Presidential Election Result: ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

ದ್ರೌಪದಿ ಮುರ್ಮು

ದ್ರೌಪದಿ ಮುರ್ಮು

Presidential Election Result: ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಜನರ ಕಾಯುವಿಕೆಗೆ ಫುಲ್​ಸ್ಟಾಪ್ ಬಿದ್ದಿದೆ. ಗೆದ್ದಿರುವುದು ಯಾರು? ಎಷ್ಟು ಮತಗಳ ಅಂತರ, ಇಲ್ಲಿದೆ ರಾಷ್ಟ್ರಪತಿ ಚುನಾವಣಾ ಫಲಿತಾಂಶದ ಫುಲ್ ಡೀಟೆಲ್ಸ್

  • Share this:

ಅಧ್ಯಕ್ಷೀಯ ಚುನಾವಣೆಯ (Presidential Election) ಮತ ಎಣಿಕೆ ಪೂರ್ಣಗೊಂಡಿದ್ದು ಭಾರತ ಇಂದು ತನ್ನ 15 ನೇ ರಾಷ್ಟ್ರಪತಿಯನ್ನು ಪಡೆದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ (NDA) ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರೂ ನಿರೀಕ್ಷಿಸಿದಂತೆಯೇ ಬಿಜೆಪಿ ಬೆಂಬಲಿತ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ (BJP) ನಾಮನಿರ್ದೇಶಿತ ದ್ರೌಪತಿ ಮುರ್ಮು ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಲು ಆಡ್ಸ್-ಆನ್ ಫೇವರಿಟ್ ಆಗಿರುವ ಸಾಧ್ಯತೆ ಮೊದಲಿನಿಂದಲೂ ಇತ್ತು. ಜಾರ್ಖಂಡ್‌ನ ಮಾಜಿ ಗವರ್ನರ್ (Governor) ದ್ರೌಪದಿ ಮುರ್ಮು ಅವರು ಈ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದು ಇವರು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.


ಜುಲೈ 18ರಂದು ನಡೆದಿತ್ತು ಮತದಾನ


ಫಲಿತಾಂಶ ಪ್ರಕಟವಾದ ನಂತರ ಸ್ಥಳೀಯ ಬಿಜೆಪಿ ಮುರ್ಮು ವಿಜಯೋತ್ಸವವನ್ನು ಯೋಜಿಸಿದೆ. ಜುಲೈ 18 ರಂದು, ದೇಶಾದ್ಯಂತ ಎಲ್ಲಾ ಚುನಾಯಿತ ಶಾಸಕರು ಮತ್ತು ಸಂಸದರು ರಾಮ್ ನಾಥ್ ಕೋವಿಂದ್ ಅವರ ನಂತರದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳು ಸೇರಿದಂತೆ 31 ಸ್ಥಳಗಳಲ್ಲಿ ಮತ ಚಲಾಯಿಸಿದ್ದರು.


ಒಟ್ಟು ಶೇ.98.91 ಮತದಾನ


ಸಂಸತ್ ಭವನದಲ್ಲಿ ಮತದಾನ ಮಾಡಲು ಚುನಾವಣಾ ಆಯೋಗದಿಂದ ಅನುಮತಿ ಪಡೆದ 727 ಸಂಸದರು ಮತ್ತು ಒಂಬತ್ತು ಶಾಸಕರನ್ನು ಒಳಗೊಂಡ 736 ಮತದಾರರಲ್ಲಿ 728 ಮತದಾರರು ಮತ ಚಲಾಯಿಸಿದ್ದಾರೆ. ಸಂಸತ್ ಭವನದಲ್ಲಿ ಒಟ್ಟು ಶೇ.98.91 ಮತದಾನವಾಗಿದೆ.


ದ್ರೌಪದಿ ಮುರ್ಮು


ದ್ರೌಪದಿ ಮುರ್ಮು ಅವರು ಭಾರತದ ಮುಂದಿನ ರಾಷ್ಟ್ರಪತಿಯಾಗುತ್ತಾರೆ ಎಂಬ ಭರವಸೆಯಿದ್ದ ಕಾರಣ ಪ್ರದೇಶದಲ್ಲಿ ಮೊದಲಿಂದಲೇ ಸಂಭ್ರಮದ ವಾತಾವರಣವಿತ್ತು. ಇದು ಬುಡಕಟ್ಟು ಸಮುದಾಯ, ಒಡಿಶಾ ಮತ್ತು ದೇಶಕ್ಕೆ ಹೆಮ್ಮೆಯ ವಿಷಯ ಎಂದು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸಹೋದರ ತಾರಿನಿಸೇನ್ ತುಡು ಹೇಳಿದ್ದರು.


ಶುಭಾಶಯ ತಿಳಿಸಿದ ರಾಜ್​ನಾಥ್ ಸಿಂಗ್


ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಅವರು ಹಳ್ಳಿಗಳ, ಬಡವರು, ವಂಚಿತರ ಕಲ್ಯಾಣಕ್ಕಾಗಿ ಕೆಲಸ ಮಾಡುವಲ್ಲಿ ಸಕ್ರಿಯರಾಗಿದ್ದಾರೆ. ಅದೇ ಜನರ ಮಧ್ಯೆ ಏರುತ್ತಿರುವ ಅವರು ಇಂದು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ತಲುಪಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಪುರಾವೆಯಾಗಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.


NDA ಅಧ್ಯಕ್ಷೀಯ ಅಭ್ಯರ್ಥಿ #DroupadiMurmu ಮೂರನೇ ಸುತ್ತಿನ ಎಣಿಕೆಯ ಕೊನೆಯಲ್ಲಿ ಒಟ್ಟು ಮಾನ್ಯ ಮತಗಳ 50% ಮಾರ್ಕ್ ಗಡಿಯನ್ನು ದಾಟಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ 17 ಸಂಸದರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Presidential Election Result: ದ್ರೌಪತಿ ಮುರ್ಮು ರಾಷ್ಟ್ರಪತಿಯಾದ್ರೆ ಈ 5 ದಾಖಲೆಗಳೂ ಸೃಷ್ಟಿಯಾಗುತ್ತೆ!


ಯಾರಿಗೆ ಎಷ್ಟು ಮತ


ಮೂರನೇ ಸುತ್ತಿಗೆ ದ್ರೌಪದಿ ಮುರ್ಮು 812, ಯಶವಂತ್ ಸಿನ್ಹಾ 521 ಮತಗಳನ್ನು ಪಡೆದರು. ಮುರ್ಮು 10 ರಾಜ್ಯಗಳ ಒಟ್ಟು 1138 ಶಾಸಕರ ಪೈಕಿ 809 ಶಾಸಕರ ಮತಗಳನ್ನು ಪಡೆದರೆ, 1,05,299 ಮತ ಎಣಿಕೆಯೊಂದಿಗೆ, ಸಿನ್ಹಾ ಎರಡನೇ ಸುತ್ತಿನಲ್ಲಿ 44,276 ಮತ ಎಣಿಕೆಯೊಂದಿಗೆ 329 ಶಾಸಕರ ಮತಗಳನ್ನು ಪಡೆದರು.


ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಅವರು ಒಟ್ಟು 5,23,600 ಮತಗಳನ್ನು ಹೊಂದಿದ್ದರು, ಇದು ಒಟ್ಟು ಮತ ಚಲಾಯಿಸಿದ ಸಂಸದರ ಒಟ್ಟು ಮಾನ್ಯ ಮತ ಎಣಿಕೆಯ ಶೇಕಡಾ 72.19 ಆಗಿದೆ.

top videos
    First published: