HOME » NEWS » National-international » PRICE OF LPG COOKING GAS HIKED BY RS 50 SNVS

LPG Price Hike - ಇವತ್ತಿನಿಂದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಏರಿಕೆ; ಇಲ್ಲಿದೆ ಹೊಸ ದರ

ಇದೇ ತಿಂಗಳ ಆರಂಭದಲ್ಲಿ 25 ರೂ ಏರಿಕೆಯಾಗಿದ್ದ 14.2 ಕಿಲೋ ತೂಕದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಇದೀಗ ಮತ್ತೆ 50 ರೂ ಬೆಲೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆ ಇದೀಗ 772 ರೂ ಮುಟ್ಟಿದೆ.

news18
Updated:February 15, 2021, 8:16 AM IST
LPG Price Hike - ಇವತ್ತಿನಿಂದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಏರಿಕೆ; ಇಲ್ಲಿದೆ ಹೊಸ ದರ
LPG Cylinder
  • News18
  • Last Updated: February 15, 2021, 8:16 AM IST
  • Share this:
ಬೆಂಗಳೂರು(ಫೆ. 15): ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವಂತೆಯೇ ಜನಸಾಮಾನ್ಯನಿಗೆ ಇದೀಗ ಅಡುಗೆ ಅನಿಲವೂ ದುಬಾರಿಯಾಗುತ್ತಿದೆ. ಎಲ್​ಪಿಜಿ ಗ್ಯಾಸ್ ಸಿಲಿಂಡರ್​ನ ಬೆಲೆ 50 ರೂ ಏರಿಕೆ ಮಾಡಲಾಗಿದೆ. ನಿನ್ನೆ ಭಾನುವಾರ ದರ ಪರಿಷ್ಕರಣೆ ಆಗಿದ್ದು, ಇವತ್ತು ಸೋಮವಾರದಿಂದ ಹೊಸ ದರ ಅನ್ವಯವಾಗಲಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಕಂಡಿದೆ. ಫೆ. 4ರಂದು 25 ರೂ ಬೆಲೆ ಏರಿಕೆ ಆಗಿತ್ತು. ಇದೀಗ ಈ ತಿಂಗಳು ಒಟ್ಟಾರೆಯಾಗಿ 75 ರೂಪಾಯಿ ಬೆಲೆ ಏರಿಕೆಯಾಗಿದೆ. ಸಬ್ಸಿಡಿರಹಿತ 14.2 ಕಿಲೋ ತೂಕದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ಇದೀಗ 722ರಿಂದ 772 ರೂಪಾಯಿಗೆ ಏರಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಯಲ್ಲಿನ ವ್ಯತ್ಯಾಸದಿಂದಾಗಿ ಬೆಲೆಯಲ್ಲೂ ಅಲ್ಪಸ್ವಲ್ಪ ವ್ಯತ್ಯಯವಾಗುತ್ತದೆ. ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 769 ರೂ ಇದೆ.

ಡಿಸೆಂಬರ್ ತಿಂಗಳಲ್ಲೂ ಎರಡು ಬಾರಿ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು. ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಬೆಲೆ 597 ರೂ ಇತ್ತು. ಇದೀಗ 175 ರೂ ಬೆಲೆ ಏರಿಕೆ ಕಂಡಿದೆ.

ಇದನ್ನೂ ಓದಿ: Farmers Protest: ಗ್ರೇಟಾ ಥನ್ಬರ್ಗ್​ಗೆ ಬೆಂಬಲ; ಬೆಂಗಳೂರಿನ ಮೌಂಟ್​ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ ಬಂಧನ!

ಸರ್ಕಾರ ಪ್ರತೀ ತಿಂಗಳೂ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆ ಪರಿಷ್ಕರಣೆ ಮಾಡುತ್ತದೆ. ಒಬ್ಬ ಎಲ್​ಪಿಜಿ ಗ್ರಾಹಕ ಪ್ರತೀ ವರ್ಷ 12 ಗ್ಯಾಸ್ ಸಿಲಿಂಡರ್​ಗಳಿಗೆ ಸಬ್ಸಿಡಿ ಪಡೆಯುವ ಅವಕಾಶ ಇದೆ. 12ಕ್ಕಿಂತ ಹೆಚ್ಚು ಸಿಲಿಂಡರ್​ಗೆ ಸಬ್ಸಿಡಿ ಸಿಗುವುದಿಲ್ಲ.
Published by: Vijayasarthy SN
First published: February 15, 2021, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories