಕಿಲ್ಲ! ಅರ್ಚಕರಿಗೆ ಹಿಗ್ಗಾಮುಗ್ಗಾ ಥಳಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಪಿ ಅರುಣ್​ಗೆ ಮದುವೆಯಾಗಲು ತಕ್ಕ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅರ್ಚಕರನ್ನು ಸತ್ಯನಾರಾಯಣ ಪೂಜೆ ಮಾಡಲು ಆಹ್ವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • Share this:

ಸತ್ಯನಾರಾಯಣ ಪೂಜೆ (Satyanarayana Puja)  ಮಾಡಿಸಿದ್ದು ಸರಿಯಾಗಿಲ್ಲ ಎಂದು ಅರ್ಚಕರಿಗೆ ಪೆಟ್ಟು ನೀಡಿದ ಘಟನೆಯೊಂದು ನಡೆದಿದೆ. ಪುರೋಹಿತರು ನಡೆಸಿದ ಧಾರ್ಮಿಕ ಕ್ರಿಯೆಗಳು (Religious Rituals) ತಮಗೆ ಬೇಕಾದಂತೆ  ಫಲ ನೀಡಿವೆ ಎಂಬ ಶಂಕೆ ವ್ಯಕ್ತಪಡಿಸಿ ಅರ್ಚಕರಿಗೆ ಥಳಿಸಿದ ಘಟನೆ ಮಧ್ಯಪ್ರದೇಶದ (Madhya Pradesh)  ಇಂದೋರ್‌ನಲ್ಲಿ ವರದಿಯಾಗಿದೆ. ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಕಾರ್ಯಕ್ರಮ ಏರ್ಪಡಿಸಿದ್ದ ವ್ಯಕ್ತಿ ಮತ್ತು ಅವರ ಇಬ್ಬರು  ಮಕ್ಕಳು ಗುರುವಾರ ರಾತ್ರಿ ಥಳಿಸಿದ್ದಾರೆ ಎಂದು ಚಂದನನಗರ ಪೊಲೀಸ್ ಠಾಣೆ ಪ್ರಭಾರಿ ಅಭಯ್ ನೇಮಾ ಪಿಟಿಐಗೆ ತಿಳಿಸಿದ್ದಾರೆ. ಆರೋಪಿ ಅರುಣ್​ಗೆ ಮದುವೆಯಾಗಲು ತಕ್ಕ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅರ್ಚಕರನ್ನು ಸತ್ಯನಾರಾಯಣ ಪೂಜೆ ಮಾಡಲು ಆಹ್ವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


60 ವರ್ಷದ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಲಕ್ಷ್ಮೀಕಾಂತ್ ಶರ್ಮಾ ತಮ್ ಮನೆಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಆಹ್ವಾನಿಸಿದ್ದರು. ಧಾರ್ಮಿಕ ಕಾರ್ಯಕ್ರಮ ಮುಗಿಸಿದ ಅರ್ಚಕ ಕುಂಜ್‌ಬಿಹಾರಿ ಶರ್ಮಾ ನಂತರ ಅವರ ಮನೆಗೆ ತೆರಳಿದ್ದರು.


ಅರ್ಚಕರ ಕಿವಿಗೆ ಕಚ್ಚಿದ ಆರೋಪಿ
ಆದರೆ ಅದೇ ದಿನ ತಡರಾತ್ರಿ ಅರ್ಚಕ ಲಕ್ಷ್ಮೀಕಾಂತ್ ಶರ್ಮಾ ಮತ್ತು ಅವರ ಮಗ ವಿಪುಲ್ ಮತ್ತು ಅರುಣ್ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರಿಗೆ ಹೊಡೆದ್ದಾರೆ. ವಿಪುಲ್ ಅರ್ಚಕರ ಕಿವಿಯೋಲೆಯನ್ನು ಕಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 


ಇದನ್ನೂ ಓದಿ: Gaucher Disease: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಒಂದು ಕೋಟಿ ಮೊತ್ತ ನೀಡಿದ ಸಿಎಂ ಜಗನ್!


ಅರ್ಚಕರು ಸತ್ಯನಾರಾಯಣ ಪೂಜೆ ಮಾಡಿಸಿದ ನಂತರವೂ ತನ್ನ ಮಗನಿಗೆ ಮದುವೆಯಾಗಲು ಹೆಣ್ಣು ಸಿಕ್ಕಿಲ್ಲ  ಎಂಬ ಕೋಪಕ್ಕೆ ಅರ್ಚಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.


ಬಹಳಷ್ಟು ಜನರು ತಾವು ಎಷ್ಟು ಸಂಪಾದನೆ ಮಾಡ್ತೀದೀವಿ ಅಂತ ಹೇಳೋಕೆ ಇಷ್ಟಪಡಲ್ಲ. ಸಾಕಷ್ಟು ಜನರಿಗೆ ನಿಮ್ಮ ಸ್ಯಾಲರಿ (Salary) ಎಷ್ಟು ಅಂತ ಕೇಳೋದೂ ಇಷ್ಟ ಆಗಲ್ಲ. ಅಲ್ದೇ ಹಾಗೆ ಕೇಳೋದು ಸೌಜನ್ಯ ಕೂಡ ಅಲ್ಲ. ಆದ್ರೆ ಗಂಡ-ಹೆಂಡಿರಲ್ಲಿ (Wife Husband) ಅದೆಂತಹ ಗುಟ್ಟು? ಇದು ಸಾಮಾನ್ಯವಾಗಿ ಎಲ್ಲರ ತಲೆಗೆ ಬರುವ ವಿಚಾರ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಇಲ್ಲೂ ಕೂಡ ಗುಟ್ಟು ಮಾಡ್ತಾರೆ. ಹೌದು. ಎಲ್ಲ ಸರಿ ಇದ್ದಾಗ ಸಂಸಾರ ಸರಾಗವಾಗಿ ನಡೆಯುತ್ತೆ. ಆದ್ರೆ ದಾಂಪತ್ಯದಲ್ಲಿ ಬಿರುಕು ಮೂಡಿದಾಗಲೇ ಸಮಸ್ಯೆಗಳು, ಗುಟ್ಟುಗಳು ಶುರುವಾಗೋದು. ಹೌದು, ನೀವು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದಾಗ, ಭಾವನಾತ್ಮಕ ಸವಾಲುಗಳ (Emotional Problems) ಜೊತೆಗೆ ನಿಮ್ಮ ಹಣಕಾಸು ಸಹ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: Fake Notes: ರಿಸರ್ವ್ ಅಲ್ಲ, ರಿವರ್ಸ್ ಬ್ಯಾಂಕ್ ಎಂದು ಬರೆದಿದ್ದ 26 ಕೋಟಿ ನಕಲಿ ಕರೆನ್ಸಿ ವಶಕ್ಕೆ!


ಇಲ್ಲಿ ಆಸ್ತಿಯನ್ನು ಹಂಚಲಾಗುತ್ತೆ. ಪತ್ನಿಗೆ ಜೀವನಾಂಶ ನೀಡಬೇಕಾಗುತ್ತೆ. ಇನ್ನು ವಿಚ್ಛೇದನ ಪರಸ್ಪರ ಒಪ್ಪಿಗೆಯಿಂದ ನಡೆದಾಗ ಪತ್ನಿ ಪತಿಯ ಆದಾಯವನ್ನು ಕೇಳಬಹುದು. ಅಲ್ಲದೇ ಅದಕ್ಕೆ ಸಂಬಂಧಿಸಿ ಜೀವನಾಂಶವನ್ನೂ ಕೇಳಬಹುದು.


ಕಾನೂನಿನ ಮೂಲಕವೇ ಗಂಡನ ಆದಾಯದ ಗುಟ್ಟು ರಟ್ಟು!
ಆದರೆ ಸಮಸ್ಯೆ ಶುರುವಾಗೋದೇ ಪತಿಯಾದವನು ಆದಾಯದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ. ಆದ್ರೆ ಪಡೆಯಲೇಬೇಕು ಅಂದ್ರೆ ಮಹಿಳೆಯೊಬ್ಬಳಿಗೆ ವಿವರಗಳನ್ನು ಪಡೆಯೋಕೆ ಬೇಕಾದಷ್ಟು ದಾರಿಗಳಿವೆ. ಪತ್ನಿಯಾದವಳು ಬೇರೆ ವಿಧಾನಗಳ ಮೂಲಕ ವಿವರಗಳನ್ನು ಪಡೆಯಬಹುದು. ಅದೂ ಕಾನೂನಿನ ಮೂಲಕವೇ.


ವಿಚಿತ್ರ ಪ್ರಕರಣ ಬೆಳಕಿಗೆ ಬಂತು ನೋಡಿ
ಇದಕ್ಕೆ ಬೆಸ್ಟ್‌ ಉದಾಹರಣೆ ಎಂಬಂತೆ ಆರ್​ಟಿಐ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ. ಇದರಡಿ ಮಹಿಳೆಯೊಬ್ಬರು ತನ್ನ ಪತಿಯ ಆದಾಯದ ವಿವರಗಳನ್ನು ಕೋರಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

Published by:ಗುರುಗಣೇಶ ಡಬ್ಗುಳಿ
First published: